
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕ, ಆಗಮಿಕ ಮತ್ತು ಉಪಾಧಿವಂತರ ಕಷ್ಟ ಕಾರ್ಪಣ್ಯಗಳಿಗೆ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಅವರ ಏಳಿಗೆಗಾಗಿ ಸುಮಾರು 50 ವರ್ಷಗಳಿಂದ ಸರ್ಕಾರದೊಡನೆ ಹೋರಾಡುತ್ತಿರುವ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಹಿಂದೂ ಧಾರ್ಮಿಕ ಸರ್ವ ಸಮಾಜದ ನೌಕರರನ್ನು ಒಳಗೊಂಡಿರುವ ಏಕೈಕ ಸಂಸ್ಥೆಯಗಿರುತ್ತದೆ.
ಕರ್ನಾಟಕದಲ್ಲಿ ಸುಮಾರು 36,615 ದೇವಸ್ಥಾನಗಳಿದ್ದು ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿವೆ. ಇದರಲ್ಲಿ ಎ 205, ಬಿ 193, ಸಿ 36217 ದೇವಸ್ಥಾನಗಳು ಸಿ ವರ್ಗಕ್ಕೆ ಸೇರಿವೆ.
ಒಕ್ಕೂಟದಲ್ಲಿ ಎಲ್ಲಾ ಜಾತಿ, ಎಲ್ಲಾ ಉಪಜಾತಿ ಎಲ್ಲಾ ಜನಾಂಗ ಮತ್ತು ಎಲ್ಲಾ ರೀತಿಯ ಪೂಜಾಚರಣೆಗೆ ಸೇರಿದ ಅರ್ಚಕರೇ ಅಲ್ಲದೇ ಈ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಉದ್ಯೋಗಿಗಳು ಸದಸ್ಯರಾಗಿದ್ದಾರೆ.
ಈ ಒಕ್ಕೂಟದ ಸಂಸ್ಥಾಪಕರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಆರ್.ಗುಂಡೂರಾವ್ ರವರು ಈಗ ಈ ಒಕ್ಕೂಟದ ಗೌರವಾಧ್ಯಕ್ಷರಾದ ಮಾನ್ಯ ದಿನೇಶ್ ಗುಂಡೂರಾಯರು ಅಧ್ಯಕ್ಷರಾದ ಪ್ರೊ.ಡಾ.ಕೆ.ಇ.ರಾಧಾಕೃಷ್ಣ ಮತ್ತು ಮುಖ್ಯಕಾರ್ಯದರ್ಶಿಗಳಾದ ಶ್ರೀ ಕೆ.ಎಸ್.ಎನ್.ದೀಕ್ಷಿತರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಟ್ಟದಲ್ಲಿ ಸಂಘಟಿತವಾಗಿದೆ ಮತ್ತು ಪ್ರತಿ ಜಿಲ್ಲೆಯಲ್ಲಿ ಒಕ್ಕೂಟದ ಶಾಖೆಗಳು ಸಕ್ರಿಯವಾಗಿವೆ.
ಈ ಒಕ್ಕೂಟವು ರಾಜ್ಯಮಟ್ಟದ ಬೃಹತ್ ಸಮ್ಮೇಳನವನ್ನು ಇದೇ ತಾರೀಖು 21ನೇ ಸೋಮವಾರ ಸಂಜೆ 4 ಗಂಟೆಗೆ ಸಂಘಟಿಸಿದೆ.ಬೆಂಗಳೂರು ಪುರಭವನದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತ ಆಗಮಿಸುವ ಸುಮಾರು 3000ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಾರೆ.
ಈ ಸಮ್ಮೇಳನವನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೃಹಮಂತ್ರಿಗಳಾದ ಸನ್ಮಾನ್ಯ ಡಾ.ಜಿ.ಪರಮೇಶ್ವರ್ ಆರೋಗ್ಯ ಸಚಿವರೂ ನಮ್ಮ ಒಕ್ಕೂಟದ ಆದ ಶ್ರೀ ದಿನೇಶ್ ಗುಂಡೂರಾವ್, ವಸತಿ ಸಚಿವರಾದ ಶ್ರೀ ಜಮೀರ್ ಅಹಮದ್ ಖಾನ್, ಶ್ರೀ ಹೆಚ್.ಎಂ.ರೇವಣ್ಣ, ಶ್ರೀ ಕೆ.ಎಂ.ನಾಗರಾಜ್, ಅಸಗೂಡು ಜಯಸಿಂಹ, ಪ್ರೊ.ಕೆ.ಈ.ರಾಧಾಕೃಷ್ಣರುಗಳಲ್ಲದೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರಕುಮಾರ್ ಕಠಾರಿಯಾ ಮತ್ತು ಧಾರ್ಮಿಕ ದತ್ತಿ ಆಯುಕ್ತರಾದ ಡಾ.ಎಂ.ವಿ.ವೆಂಕಟೇಶ್ ಅವರುಗಳು ಭಾಗವಹಿಸಲಿದ್ದಾರೆ.
ತಾವು ತಮ್ಮ ಪತ್ರಿಕಾ ವರದಿಗಾರರು ಛಾಯಾಗ್ರಾಹಕರು ಮತ್ತು ವಿದ್ಯುನ್ಮಾನ ಮಾಧ್ಯಮದ ವರದಿಗಾರರನ್ನು ಈ ಸಮ್ಮೇಳನಕ್ಕೆ ಕಳುಹಿಸಿ, ಸೂಕ್ತ ಪ್ರಚಾರ ನೀಡಬೇಕೆಂದು ವಿನಂತಿ ಮಾಡುತ್ತೇನವೆ ಎಂದು ಶ್ರೀ ಕೆ.ಎಸ್.ಎನ್.ದೀಕ್ಷಿತ್ ಮುಖ್ಯಪ್ರಧಾನ ಕಾರ್ಯದರ್ಶಿಗಳು,ಪ್ರೊ.ಡಾ.ಕೆ.ಈ.ರಾಧಾಕೃಷ್ಣ ಅಧ್ಯಕ್ಷರು ಹಾಗೂ ಒಕ್ಕೂಟದ ಮುಖಂಡ ರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936
