
ಬೆಂಗಳೂರಿನ ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರ ಮಾರ್ಗದರ್ಶನದಲ್ಲಿ ಪ್ರತಿ ಗುರುವಾರದಂತೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಉತ್ಸವಗಳು ಮತ್ತು ಸಹಸ್ರಾರು ಭಕ್ತಾದಿಗಳಿಗೆ “ಅನ್ನಸಂತರ್ಪಣೆ”ಯ ಕಾರ್ಯಕ್ರಮವು ನೆರವೇರಿತು. ಹಾಗೂ ಸಂಜೆ ಭರತನಾಟ್ಯ ಕಾರ್ಯಕ್ರಮವನ್ನು ಕಲಾಯೋಗಿ ವಿದ್ವಾನ್ ಎಸ್. ರಘುನಂದನ್ ಮತ್ತು ಅವರ ಶಿಷ್ಯವೃಂದದ ವಿದ್ಯಾರ್ಥಿಗಳು “ಭರತನಾಟ್ಯ” ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಿಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವೈ.ಕೆ. ಸಂಧ್ಯಾ ಶರ್ಮರವರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936
