
ಕೇಂದ್ರ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆಯನ್ನು ಕೇಂದ್ರ ಸರ್ಕಾರದಲ್ಲಿ ಜಾರಿ ಗೊಳಿಸಿಲ್ಲವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾನ್ಯ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ರವರು ದೇಶದ ಪರಿಶಿಷ್ಟರಿಗೆ ಸುಮಾರು 6 ಲಕ್ಷ ಕೋಟಿ ವಂಚನೆ ಎಸಗಿದ್ದು ಖಂಡನೀಯ,’ ಸಂವಿಧಾನದ ಅನುಚ್ಛೇದ 46ರ ಪ್ರಕಾರ ದೇಶಾದ್ಯಂತ ಇರುವ ಶೇಕಡಾ 25ರಷ್ಟು ಪರಿಶಿಷ್ಟರಿಗೆ ಕೇಂದ್ರ ಬಜೆಟ್ ನಲ್ಲಿ ಶೇಕಡಾ 25ರಷ್ಟು ಅನುದಾನ ಮೀಸಲು ಇಡುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇವೆ. 2024-25 ಸಾಲಿನ ಕೇಂದ್ರ ಬಜೆಟ್ ಗಾತ್ರವು 48 ಲಕ್ಷ ಕೋಟಿ ಇದ್ದು ಸದರಿ ಕಾಯ್ದೆ ಪ್ರಕಾರ ಪರಿಶಿಷ್ಟರಿಗೆ 1ವರ್ಷಕ್ಕೆ ಸುಮಾರು 6 ರಿಂದ 10 ಲಕ್ಷ ಕೋಟಿ ಅನುದಾನವನ್ನು ಮೀಸಲಿ
ಇಡಬೇಕಿತ್ತು ಆದರೆ ಪ್ರಸುತ್ತ ಬಜೆಟ್ ನಲ್ಲಿ ಪರಿಶಿಷ್ಟರಿಗೆ ಕೇವಲ 58 ಸಾವಿರ ಕೋಟಿ ಅನುದಾನ ಮಂಜೂರಿ ಮಾಡಿ ದೇಶಾದ್ಯಂತ ಕೇಂದ್ರ ಸರ್ಕಾರವು ಪರಿಶಿಷ್ಟರಿಗೆ ಅನ್ಯಾಯ ಎಸಗಿದೆ. ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ದಾರ್ಮಿಕ ಅಲ್ಪಸಂಖ್ಯಾತರು ದೇಶದ ಮೂಲನಿವಾಸಿಗಳಾಗಿದ್ದು ದೇಶಾದ್ಯಂತ ಜಾತಿ ಜನಗಣತಿ ನಡೆಸಿ ಇವರಿಗೆ ಕೇಂದ್ರ ಸರ್ಕಾರವು ಶೇಕಡಾ 75 ರಷ್ಟು ಮೀಸಲಾತಿ ಏರಿಕೆ ಮಾಡಲು ಸಂವಿಧಾನ ತಿದ್ದುಪಡಿ ಮಾಡಬೇಕು. ಕೇಂದ್ರವು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗಿರುವ ಸಾವಿರಾರು ಕೋಟಿ ತೆರಿಗೆ ಹಣದಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲಿನ ಮರುಪಾವತಿಯನ್ನು ಕೇಂದ್ರವು ಮಾಡದೆ ಸಂವಿದಾನದಲ್ಲಿರುವ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಲಾಗಿದೆ ಅಲ್ಲದೆ ರಾಜ್ಯದ ಅಭಿವೃದ್ಧಿಯನ್ನು ನಾಶಪಡಿಸಿರುವುದು ಖಂಡನೀಯ.
ಭ್ರಷ್ಟಾಚಾರದ ಆರೋಪಗಳು:
ಕೇಂದ್ರ ಸರ್ಕಾರಕ್ಕೆ ಸೇರಿದ ಎಮ್.ಜಿ.ರೋಡ್ ನಲ್ಲಿರುವ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಮತ್ತು ಸದರಿ ನಿಗಮದ ವ್ಯವಸ್ಥಾಪಕ ನಿದೇರ್ಶಕ ಪದ್ಮನಾಭ ಮತ್ತು ಪರಿಶಿಷ್ಠ ಪಂಗಡಗಳ ಸಚಿವರಾಗಿದ್ದ ನಾಗೇಂದ್ರ ರವರು ಶಾಮಿಲಾಗಿ ರಾಜ್ಯದ ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಬಡ ಪರಿಶಿಷ್ಟರಿಗೆ ವಿತರಿಸಬೇಕಾಗಿದ್ದ 89 ಕೋಟಿ ಅನುದಾನದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಎಸ್.ಐ.ಟಿ, ಸಿ.ಬಿ.ಐ, ಇ.ಡಿ ತನಿಖಾ ಸಂಸ್ಥೆಗಳು ಘೋಷಿಸಿವೆ. ಎಸ್.ಐ.ಟಿ. ನಿಗಮದ ಪದ್ಮನಾಭ, ನಾಗೇಂದ್ರ ಇವರನ್ನು ಬಂದಿಸಿದೆ. ಆದರೆ ಸದರಿ ತನಿಖಾ ಅಂತಿಮ ವರದಿ ಹೊರಗೆ ಬಂದಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮ್ಯನವರು ಸದರಿ ಭ್ರಷ್ಟಾಚಾರದಲ್ಲಿ ಬಾಗಿಗಳಾಗಿಲ್ಲ ಎಂಬುದನ್ನು ನಮ್ಮ ಸಂಘಟನೆಗಳು ಕಂಡುಕೊಂಡಿವೆ. ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಆ ಬ್ಯಾಂಕ್ ಅಧಿಕಾರಿಗಳು ಆ ಭ್ರಷ್ಟಾಚಾರ ಎಸಗಿ ತಲೆಮರಿಸಿಕೊಂಡಿದ್ದು ಸಿ.ಬಿ.ಐ. ಅವರನ್ನು ಬಂದಿಸಿಲ್ಲ. ಇದರ ನೈತಿಕ ಹೊಣೆ ಹೊತ್ತು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವರಾದ ಮಾನ್ಯ ನಿರ್ಮಲ,’ ಸೀತಾರಾಮನ್ ನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಮೈಸೂರಿನ ಮುಡಾ ನಿವೇಶನ ಹಗರಣ:
ಮೈಸೂರಿನ ಮುಡಾ ನಿವೇಶನ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಿದ್ದಾರೆ ಎಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸದನ ಮತ್ತು ಲೋಕಸಭೆಯಲ್ಲಿ ಹಾಗೂ ಬೀದಿಯಲ್ಲಿ ಹೋರಾಟ ನಡೆಸಿರುವುದನ್ನು ನಮ್ಮ ದಲಿತ ಸಂಘಟನೆಗಳು ವಿರೋದಿಸುತ್ತೇವೆ. ತುಳಿತಕ್ಕೆ ಒಳಗಾದ ಹಿಂದುಳಿದ ಜಾತಿಗೆ ಸೇರಿದ ಸಿದ್ದರಾಮಯ್ಯನವರು 2ನೇ ಅವದಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ಸಂವಿದಾನ ಅನುಷ್ಠಾನಕ್ಕಾಗಿ ಧೀರ ಹೆಜ್ಜೆ ಇಡುತ್ತಿರುವುದನ್ನು ವಿರೋಧಿಸಲು ಸದರಿ ಮನುವಾದಿ ಮೈತ್ರಿ ಪಕ್ಷಗಳು ಅಸೂಯೆಯಿಂದ ಸಿದ್ದರಾಮಯ್ಯನವರ ವಿರುದ್ದ ಸುಳ್ಳು ಅಪರಾದನೆಗಳನ್ನು ಮಾಡುತ್ತಿವೆ. ರಾಜ್ಯದ ಬಹುಸಂಖ್ಯಾಂತ ಶೋಷಿತ ಜಾತಿಗಳ ಬೃಹತ್ ಜನಸಮುದ್ರವು ಸಿದ್ದರಾಮಯ್ಯನವರ ಪರವಾಗಿ ಹೋರಾಟ ಮಾಡಲು ಸಿದ್ದಗೊಂಡಿದೆ ಎಂಬ ಎಚ್ಚರಿಕೆ ನೀಡುತ್ತೇವೆ. ವಿವಾದಿತ ನಿವೇಶನವು ಈ ಮೊದಲು ಅಲ್ಲಿನ ಪರಿಶಿಷ್ಟರಿಗೆ ಸರ್ಕಾರದಿಂದ ಮಂಜೂರವಾದ ಭೂಮಿಯಾಗಿಲ್ಲವಾಗಿ ಅದು ಪಿ.ಟಿ.ಸಿ.ಎಲ್. ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಅಂತೆ ಸಿದ್ದರಾಮಯ್ಯನವರು ಮತ್ತು ಅವರ ಕುಟುಂಬಸ್ಥರು ದಲಿತರ ಭೂಮಿಯನ್ನು ಮೋಸ ಪಡಿಸಿ ಪಡೆದಿಲ್ಲ. ಸದರಿ ವಿವಾದಿತ ಭೂಮಿಯನ್ನು ಸದರಿ ದಲಿತರ ಪಿತ್ರಾಜಿತ ಆಸ್ತಿಯಾಗಿದ್ದು ಸದರಿ ದಲಿತರ ವಂಶವೃಕ್ಷದಲ್ಲಿ ಇರುವ ಎಲ್ಲರು ಸದರಿ ಭೂಮಿಯನ್ನು ಸಿದ್ದರಾಮಯ್ಯ ನವರ ಭಾವ ಮೈದುನ ನಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದು ಅಂತೆ ದಲಿತರಿಗೆ ವಂಚಿಸಿದ್ದು ಕಂಡು ಬರುವುದಿಲ್ಲ. ಮುಡಾ ಸದರಿ ನಿವೇಶನಗಳ ಮಂಜೂರಾತಿಯನ್ನು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದವರಿಗೆ ಸಹ ಮಾಡಿದ್ದು ಇದರಲ್ಲಿ ಅಕ್ರಮ ನಡೆದಿದೆ ಅಥವಾ ಇಲ್ಲವೆಂಬುದನ್ನು ಪ್ರಸುತ್ತ ರಾಜ್ಯ ಸರ್ಕಾರವು ಇದೀಗ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ದೇಸಾಯಿ ಆಯೋಗವು ವಿಚಾರಣೆಯನ್ನು ಮುಗಿಸಿ ಅಂತಿಮ ತಿರ್ಪನ್ನು ಬಹಿರಂಗ ಪಡಿಸಿಲ್ಲ ಅಂತೆ ಮಾನ್ಯ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ/ಭ್ರಷ್ಟಾಚಾರದಲ್ಲಿ ಭಾಗವಹಿಸಿಲ್ಲ ಎಂಬುವುದು ನಮ್ಮ ಸಂಘಟನೆಗಳು ಕಂಡುಕೊಂಡ ಸತ್ಯವಾಗಿದೆ.
ಅಂತೆ ಮಾನ್ಯ ಮುಖ್ಯಂತ್ರಿಗಲಾದ ಸಿದ್ದರಾಮಯ್ಯನವರು, ರಾಜೀನಾಮೆ ಕೊಡುವಂತಹ ಅಪರಾಧವನ್ನೇ ಎಸಗಿಲ್ಲವೆಂಬುವದು ನಮ್ಮ ಸಂಘಟನೆಗಳ ಸ್ಪಷ್ಟ ಅಭಿಪ್ರಾಯವಾಗಿದ್ದು ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸಹ ತನ್ನ ಪಕ್ಷದ ಬೆಳವಣಿಗೆ ದೃಷ್ಟಿ ರಾಜ್ಯದ ಸಮಸ್ತ ಮತದಾರರ ಹಿತಾಶಕ್ತಿ ಕಾಪಾಡುವ ದೃಷ್ಟಿಯಿಂದ ಮಾನ್ಯ ಸಿದ್ದರಾಮಯ್ಯನವರೆನ್ನೆ ಮುಂದಿನ ವಿಧಾನಸಭೆ ಚುನಾವಣೆ ತನಕ ಮುಂದುವರೆಸಬೇಕೆಂದು ನಮ್ಮ ಸಂಘಟನೆಗಳು ಆಗ್ರಹಿಸುತ್ತವೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ, ರಾಜ್ಯ ಸಮಿತಿಯ ಸಂಸ್ಥಾಪಕ ರಾಜಾಧ್ಯಕ್ಷರಾದ ಶ್ರೀಧರ ಕಲಿವೀರ ರವರು ದಲಿತ ನಾಯಕರುಗಳ ಉಪಸ್ಥಿತಿಯಲ್ಲಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
City Today News 9341997936
