
ರೋಟರಿ ಸಂಸ್ಥೆಯು ನಿರಂತರವಾಗಿ 119 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು. ಈಗ ವಿನೂತನ ಆಸರೆ ಯೋಜನೆಯು ಹಿರಿಯ ನಾಗರಿಕರು ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು,ರೋಟರಿ ಸದಸ್ಯರನ್ನು ಸ್ಥಳೀಯ ಸಮುದಾಯದೊಂದಿಗೆ ಸಂಪರ್ಕಿಸುವ ಮೂಲಕ ರೋಟರಿಯ ಸಾಮಾಜಿಕ ಸೇವೆ ಅಗತ್ಯವಿರುವವರಿಗೆ ತಲುಪಿಸುವಂತದ್ದಾಗಿದೆ .
ಈ ಯೋಜನೆಯ ಎರಡು ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.
1. ತುರ್ತು ವೈದ್ಯಕೀಯ ಸೇವೆ: ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಿಟ್ಟ ಫೋನ್ ಸಂಖ್ಯೆಯನ್ನು ಹೊಂದಿದ್ದು, ತುರ್ತು ಸಹಾಯವನ್ನು ಒದಗಿಸಲು ವಿ-ಮಿಡೋ ವೈದ್ಯಕೀಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.
2. ರೋಟರಿ ಸಂಪರ್ಕಗಳು: ಸಾರ್ವಜನಿಕರಿಗಾಗಿ ಮೀಸಲಿಟ್ಟ ವಾಟ್ಸಾಪ್ ಗುಂಪಿನ ಮೂಲಕ ಸ್ಥಳೀಯ ರೋಟರಿ ಕ್ಲಬ್ಬಿನ ಸದಸ್ಯರೊಂದಿಗೆ ಸಂಪರ್ಕ ಸಾಧಿಸಬಹುದು.ರೋಟರಿ ಯೋಜನೆಗಳನ್ನು ವೀಕ್ಷಿಸಿ, ಪ್ರತಿಕ್ರಿಯೆ ನೀಡಬಹುದು.
ಸ್ಥಳೀಯ ರೋಟರಿ ಕ್ಲಬ್ ನ ಯೋಜನೆಗಳು ಅಥವಾ ವೈಯಕ್ತಿಕ ಅಗತ್ಯತೆಗಳಿಗೆ ಸಹಾಯವನ್ನು ವಿನಂತಿಸಬಹುದು.
ಪ್ರಮುಖ ಪ್ರಯೋಜನಗಳು:
– ಸಾರ್ವಜನಿಕರಿಗೆ ರೋಟರಿ ಕ್ಲಬ್ ನ ಪದಾಧಿಕಾರಿಗಳು ಹಾಗು ಸದಸ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಅವಕಾಶ.
-ಹೆಚ್ಚಿನ ಪಾರದರ್ಶಕತೆ ಮತ್ತು ಸಮುದಾಯದೊಂದಿಗೆ ನಿಕಟ ಸಂಪರ್ಕ.
– ವಿ-ಮಿಡೋ ವೈದ್ಯಕೀಯ ಸೇವೆಗಳ ಮೂಲಕ ತುರ್ತು ವೈದ್ಯಕೀಯ ಸಹಾಯಕ್ಕೆ ಸುಲಭ ಅವಕಾಶ.
ರೋಟರಿಯು ಸ್ಥಳೀಯ ಅಗತ್ಯತೆಗಳಿಗೆ ಸ್ಪಂದಿಸಲು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲಕರ ವಾತಾವರಣ ನಿರ್ಮಾಣ.
3.ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಸರ್ವಿಕಲ್ ಕ್ಯಾನ್ಸೆರ್ ಚುಚ್ಚು ಮದ್ದನ್ನು ನೀಡಲಾಗುವುದು.ಕ್ಯಾನ್ಸೆರ್

ಆಸರೆ ಯೋಜನೆಯು ರೋಟರಿ ಸದಸ್ಯರು ಮತ್ತು ಸಮುದಾಯದ ನಡುವೆ ಅಂತರವನ್ನು ಕಡಿಮೆ ಮಾಡುವ ಮೂಲಕ, ಜವಾಬ್ದಾರಿ, ಕಾಳಜಿ, ಮತ್ತು ಸಂಪರ್ಕದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಇದರಿಂದ, ರೋಟರಿಯ ಇಮೇಜ್ ಮತ್ತು ಪ್ರಭಾವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಸರೆ ಯೋಜನೆಯು,ರೋಟರಿ ಕ್ಲಬ್ಬುಗಳ ಸಂಪರ್ಕಗಳನ್ನು ಇನ್ನಷ್ಟು ಸದೃಢಗೊಳಿಸುವ ಮೂಲಕ, ರೋಟರಿಯ ಪ್ರಮುಖ ಸೇವಾ ಯೋಜನೆಗಳು ಮತ್ತು ತುರ್ತು ಸ್ಪಂದನೆ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜನರ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡುತ್ತದೆ.
ಆಸರೆ ಯೋಜನೆ:
1. ತುರ್ತು ಸಂಖ್ಯೆಯ ನಿರ್ವಹಣೆ:
– ರೋಟರಿ ಕ್ಲಬ್‌ಗಾಗಿನ 24/7 ತುರ್ತು ಸಂಖ್ಯೆಯನ್ನು ಅಧ್ಯಕ್ಷರು ಅಥವಾ ನಿಯೋಜನೆಗೊಂಡ ಮುಖ್ಯಸ್ಥರು ನಿರ್ವಹಿಸುತ್ತಾರೆ.
2. ಸ್ಥಳೀಯ ಸೇವಾ ಸಂಪರ್ಕ:
ಆಯಾ ಪ್ರದೇಶದಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ರೋಟರಿ ಕನೆಕ್ಸ್ ವಾಟ್ಸಾಪ್ ಗುಂಪಿಗೆ ಸೇರಿಸಲು ಸಹಕರಿಸುವುದು
3. ವೈದ್ಯಕೀಯ ತುರ್ತು ಸಮಯದಲ್ಲಿ:
– ಸಾರ್ವಜನಿಕರು ಸಹಾಯಕ್ಕಾಗಿ ರೋಟರಿ ತುರ್ತು ಸಂಖ್ಯೆಗೆ ಕರೆ ಮಾಡಬಹುದು.
– ತುರ್ತು ಸಹಾಯಕ್ಕಾಗಿ ಮಾಡುವ ಕರೆಮಾಡುವಯು ವಿ-ಮಿಡೋ ವೈದ್ಯಕೀಯ ಸೇವೆಗಳಿಗೆ ಸಂಪರ್ಕ ಮಾಡುತ್ತದೆ.
4. ವೈದ್ಯಕೀಯ ಸೇವೆಗಳು:
ವಿ ಮಿಡೋ ಸಂಸ್ಥೆಯೊಂದಿಗೆ ಆನ್‌ಲೈನ್ ವೈದ್ಯರ ಸಮಾಲೋಚನೆಗಳು ಉಚಿತವಾಗಿ ಲಭ್ಯವಿರುತ್ತವೆ.
ತುರ್ತು ಪರಿಸ್ಥಿತಿಗಳಲ್ಲಿ ಆಂಬ್ಯುಲೆನ್ಸ್ ಸೇವೆ ಮತ್ತು ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆ ನಿರಾತಂಕವಾಗಿರುವುದು.
ರೋಟರಿ ಸಂಪರ್ಕಿಸಿ: 9535534666
ಸದಾ ರೋಟರಿ ಸೇವೆಯಲ್ಲಿ,
– ರೊ ಮಹದೇವಪ್ರಸಾದ್ ಎನ್.ಎಸ್. ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ 3192
City Today News 9341997936
