
ಶ್ರೀ ಐ.ಪಿ.ಡಿ. ಸಾಲಪ್ಪ ವರದಿಯ ವಿಚಾರ ಸಂಕಿರಣ-2024
ದಿನಾಂಕ: 14-08-2024 ಬುಧವಾರ
ಸಮಯ: ಬೆಳಗ್ಗೆ 11:00ಕ್ಕೆ
ಸ್ಥಳ : ಗಾಂಧಿ ಭವನ, ವಾಪೂ। ಸಭಾಂಗಣ ಶಿವಾನಂದ ಸರ್ಕಲ್, ಬೆಂಗಳೂರು
ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಇಂದಿಗೆ ಪ್ರಪಂಚದದ್ಯಾಂತ ಪ್ರಸಿದ್ದಿ ಪಡೆದ ಮಹಾನಗರವಾಗಿದೆ. ಈ ಮಹಾನಗರದ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುತ್ತಿರುವವರೇ ಪೌರಕಾರ್ಮಿಕರು, ಪ್ರಮಾಣಿಕ ಸೇವೆ ಬದ್ಧತೆಯಿಂದ ಬಸವಣ್ಣನವರ ತತ್ವವಾದ ‘ದುಡಿಮೆಯೇ ದೇವರೆಂದು’ ಭಾವಿಸಿ ಸ್ವಚ್ಛತೆಯನ್ನು ಮಾಡುತ್ತಿರುವ ಪೌರಕಾರ್ಮಿಕರಿಗೆ ಹೃದಯ ಪೂರ್ವಕ ವಂದನೆಗಳು. ಈ ಪೌರಕಾರ್ಮಿಕ ವೃತ್ತಿಯ ಸೇವೆ ಸಲ್ಲಿಸುತ್ತಿರುವ ಹೆಚ್ಚಿನ ಸಮುದಾಯದವರು ಪರಿಶಿಷ್ಟ ಜಾತಿಯವರು. ಈ
ಸಮುದಾಯದವರು ತಲತಲಾಂತರಗಳಿಂದ ಇದೆ ವೃತ್ತಿಯನ್ನು ಅವಲಂಭಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಜೀವನದ ಪರಿವರ್ತನೆಗಾಗಿ 1929 ರಲ್ಲಿ ಜನಿಸಿದ ಮಹಾನಾಯಕ ಶ್ರೀ ಐ.ಪಿ.ಡಿ ಸಾಲಪ್ಪರವರು ಈ ಸಮಾಜದಲ್ಲಿ ಹುಟ್ಟಿ ವಿದ್ಯಾವಂತರಾಗಿ ಈ ಸಮಾಣದಲ್ಲಿನ ಮೌಡ್ಯ, ಉನಾಗರಿಕತೆ ಇತ್ಯಾದಿಗಳ ಬದಲಾವಣೆಗಾಗಿ ಶಿಕ್ಷಣ ಶಾಲೆಯನ್ನು 1956 ರಲ್ಲಿ ಪ್ರಾರಂಭಿಸಿ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾಗುರುಗಳಾಗಿ ಶಿಕ್ಷಣವನ್ನು ನೀಡಿ, ಅಲ್ಲಂದ ಪರಿವರ್ತನೆಯನ್ನು ಪ್ರಾರಂಭಿಸಿ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್ ರವರಿಂದ ಪ್ರೇರಣೆಗೊಂಡು ಸಮಾಜದಲ್ಲಿನ ಎಲ್ಲಾ ಕೆಟ್ಟ ಚಟಗಳನ್ನು ಬಿಡಿಸುವ ಪರಿವರ್ತನೆಗೆ ನಾಂದಿ ಹಾಡಿದರು. ಇದನ್ನೆಲ್ಲಾ ಗಮನಿಸಿದ ಶ್ರೀ ಬಿ. ಬಸವಲಿಂಗಪ್ಪನವರು ಐ.ಪಿ.ಡಿ ಸಾಲಪ್ಪರವರನ್ನು ಉತ್ತೇಖಿಸಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರಿಂದ ಕರ್ನಾಟಕ ರಾಜ್ಯದ ಪೌರಕಾರ್ಮಿಕರ ಜೀವನದ ಸ್ಥಿತಿಗತಿಗಳನ್ನು ಅರಿತು ಒಂದು ವರದಿಯನ್ನು ರಚಿಸುವಂತೆ ಶ್ರೀ ಐ.ಪಿ.ಡಿ ಸಾಲಪ್ಪ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ, ಸಂಪೂರ್ಣ ಅಂಕಿ ಅಂಶಗಳ ಮಾಹಿತಿಯನ್ನು ವರದಿ ಮುಖಾಂತರ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಿದರು. ಅದರಂತೆ ಸಾಲಪ್ಪರವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪೌರಕಾರ್ಮಿಕರ ಸ್ಥಿತಿಗತಿಗಳನ್ನು ಅಧ್ಯಾಯನ
ಮಾಡಿ, 1976 ರಲ್ಲಿ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಸಮಗ್ರ ನ ಅಂಶಗಳ ವರದಿಯನ್ನು ಸಲ್ಲಿಸಿದರು ಅಂದಿನ
ಕಾಂಗ್ರೆಸ್ ನೇತೃತ್ವದ ದಿ. ದೇವರಾಜ್ ಅರಸ್ ಸರ್ಕಾರ 26 ಅಂಶಗಳನ್ನು ಒಪ್ಪಿ ಅದರಂತೆ ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರದ ಆದೇಶ ಸುತ್ತೋಲೆಯನ್ನು ಹೊರಡಿಸಿರುತ್ತದೆ. ಆದರೆ ಇಚ್ಛಾಶಕ್ತಿ ಇಲ್ಲದ ಅಧಿಕಾರಿಗಳಿಂದ ಪೂರ್ಣ ಪ್ರಮಾಣದ ಬಿ.ಪಿ.ಡಿ ಸಾಲಪ್ಪ ವರದಿಯ ರವಿಯನ್ನು ಕಾರ್ಯಗತ ಮಾಡಿರುವುದಿಲ್ಲ. ಈ ದಿಕ್ಕಿನಲ್ಲಿ ಹಲವಾರು ಸಂಘಟನೆಗಳು ಪ್ರತಿಭಟನೆ, ಹೋರಾಟ ಮತ್ತು ಸತ್ಯಾಗ್ರಹಗಳನ್ನು ನೆಡೆಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅವರಿಗೆಲ್ಲ ನಮ್ಮ ವಂದನೆಗಳು. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಪಾಲಿಕೆ
ಸಂಘಟನೆಗಳೊಂದಿಗೆ ಚರ್ಚಿಸಿ ಐ.ಪಿ.ಡಿ ಸಾಲಪ್ಪ ವರದಿ ಬಗ್ಗೆ ಒಂದು ವಿಚಾರ ಸಂಕೀರ್ಣವನ್ನು ಕಮ್ಮಿಕೊ ಕೊಳ್ಳಲು Seximro ದಿನಾಂಕ 14-08-2024 ಬುಧವಾರ ಬೆಳಗ್ಗೆ: 1000 ರಿಂದ ಶಿವಾನಂದ ಸರ್ಕಲ್ ಬಳಿಯಿರುವ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಹಮ್ಮಿಕೊಂಡಿರುತ್ತೇವೆ. ಈ ವಿಚಾರ ಸಂಕೀರ್ಣಕ್ಕೆ ಕರ್ನಾಟಕ ಸರ್ಕಾರದ ಬೆಂಗಳೂರು ನಗರಾಭಿವೃದ್ಧಿ ಮತ್ತು ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಮಂತ್ರಿಗಳು, ಪೌರಡಳಿತ ಮಂತ್ರಿಗಳು ಹಾಗೂ ನಮ್ಮ ಪರಿಶಿಷ್ಟ ಜಾತಿಯ ಮಂತ್ರಿಗಳು ಮತ್ತು ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಾಲಿಕೆ ಆಡಳಿತಾಧಿಕಾರಿಗಳು ಹಾಗೂ ಗೂ ಮುಖ್ಯ ಆಯುಕ್ತರು ಭಾಗವಹಿಸಲಿದ್ದಾರೆ. ಆದುದರಿಂದ ಪೌರಕಾರ್ಮಿಕರ ಸಮಾಜದ ಚಿಂತಕರು, ಹಿತೈಷಿಗಳು, ಕಾರ್ಮಿಕಕರ ಮುಖಂಡರುಗಳು ಹಾಗೂ ಸಾಲಪ್ಪರವರ ಅಭಿಮಾನಿಗಳು ಈ ಪೌರಕಾರ್ಮಿಕರು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಸಾಲಪ್ಪ ವರದಿ ಸಂಪೂರ್ಣವಾಗಿ ಜಾರಿಗೆ ಬರಲು ಸಹಕರಿಸಬೇಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,ಪೌರಕಾರ್ಮಿಕರು, ನೇರವೇತನ ಪೌರಕಾರ್ಮಿಕರು ಮತ್ತು ಚಾಲಕರ ಶುಚಿಗಾರರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ವಿನಂತಿಸಿದರು.
City Today News 9341997936
