2023-24 ಹಣಕಾಸು ವರ್ಷಕ್ಕಾಗಿ ಏರ್‌ಟೆಲ್ ಅವರ ಎನ್ಎಕ್ಸ್ಟ್ರಾ ಸುಸ್ಥಿರತೆ ವರದಿಯನ್ನು ಬಿಡುಗಡೆಗೊಳಿಸಿದೆ 

⮚ ವರ್ಷದ ಅವಧಿಯಲ್ಲಿ ಎಮಿಷನ್ ಗಳಲ್ಲಿ 163,408 tCO2e ಕಡಿತ
⮚ ನವೀಕರಿಸಬಹುದಾದ ಶಕ್ತಿಯ ಬಳಕೆಯಲ್ಲಿ 41% ಹೆಚ್ಚಳ
⮚ ಒಟ್ಟು ಉದ್ಯೋಗಿಗಳಲ್ಲಿ 30%ರಷ್ಟು ಮಹಿಳಾ ಉದ್ಯೋಗಿಗಳ ಹೆಚ್ಚಳ


ಆಗಸ್ಟ್ 23, 2024: ಇಂದು ಭಾರತಿ ಏರ್‌ಟೆಲ್ ನ ಅಂಗಸಂಸ್ಥೆಯಾಗಿರುವ ಎನ್ಎಕ್ಸ್ಟ್ರಾ ಡೇಟಾ ಲಿಮಿಟೆಡ್(“ಏರ್‌ಟೆಲ್ ಮೂಲಕ ಎನ್ ಎಕ್ಸ್ಟ್ರಾ) 2023-24 ಹಣಕಾಸು ವರ್ಷಕ್ಕಾಗಿ ತನ್ನ ಸುಸ್ಥಿರತೆ ವರದಿಯ 2ನೆಯ ಆವೃತ್ತಿಯನ್ನು ಬಿಡುಗಡೆ ಮಾಡಿತು.

ವರದಿಯು ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ(ಇಎಸ್ಜಿ) ನಿಯತಾಂಕಗಳ ಮೇಲೆ ಎನ್ ಎಕ್ಸ್ಟ್ರಾ ಅವರ ನಿರಂತರ ಮತ್ತು ಹೆಚ್ಚುತ್ತಿರುವ ಗಮನವನ್ನು ಒತ್ತಿಹೇಳಿದೆ. ಇದು ವಿನ್ಯಾಸದಿಂದ ಸಮರ್ಥನೀಯವಾಗಿರುವ, ಅತಿ ಹೆಚ್ಚಿನ ಕೆಲಸದ ಹೊರೆಗಳನ್ನು ಸರಿಹೊಂದಿಸಲು ರಚಿಸಲಾಗಿರುವ ಮತ್ತು ಗ್ರಾಹಕರಿಗೆ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಮೂಲಕ ಅವರಿಗಾಗಿ ತಡೆರಹಿತ ಪ್ರಮಾಣವನ್ನು ನೀಡಲು  ಭವಿಷ್ಯ-ಸಿದ್ಧ, ಡಿಜಿಟಲೀಕರಣಗೊಳಿಸಿದ ಮೂಲಸೌಕರ್ಯವನ್ನು ನಿರ್ಮಿಸಲು ಎನ್ಎಕ್ಸ್ಟ್ರಾಅವರ ಉಪಕ್ರಮಗಳನ್ನು ವಿವರಿಸುತ್ತದೆ.  

ಈ ಕುರಿತು ಮಾತನಾಡಿದ ಏರ್‌ಟೆಲ್ ಅವರ ಎನ್ಎಕ್ಸ್ಟ್ರಾದ ಸಿಇಒ ಆಗಿರುವ ಆಶಿಶ್ ಅರೋರಾ, “ಡೇಟಾ ಕೇಂದ್ರಗಳ ಭವಿಷ್ಯವು ಸುಸ್ಥಿರತೆಯೊಂದಗೆ ಬುದ್ಧಿವಂತ ಮೂಲಸೌಕರ್ಯವನ್ನು ಸರಿಹೊಂದಿಸುವ ನಮ್ಮ ಸಾಮರ್ಥ್ಯವನ್ನು ಆಧರಿಸಿದೆ. ಮೊದಲನೆಯ ದಿನದಿಂದ ನಮ್ಮ ಡೇಟಾ ಕೇಂದ್ರ ನಿರ್ಮಾಣ ಮತ್ತು ಕಾರ್ಯಾಚರಣೆಗಳಿಗೆ ನಮ್ಮ ವ್ಯವಹಾರದ ಮಾಡೆಲ್ ಮತ್ತು ಕಾರ್ಯಾಚರಣೆಗಳಲ್ಲಿ ನವೀನ ಇಎಸ್ಜಿ ಉಪಕ್ರಮಗಳನ್ನು ಸಮಗ್ರಗೊಳಿಸುವುದು ಬಹಳ ಮುಖ್ಯವಾಗಿದೆ. ನಮ್ಮ ಸುಸ್ಥಿರತೆ ವರದಿಯು ಒತ್ತಿಹೇಳುವಂತೆ, ನಾವು ಈ ವರ್ಷದಲ್ಲಿ ‘ಪರಿಸರ, ಸಾಮಾಜಿಕ ಮತ್ತು ಆಡಳಿತ”ದ ಎಲ್ಲಾ ಮೂರು ಸುಸ್ಥಿರತೆ ನಿಯಂತಾಂಕಗಳಾದ್ಯಂತ ನಿರಂತರ ಪ್ರಗತಿಯನ್ನು ಸಾಧಿಸಿದ್ದೇವೆ ಮತ್ತು ಇದನ್ನು ನಮ್ಮ ಮುಖ್ಯ ಕ್ಷೇತ್ರವಾಗಿ ಇರಿಸುವುದನ್ನು ಮುಂದುವರೆಸುತ್ತೇವೆ.” ಎಂದರು.

ವರ್ಷದ ಪ್ರಮುಖ ಸಾಧನೆಗಳು

● ಕಾರ್ಯಾಚರಣೆಯಲ್ಲಿ 220,541 MWh ನವೀಕರಿಸಬಹುದಾದ ಇಂಧನ ಬಳಕೆಗೆ ಪರಿವರ್ತನೆಯಾಗಿದೆ, ಇದು ಕಳೆದ ಹಣಕಾಸು ವರ್ಷಕ್ಕಿಂತ 41% ಹೆಚ್ಚಾಗಿದೆ
● ಇಂಧನ ಬಳಕೆಯಲ್ಲಿ 25% ಏರಿಕೆಯಿದ್ದರೂ ಸಹ 2021 ಹಣಕಾಸು ವರ್ಷಕ್ಕೆ ಹೋಲಿಸಿದರೆ ~4% ಮೂಲಕ ಸ್ಕೋಪ್ 1 ಮತ್ತು 2 ಎಮಿಷನ್ ಗಳಲ್ಲಿ ಕಡಿತ
● ಕಾರ್ಯಸ್ಥಳದಲ್ಲಿ 30% ಹೆಚ್ಚು ಪ್ರಾತಿನಿಧ್ಯದೊಂದಿಗೆ ಮಹಿಳಾ ಉದ್ಯೋಗಿಗಳಲ್ಲಿ ನಿರಂತರ ಏರಿಕೆ ಖಾತ್ರಿಪಡಿಸಲಾಗಿದೆ 
● ಹಣಕಾಸು ವರ್ಷ 2023ರಿಂದ ಹಣಕಾಸು ವರ್ಷ 2026ರವರೆಗೆ ಮಹಿಳಾ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸುವ ಉದ್ದೇಶದೊಂದಿಗೆ, ನೆಕ್ಸ್ಟ್ ವೇವ್ ಉಪಕ್ರಮದ ಪರಿಚಯ -ಇಂಜಿನಿಯರಿಂಗ್ ನಲ್ಲಿ ಮಹಿಳೆಯರಿಗಾಗಿ ವಿಶಿಷ್ಟ ಪ್ರತಿಭೆ ಬೆಳವಣಿಗೆ ಯೋಜನೆ
● ನಿರ್ಮಾಣದಲ್ಲಿ 4.3 ದಶಲಕ್ಷ ಸುರಕ್ಷಿತ-ಉದ್ಯೋಗ ಗಂಟೆಗಳನ್ನು ಖಾತ್ರಿಪಡಿಸಲಾಗಿದೆ
● 99% ಸ್ಥಳೀಯ ನಿಯೋಜನೆಯೊಂದಿಗೆ ಜವಾಬ್ದಾರಿಯುತ ನೇಮಕಾತಿಗೆ ಉತ್ತೇಜನ

  ಪೂರ್ಣ ವರದಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.nxtra.in/documents/Nxtra-Sustainability-Report-2024.pdf

City Today News 9341997936

Leave a comment

This site uses Akismet to reduce spam. Learn how your comment data is processed.