
ಕೆ.ಎಸ್.&ಡಿ.ಎಲ್. ಬೆಂಗಳೂರು ಮಾರುಕಟ್ಟೆ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕಾಯಿದೆಗಳನ್ನು ಉಲ್ಲಂಘನೆ ಮಾಡಿ ಕಾರ್ಮಿಕರಿಗೆ ಕಾನೂನಿನ ರೀತಿ ನೀಡಬೇಕಿರುವ ವಾರ್ಷಿಕ ತುಟ್ಟಿಭತ್ಯೆ, ವೇತನ ಹೆಚ್ಚಳ, ಬೋನಸ್ ಕಾಯಿದೆ ಪ್ರಕಾರ ಬೋನಸ್, ಹಕ್ಕಿನ ರಜೆಗಳ ಸವಲತ್ತು ಹಾಗೂ ಕಾರ್ಮಿಕರಿಗೆ ಅರ್ಹ ಸವಲತ್ತುಗಳನ್ನು ನೀಡುತ್ತಿಲ್ಲ.
ಬೆಂಗಳೂರು ಮಾರುಕಟ್ಟೆ ವಿಭಾಗ ಹಾಗೂ ದೇಶದ ಎಲ್ಲಾ ಕಡೆಯ ಮಾರುಕಟ್ಟೆ ನೌಕರರ ನಿರಂತರ ಪರಿಶ್ರಮದಿಂದ ಇಂದು ಕಾರ್ಖಾನೆ 1200 ಕೋಟಿ ಠೇವಣಿಯನ್ನು ಇಡಲಾಗಿದೆ. ಕಾರ್ಮಿಕರಿಗೆ ನೀಡಬೇಕಿರುವ ವೇತನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ, ಸಾರಿಗೆ ಭತ್ಯೆ ಹಾಗೂ ಬೋನಸ್ ಅನ್ನು ನೀಡದೇ ಆಡಳಿತ ವರ್ಗ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಇತ್ಯಾಧಿ ಖರ್ಚುಗಳಿಗೆ ಅವರಿಗೆ ಸಿಗುತ್ತಿರುವ ವೇತನದಿಂದ ಜೀವನ ಮಾಡಲು ಸಾಧ್ಯವಿಲ್ಲ. ಕೆ.ಎಸ್.ಪಿಡಿ.ಎಲ್. ಕಾರ್ಖಾನೆಯಲ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಖಾಯಂ ನೌಕರರಿಗೆ 65,000/- ದಿಂದ 75,000/- ದವರೆಗೆ ವೇತನ ಸಿಗುತ್ತದೆ. ಆದೇ ಕೆಲಸವನ್ನು ಮಾಡುವ ನೇರ ಗುತ್ತಿಗೆ ಕಾರ್ಮಿಕರಿಗೆ ಕೇವಲ 20,000/- ರಿಂದ 25,000/- ವೇತನ ನೀಡಲಾಗುತ್ತಿದೆ. ಇದರಿಂದ ತಿಳಿಯಬಹುದು ಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರ ಶೋಷಣೆ ಅಲ್ಲದೇ ಗುತ್ತಿಗೆ ಕಾರ್ಮಿಕ ಕಾಯಿದೆ 1970ರ ಸೆಕ್ಷನ್ 25(5)ರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಕೆ.ಎಸ್.&ಡಿ.ಎಲ್. ಕಾರ್ಖಾನೆ ಕರ್ನಾಟಕದ ಸಾರ್ವಜನಿಕ ಉದ್ದಿಮೆಯಾಗಿದೆ. ಇದು ಮಾದರಿಯ ಮಾಲೀಕರಾಗಿ ಅರ್ಹ ಸವಲತ್ತುಗಳನ್ನು ನೀಡಬೇಕಿರುವುದು ಸರ್ಕಾರಿ ಸಾಮ್ಯದ ಆದ್ಯ ಕರ್ತವ್ಯವಾಗಿದೆ. ಇದನ್ನು ಉಲ್ಲಂಘನೆ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಈ ಸಾರ್ವಜನಿಕ ಉದ್ದಿಮೆಯಲ್ಲಿ ಕಾಣಬಹುದು.
ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗದ ಕಾರ್ಮಿಕರ ಬೇಡಿಕೆಗಳು :
1) 2023-24ನೇ ಸಾಲಿನ ಇನ್‌ಕ್ರೀಮೆಂಟ್ ಅನ್ನು ಉತ್ಪಾದನಾ ಹಾಗೂ ಇತರೆ ಕಾರ್ಮಿಕರಿಗೆ ನೀಡಿ ಈ ಸವಲತ್ತುಗಳನ್ನು ಮಾರುಕಟ್ಟೆ ನೌಕರರಿಗೆ ನೀಡಬೇಕು.
2) ಮಾರುಕಟ್ಟೆ ನೌಕರರಿಗೆ ಕಳೆದ 8 ವರ್ಷಗಳಿಂದ ಬೋನಸ್ ಕಾಯಿದೆ ಪ್ರಕಾರ ಬೋನಸ್ ನೀಡಬೇಕಿದ್ದರು ಇದನ್ನು ನೀಡಿಲ್ಲ. ಆದ್ದರಿಂದ ಕೂಡಲೇ ನೀಡಬೇಕು.
3) ದೇಶದ ಮುಂಬೈ, ಕಲ್ಕತ್ತಾ, ಚೆನೈ ಹಾಗೂ ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಅಲ್ಲಿನ ನೌಕರರಿಗೆ ಬಡ್ತಿ ನೀಡಿ ಕರ್ನಾಟಕದಲ್ಲಿಯೇ ಬಡ್ತಿ ನೀಡಿಲ್ಲ. ಇದನ್ನು ಕೂಡಲೇ ನೀಡಬೇಕು.
4) ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗಕ್ಕೆ ನೂತನವಾಗಿ ಕೆಲಸಕ್ಕೆ ತೆಗೆದುಕೊಂಡಿರುವ ಜಿ.ಕೆ. ನವೀನ್ ಕುಮಾರ್‌ಗೆ 65000/- ವೇತನ ನೀಡಲಾಗುತ್ತಿದೆ. ಅದೇ ರೀತಿ ಮಾರುಕಟ್ಟೆಯ ಎಲ್ಲಾ ನೌಕರರಿಗೆ 65000/- ವೇತನ ಹೆಚ್ಚಳ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
5) ಮಾರುಕಟ್ಟೆ ಗುರಿಯನ್ನು ವೈಜ್ಞಾನಿಕವಾಗಿ ಹಾಗೂ ಸಂಘದ ಕಾರ್ಮಿಕ ಮುಖಂಡರುಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು.
6) ದೇಶದ ಕಲ್ಕತ್ತಾ, ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದರು ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕರಾಗಲೀ ಅಥವಾ ಇತರೆ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ.
7) ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ನಿವೃತ್ತಿಯಾದ ನೌಕರರನ್ನು ಪುನರ್ ನೇಮಕ ಮಾಡಬಾರದೆಂದು ಸರ್ಕಾರದ
ಆದೇಶವಿದ್ದರು ಕೆ.ಎಸ್.&ಡಿ.ಎಲ್.ನಲ್ಲಿ ನಿವೃತ್ತಿಯಾದ ದಿನಾಂಕದ ವೇತನವನ್ನು ನೀಡಿ ಮುಂದುವರೆಸುವುದನ್ನು ಕೂಡಲೇ ನಿಲ್ಲಿಸಿ ಕೆಲಸದಿಂದ ತೆಗೆಯಲು ಒತ್ತಾಯಿಸಲಾಗಿದೆ.
ಈ ಮೇಲ್ಕಂಡ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಸಂಸ್ಥೆಯ ಮಾನ್ಯ ಅಧ್ಯಕ್ಷರು ವಿದೇಶ ಪ್ರವಾಸದಲ್ಲಿರುವ ಕಾರಣ 12-08-2024ರಂದು ನಡೆಸಬೇಕಿದ್ದ ಧರಣಿ ಮುಷ್ಕರವನ್ನು ಮಾನ್ಯ ಅಧ್ಯಕ್ಷರು ವಿದೇಶದಿಂದ ವಾಪಸ್ ಬಂದ ಕೂಡಲೇ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದಂತ ಜಿ.ಆರ್.ಶಿವಶಂಕರ್ ತಿಳಿಸಿದರು.
City Today News 9341997936
