ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಶ್ರೀಮತಿ ಎಚ್.ಜಿ. ಸುಶೀಲಮ್ಮ ಅವರಿಗೆ “ಸೇವಾ ಬಂಗಾರ” ಪ್ರಶಸ್ತಿ.

ಬಂಗಾರಪ್ಪ ಅವರನ್ನು ಬಿಟ್ಟು ಕರ್ನಾಟಕ ರಾಜಕೀಯ ಚರಿತ್ರೆಯನ್ನು ಊಹಿಸಲು ಸಾಧ್ಯವಿಲ್ಲ, ಅಂತಹ ಚರಿತ್ರೆ ಕರ್ನಾಟಕ ರಾಜಕೀಯ ಚರಿತ್ರೆ ಆಗುವುದೂ ಇಲ್ಲ. ಈ ನಾಡಿನ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಬಂಗಾರಪ್ಪನವರು ಕರ್ನಾಟಕ ಕಂಡ ಬಹುದೊಡ್ಡ ಸಮಾಜವಾದಿ ಚಿಂತಕರು ಮಾತ್ರವಲ್ಲ, ಸಾಂಸ್ಕೃತಿಕ ವಕ್ತಾರರು ಕೂಡ. ಮುಖ್ಯಮಂತ್ರಿಯಾಗಿ ಅವರು ರೂಪಿಸಿದ ನೂರಾರು ಯೋಜನೆಗಳು ಇಂದಿಗೂ ರಾಷ್ಟ್ರಕ್ಕೆ ಮಾದರಿಯಾಗಿವೆ. ಇಂದು ಬಂಗಾರಪ್ಪ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಬಿಟ್ಟು ಹೋದ ತತ್ವಾದರ್ಶಗಳು ಸದಾ ನಮ್ಮೊಂದಿಗಿವೆ.

ಪ್ರತಿವರ್ಷ ಬಂಗಾರಪ್ಪ ವಿಚಾರ ವೇದಿಕೆ ಮತ್ತು ಬಂಗಾರಪ್ಪ ಪ್ರತಿಷ್ಠಾನ ಸಂಯುಕ್ತವಾಗಿ ಅವರ ಜನ್ಮ ದಿನಾಚರಣೆಯನ್ನು ಆಯೋಜಿಸುತ್ತಿದೆ. ವಿಚಾರ ಸಂಕಿರಣ, ಬೃಹತ್ ಸಮಾರಂಭದ ಜೊತೆಗೆ ಈ ನಾಡಿನ ಅನನ್ಯ ಚೇತನಗಳಿಗೆ ಬಂಗಾರಪ್ಪ ಅವರ ಹೆಸರಿನಲ್ಲಿ “ಬಂಗಾರ” ಪ್ರಶಸ್ತಿ ನೀಡುತ್ತಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಫಲಕದೊಂದಿಗೆ ಪ್ರಶಸ್ತಿ ಪುರಸ್ಕೃತರವನ್ನು ಗೌರವಿಸಲಾಗುತ್ತದೆ.

ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಶ್ರೀಮತಿ ಎಚ್.ಜಿ. ಸುಶೀಲಮ್ಮ ಅವರಿಗೆ “ಸೇವಾ ಬಂಗಾರ” ಪ್ರಶಸ್ತಿ.

2024ರ ಸಾಲಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸಾಹಿತಿ ಶ್ರೀ ಕುಂ. ವೀರಭದ್ರಪ್ಪ ಅವರಿಗೆ “ಸಾಹಿತ್ಯ ಬಂಗಾರ” ಪ್ರಶಸ್ತಿ.

ರಂಗಭೂಮಿಯಲ್ಲಿನ ಸೇವೆಗಾಗಿ ಗ್ರಾಮೀಣ ರಂಗಭೂಮಿಯ ಪೌರಾಣಿಕ ನಾಟಕದ ಕಲಾವಿದೆ ಶ್ರೀಮತಿ ಪ್ರತಿಭಾ ನಾರಾಯಣ್ ಅವರಿಗೆ “ಕಲಾಬಂಗಾರ” ಪ್ರಶಸ್ತಿ ನೀಡಲಾಗುವುದು.

ಈ ಕಾರ್ಯಕ್ರಮವನ್ನು ಶ್ರೀ ಬಂಗಾರಪ್ಪನವರ ಹುಟ್ಟುಹಬ್ಬದ ದಿನವಾದ 26-10-2024ನೇ ಶನಿವಾರದಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆಯೋಜಿಸಲಾಗಿದೆ.

ಸನ್ಮಾನ್ಯ ಗೃಹಮಂತ್ರಿಗಳಾದ ಡಾ. ಜಿ.ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಚಿವ ಶ್ರೀ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿರುತ್ತಾರೆ. ವೇದಿಕೆ ಅಧ್ಯಕ್ಷ ಶ್ರೀ ವೇಣುಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರೆಡ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀ ಎಸ್.ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ತಿಳಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.