ಮೈಸೂರು ಮೆಡಿಕಲ್ ಕಾಲೇಜು;ವೋಲ್ಗಾ ಇನ್ ಪ್ರಾ ನೆರವಿನ ವಿಶ್ವದರ್ಜೆಯ 5ಜಿ ಮತ್ತು ಡಾಟಾ ಸರ್ವಿಸ್ ಗೆ ಮುಖ್ಯಮಂತ್ರಿ ಚಾಲನೆ.

ಬೆಂಗಳೂರು ಸೆಪ್ಟಂಬರ್ 29;   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವೋಲ್ಗ ನೆಟ್ ವರ್ಕ್ ಮತ್ತು ಡಾಟಾ ಸರ್ವಿಸ್ ಗೆ ಚಾಲನೆ ನೀಡಿದರು.

ವೋಲ್ಗಾ ಇನ್ ಪ್ರಾ ಕಂಪನಿ ಹೈದ್ರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯಾಗಿದ್ದು, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವೈದ್ಯರು,ಸಿಬ್ಬಂದಿಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಲು ನೆರವಾಗುವಂತೆ 5ಜಿ ಮತ್ತು ಡಾಟಾ ಸರ್ವಿಸ್ ನಿಂದ ಕಾಲೇಜಿನ ಡಿಜಿಟಲ್ ಮೂಲಭೂತ ಸೌಕರ್ಯ ಮತ್ತು  ಶೈಕ್ಷಣಿಕ ಮತ್ತು ಆರೋಗ್ಯ ಸುರಕ್ಷತಾ ಕಾರ್ಯಗಳಿಗೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡತಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಅತ್ಯಂತ ಹಳೆಯ ಕಾಲೇಜಾಗಿದ್ದು,ಇಡೀ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ,ವೋಲ್ಗಾ ಇನ್ ಪ್ರಾ ಕಂಪನಿ ವೈದ್ಯಕೀಯ  ವಿದ್ಯಾರ್ಥಿಗಳು ಇನ್ನಷ್ಟು ಸಮರ್ಥವಾಗಿ ಅಧ್ಯಯನ ನಡೆಸಲು,ಕಾರ್ಯನಿರ್ವಹಿಸಲು ವಿಶ್ವ ಮಟ್ಟದ ಡಿಜಿಟಲ್ ಮೂಲಸೌಕರ್ಯ ಕಲ್ಪಿಸಿಕೊಡುತ್ತಿದೆ.

ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದ ವೊಲ್ಗಾ ಇನ್ ಪ್ರಾ  ಕಂಪನಿಯ ಮುಖ್ಯಸ್ಥ ಶ್ರೀಧರ್ ರಾವ್ ಸಂತಸ ವ್ಯಕ್ತ ಪಡಿಸಿ, ನಮ್ಮ ಕಂಪನಿಯಿಂದ 5G ನೆಟ್ ವರ್ಕ್ ಹಾಗೂ ಡಾಟಾ ಸರ್ವಿಸ್ ನಿಂದ ವೈದ್ಯಕೀಯ ಕಾಲೇಜು ಇನ್ನಷ್ಟು ಸಬಲೀಕರಣಗೊಳ್ಳುವುದಲ್ಲದೇ, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹ ಬೆಂಬಲ ದೊರೆಯಲಿದೆ, ಹತ್ತು ವರ್ಷಗಳ ಕಾಲ ವೋಲ್ಗಾ ಇನ್ ಪ್ರಾ ಕಂಪನಿಯೇ ತನ್ನ ಸ್ವಂತ ಖರ್ಚಿನಲ್ಲಿ 5ಜಿ ಮತ್ತು ಡಾಟಾ ಸರ್ವಿಸ್ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತ ರಾಥೋಡ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿ‌ ಹಲವು ಪ್ರಮುಖರು ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.