
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಹುಮುಖ ವ್ಯಕ್ತಿತ್ವದವರು, ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೇ ಅಲ್ಲದೆ ಪರಿಸರ ಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಪ್ರಕೃತಿ ತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಹಲವಾರು ಬದುಕುಗಳನ್ನು ತಮ್ಮಜೀವಾವಧಿಯಲ್ಲಿ ಶೋಧಿಸಿ, ಸಾಧಿಸಿ, ಇತರರಿಗೂ ಅರಿವಾಗಲೆಂದು ತಮ್ಮ ಕೃತಿಗಳಲ್ಲಿ ದಾಖಲಿಸಿದವರು. ಹೇಳಿದಷ್ಟೂ ಮುಗಿಯದ ಇಂತಹ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ಬಿಚ್ಚಿಡುವ ಪ್ರಯತ್ನ ಈ “ತೇಜಸ್ವಿ ಎಂಬ ವಿಸ್ಮಯ” ಸಾಕ್ಷ್ಯಚಿತ್ರ ಸರಣಿ.

‘ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ ಬಹು ನಿರೀಕ್ಷಿತ, ಆರು ಕಂತುಗಳ “ತೇಜಸ್ವಿ ಎಂಬ ವಿಸ್ಮಯ” ಹೆಸರಿನ ಬೃಹತ್ ಸಾಕ್ಷಚಿತ್ರ ಸರಣಿಯ ಮೂಲ ಉದ್ದೇಶ ತೇಜಸ್ವಿಯವರ ಬದುಕು, ಬರಹ ಮತ್ತು ವಿಚಾರಧಾರೆಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು.
ಈ ಸಾಕ್ಷ್ಯ ಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30 ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿಯವರೊಂದಿಗಿನ ತಮ್ಮ ನೆನಪು, ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಈ ಸರಣಿಯ ಪ್ರಾಸ್ತಾವಿಕ ಕಂತು ‘ತೇಜಸ್ವಿ ಎಂಬ ವಿಸ್ಮಯ – ಸಾಕ್ಷ್ಯಚಿತ್ರದ ಮುನ್ನುಡಿ’ ಈಗಾಗಲೇ ಬಿಡುಗಡೆಯಾಗಿದ್ದು ಓದುಗರು, ಸಾಹಿತ್ಯಾಭಿಮಾನಿಗಳು, ವೀಕ್ಷಕರು ಬಹುಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಸಾಕ್ಷ ಚಿತ್ರ ಸರಣಿಯು 28ನೇ ಜುಲೈ 2024 ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ- ಮುಖ್ಯಮಂತ್ರಿ ಹಾಗು ಮಲ್ಲೇಶ್ವರಂನ ಹಾಲಿ ಶಾಸಕರುಗಳಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಅವರಿಂದ ಲೋಕಾರ್ಪಣೆಯಾಗಲಿದೆ. 29 ಜುಲೈ 2024 ರಂದು ಸೋಮವಾರ ಮಧ್ಯಾಹ್ನ 12:00-1:30 ರವರೆಗೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.
‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯಚಿತ್ರ ಸರಣಿಯ ಮೂಲಕ ತೇಜಸ್ವಿಯವರ ಜೀವನ ಮತ್ತು ಕೃತಿಗಳನ್ನು ಸಂಸ್ಮರಿಸಲು, ಆಚರಿಸಲು ಮಾಧ್ಯಮ ಅನೇಕ ಸಂಸ್ಥೆ ನಿಮ್ಮನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತಿದೆ.
ಮಾಧ್ಯಮ ಅನೇಕ ದಿಂದ ‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯ ಚಿತ್ರ ಸರಣಿ, ಡಾ ಸಿ ಎನ್ ಅಶ್ವಥ್ ನಾರಾಯಣ್, ಮಾಜಿ ಉಪಮುಖ್ಯಮಂತ್ರಿ ಹಾಗು ಮಲ್ಲೇಶ್ವರಂ ನ ಹಾಲಿ ಶಾಸಕರು ಅವರಿಂದ ಲೋಕಾರ್ಪಣೆ ಆಗುವುಧು ಎಂದು ಅರವಿಂದ ವೈ ಮೋತಿ,ನಿರ್ದೇಶಕರು, ಮಾಧ್ಯಮ ಅನೇಕಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಿಸಿದರು.
ದಿನಾಂಕ : 28ನೇ ಜುಲೈ 2024, ಭಾನುವಾರ
ಸಮಯ : ಬೆಳಿಗ್ಗೆ 10:00 ಗಂಟೆಗೆ
ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
City Today News 9341997936
