
ಶತಮಾನಗಳಿಂದ ಈ ದೇಶದ ಪ್ರಜೆಗಳಾಗಿದ್ದರೂ ನಾಗರಿಕ ಮತ್ತು ಮಾನವ ಹಕ್ಕುಗಳು ಕೌಟುಂಬಿಕ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗಿ, ಅಭದ್ರತೆಯಿಂದ ಅಸಡ್ಡೆಗೆ ಒಳಗಾಗಿರುವ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯಕ್ಕೆ ನಮ್ಮ ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯ ವ್ಯವಸ್ಥೆಯು ನಾಗರಿಕ ಮತ್ತು ಮಾನವ ಹಕ್ಕುಗಳನ್ನು ಕೊಡ ಮಾಡಿ ದೇಶದ ಸಮಾನ ಪ್ರಜೆಗಳು ಎಂದು ಘೋಷಿಸಿವೆ.
ದೇಶಭಕ್ತಿ ರಾಜ್ಯಾಭಿಮಾನಗಳು ಗಂಡು ಹೆಣ್ಣುಗಳ ಸೊತ್ತಷ್ಟೇ ಅಲ್ಲದೆ ನಮ್ಮಲ್ಲಿಯೂ ರಾಷ್ಟ್ರಪ್ರೇಮ,ರಾಜ್ಯ ಭಕ್ತಿ ಅಣುವಣುವಿನಲ್ಲಿ ತುಂಬಿದೆ ಎಂದು ಸಾರಿ ಸಾರಿ ಹೇಳಲು 9ನೇ,ಆಗಸ್ಟ್ 2024 ರಂದು ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ತಮ್ಮ ನೈಜ ಧ್ವನಿಯಲ್ಲಿ ಹಾಡಿ ದೇಶವು ನಮ್ಮದು ರಾಜ್ಯವು ನಮ್ಮದು ಇಂದು ತಮ್ಮ ದೇಶಪ್ರೇಮ ರಾಜ್ಯಾಭಿಮಾನಗಳನ್ನು ಅಭಿವ್ಯಕ್ತಿಗೊಳಿಸಿರುವ “ಆಲ್ಬಮ್ ವಿಡಿಯೋ ” ಉದ್ಘಾಟನೆ ಗೌರವಾನ್ವಿತ ಶ್ರೀಯುತ.ಶ್ರೀಮತಿ ಮಾರ್ಗರೆಟ್ ಆಳ್ವ ಘನತೆವೆತ್ತ ಮಾಜಿ ರಾಜ್ಯಪಾಲರು, ಬೆಂಗಳೂರು ಮತ್ತು ಅನೇಕ ಸಾಂವಿಧಾನಿಕ ಸಂಸ್ಥೆಗಳ ರೂವಾರಿಗಳ ಘನ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಆಗಲಿದೆ.


ಹಾಗೆಯೇ ನಮ್ಮ ಕರುನಾಡ ನೆಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರಿಂದ ರಚನೆಗೊಂಡಿರುವ ಈ ಸಮುದಾಯದ ವಿಷಯ ವಸ್ತುವನ್ನೇ ಒಳಗೊಂಡಿರುವ 10 ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವುದು ಅದ್ಭುತ ಘಟ್ಟಕ್ಕೆ ಸಾಕ್ಷಿಭೂತವಾಗಲಿದೆ.
ನಮ್ಮ ಸಮುದಾಯದ ಹಿರಿಯರು, 55 ವರ್ಷಗಳಿಗೂ ಅಧಿಕ ವಯಸ್ಸಿನವರ ತಂಡ ಒಂದು ವಿನೂತನ ಮತ್ತು ವಿಶೇಷವಾದ “ತಲ್ಕಿ ” ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದು, ಈ ಮೂಲಕ ತಮ್ಮ ಭಾವನೆಗಳು, ಹೋರಾಟ ಮತ್ತು ಅಭಿವ್ಯಕ್ತಿಗಳನ್ನು ನವರಸ ಭರಿತವಾಗಿ ಹಂಚಿಕೊಳ್ಳಲಿದ್ದಾರೆ ಎಂದು ಅಕ್ಕೈ ಪದ್ಮಶಾಲಿ, ಚಾಂದಿನಿ, ಕ್ರಿಸ್ಟಿರಾಜ್ ಮತ್ತು ಉಮಾ ರವರುಗಳ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
City Today News 9341997936
