ಕರ್ನಾಟಕದ ಕನ್ನಡಿಗ ಯೂನಿವರ್ಸಲ್ ಸ್ಟಾರ್ ಕಂಠದಲ್ಲಿ ತಲಾ ಅಜಿತ್ @ ಅಜಿತ್ ಕುಮಾರ್

ಕರ್ನಾಟಕದ ಕನ್ನಡಿಗ ಯೂನಿವರ್ಸಲ್ ಸ್ಟಾರ್ ಕಂಠದಲ್ಲಿ ತಲಾ ಅಜಿತ್ @ ಅಜಿತ್ ಕುಮಾರ್

ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಮಾತನಾಡಲು, ಹಾಡಲು ಅಥವಾ ಬರೆಯಲು ಸುಲಭವಾದ ಭಾಷೆಯಂದರೆ ಅದು ಅವರವರ ಮಾತೃ ಭಾಷೆ. ಮಾತೃ ಭಾಷೆಯನ್ನು ಹೊರೆತು ಪಡಿಸಿದರೆ ಅದು ಅವರು ಶಾಲೆಯಲ್ಲಿಯೋ ಅಥವಾ ಸ್ವ ಇಚ್ಛೆಯಿಂದಲೋ ಕಲಿತಿರುವ ಭಾಷೆಯಾಗಿರುತ್ತದೆ ಹೊರೆತು ಬೇರೆ ಯಾವುದೂ ಅಷ್ಟು ಸುಲಭವಲ್ಲ.

ಆದರೆ, ವಿಶೇಷವೆಂಬಂತೆ ಕನ್ನಡ ಮಾತೃ ಭಾಷೆಯ, ನಮ್ಮ ಕರ್ನಾಟಕದ ಮೈಸೂರು ನಗರದಲ್ಲಿ ಹುಟ್ಟಿ, ಸದ್ಯಕ್ಕೆ ಬೆಂಗಳೂರು ನಗರದಲ್ಲಿ ವಾಸವಿರುವ “ಯೂನಿವರ್ಸಲ್ ಸ್ಟಾರ್ ವಿನಯ್ ಕುಮಾರ್ ವಿ ನಾಯಕ್”, ರವರು ತಮಿಳು ಭಾಷೆಯಲ್ಲಿ ಹೊಚ್ಚ ಹೊಸ ಗೀತಿಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಎ.ಕೆ ಅಥವಾ ತಲಾ ಅಜಿತ್ ಅಂತಲೇ ಪ್ರಖ್ಯಾತಿಯಾಗಿರುವ ನಟ ಅಜಿತ್ ಕುಮಾರ್ ರವರ ಅಭಿಮಾನಿಯ ಹೃದಯಾಳದ ಭಾವನೆಯನ್ನು ಒಳಗೊಂಡ ಗೀತೆ, “ತಲಾ ಅಜಿತ್ ಫ್ಯಾನ್ ಡ” ಆಗಿದ್ದು, ಯೂನಿವರ್ಸಲ್ ಸ್ಟಾರ್ ವಿನಯ್ ಕುಮಾರ್ ವಿ ನಾಯಕ್ ಅವರೇ ಈ ಹಾಡನ್ನು ಹಾಡಿದ್ದು, ಸಾಹಿತ್ಯ, ಸಂಗೀತ, ಮಿಕ್ಸಿಂಗ್, ಮಾಸ್ಟರಿಂಗ್, ಸಂಕಲನ, ಪೋಸ್ಟರ್ ಡಿಸೈನ್, ನಿರ್ಮಾಣ, ನಿರ್ವಹಣೆ, ನಿರ್ದೇಶನ ಮತ್ತು ಇತ್ಯಾದಿಯನ್ನು ಬೆಂಗಳೂರಿನ “ವಿನಯ್ ಕುಮಾರ್ ಆಡಿಯೋ” ದಲ್ಲಿ ಮಾಡಿದ್ದಾರೆ. ಉಳಿದಂತೆ ಹಾಡಿನ ರೆಕಾರ್ಡಿಂಗ್ ಕೆಲಸವನ್ನು, ವೋಕಲ್ ರೆಕಾರ್ಡಿಂಗ್ ಇಂಜಿನಿಯರ್ ಆಗಿರುವ “ಅಭಿ ವಿಲ್ಸನ್ ಜೋಸ್” ಅವರು ಬೆಂಗಳೂರಿನ “ಯುವರ್ ಮ್ಯೂಸಿಕ್ ಬೇಸ್ ಸ್ಟುಡಿಯೋ” ದಲ್ಲಿ ಮಾಡಿದ್ದಾರೆ.

ಪ್ರಸ್ತುತ ಲಿರಿಕಲ್ ವಿಡಿಯೋ ಹಾಡನ್ನು “ಟೈಮ್ಸ್ ಆಫ್ ವಿನಯ್”, “ವಿನಯ್ ಕುಮಾರ್ ವಿ ನಾಯಕ್” ಮತ್ತು “ವಿನಯ್ ಕುಮಾರ್ ಆಡಿಯೋ” ಯೂಟ್ಯೂಬ್ ಚಾನಲ್ ಗಳಲ್ಲಿ ನೋಡಿ, ಕೇಳಿ, ಅನಂದಿಸಬಹುದಾಗಿದೆ.

ಹಾಡಿನ ಕೊಂಡಿ ಈ ರೀತಿ ಇದೆ: https://youtu.be/Rg8bsrW-Ctg?si=pOEsPXNP_82WuJIc

https://youtu.be/5DWDRCXfSqM?si=A69gNPIa2li_r84O

https://youtu.be/bdD5YAfDzHc?si=VU6ru-HzH4GfQuGe


City Today News
9341997936

Leave a comment

This site uses Akismet to reduce spam. Learn how your comment data is processed.