ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿರುವ 51 ಎಸ್.ಸಿ./ಎಸ್.ಟಿ. ಅಲೆಮಾರಿ ಸಮುದಾಯಕ್ಕೆ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ជ ២០៩ ab, (interse backwardness) ಸಾಬೀತು ಪಡಿಸಿ ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಅಲೆಮಾರಿ ಸಮುದಾಯಗಳ ಮೀಸಲಾತಿಯನ್ನು ಕನಿಷ್ಠ 35 ಕಲ್ಪಿಸಿಕೊಡಬೇಕು

ಕರ್ನಾಟಕ ರಾಜ್ಯದಲ್ಲಿರುವ 101 ಪ.ಜಾತಿಯ ಪಟ್ಟಿಯಲ್ಲಿ 51 ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಸಿಳ್ಳೇಕ್ಯಾಶಾಸ್, ಬುಡ್ಗಜಂಗಮ, ಸುಡುಗಾಡುಸಿದ್ದ, ಚನ್ನದಾಸರ್, ದೊಂಬರು, ಘಂಟಿಚೋರ್, ಕೊರಮ, ಕೊರಚ, ಮಾಂಗ್ ಗಾರುಡಿ, ಮುತ್ರಿ, ಅಬೇಲ, ಹಳ್ಳೇರ್, ನಲಿಕೆಯವ, ಸಿಂಧೋಳ್ಳು ಚಿಂಧೋಳ್ಳು, ಇತ್ಯಾದಿ 51 ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಬುಡಕಟ್ಟು, ಮೇದ, ಹಕ್ಕಿಪಿಕ್ಕಿ, ಇರುಳಿಗ, ರಾಜಗೊಂಡ, ಪಾರಿ, ಚೆಂಚು, ಹರಿಣಿಶಿಕಾರಿ, ಮಲೆಕುಡಿಯ, ಕಮ್ಮಾರ, ಹರಣಿಶಿಕಾರಿ, ದುಂಗಿಗರಾಸಿಯಾ ಇತ್ಯಾದಿ 23 ಬುಡಕಟ್ಟು ಹೀಗೆ ಒಟ್ಟು 74 ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿ ಇಂದಿಗೂ ಟೆಂಟು, ಗುಡಿಸಲು, ಹಾಡಿ ಪೋಡುಗಳಲ್ಲಿ ಪಾರಂಪರಿಕ ವೃತ್ತಿಗಳನ್ನು ಅವಲಂಬಿಸಿ ಅಸಂಘಟಿತರಾಗಿ ಬದುಕುತ್ತಿದ್ದಾರೆ. ಇವರು ಕಳೆದ 70 ವರ್ಷದಲ್ಲಿ ಯಾವುದೇ ಮೀಸಲಾತಿ ಸಿಗದೇ ಔದ್ಯೋಗಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಎಲ್ಲೂ ಇವರ ದತ್ತಾಂಶವಿಲ್ಲದ ಕಾರಣ ಮೀಸಲಾತಿಯಿಂದ ವಂಚಿತರಾಗಿ ನಿರ್ಲಕ್ಷಿಸಲ್ಪಟ್ಟಿರುತ್ತಾರೆ. ಮುಂದುವರೆದು ದೇವಿಂದರ್ ಸಿಂಗ್ ಮತ್ತು ಪಂಜಾಬ್ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಲ್ಲರಿಗೂ ತಿಳಿದ ಸಂಗತಿ.

ತೀರ್ಪಿನ ಮುಖ್ಯಾಂಶಗಳನ್ನು ಹೇಳುವುದಾದರೆ..

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇರುವ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ “ಅಂತರ್ ಹಿಂದುಳಿದಿರುವಿಕೆ ಯನ್ನು (interse backwardness) ಸಾಬೀತು ಪಡಿಸಬೇಕು. ಅಗತ್ಯ ಸಮೀಕ್ಷೆ/ ಅಧ್ಯಯನದ ಮೂಲಕ ಇದನ್ನು ಪತ್ತೆ ಹಚ್ಚಬೇಕು.

2. “ವಾಸ್ತವಿಕ ದತ್ತಾಂಶಗಳ (empirical data) ಆಧಾರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಸಾಬೀತುಪಡಿಸಬೇಕು.

3. ಆನಂತರದಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ಆಧಾರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗೀಕರಣ ಮಾಡಬಹುದು.

4. ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ಈ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ನಿರ್ವಹಿಸಬೇಕು. ಯಾವುದೇ ಸಮುದಾಯಗಳಿಗೆ ಅನಾನುಕೂಲ ಮಾಡುವ ಅಥವಾ ಸಮುದಾಯಗಳನ್ನು ಅವಕಾಶ ಮತ್ತು ಹಕ್ಕುಗಳಿಂದ ಹೊರಗಿಡುವ ಕಾರ್ಯವನ್ನು ಮಾಡಬಾರದು.

5. ರಾಜ್ಯ ಸರ್ಕಾರಗಳು ಮಾಡಬಹುದಾದ ವರ್ಗೀಕರಣ ಪ್ರಕ್ರಿಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ.

ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಈ ಮೇಲಿನ ಅಂಶಗಳಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ರಾಜ್ಯ ಸರ್ಕಾರಗಳು ನ್ಯಾಯಾಲಯದ ನಿರ್ದೇಶನದ ಈ ಅಂಶಗಳನ್ನು ಪೂರೈಸಬೇಕು.

ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವಿಕ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತು ಪಡಿಸಬೇಕು. ಇದನ್ನು ಸಾಬೀತು ಪಡಿಸಲು ರಾಜ್ಯ ಸರ್ಕಾರದ ಬಳಿ ಇಲ್ಲಿಯವರೆಗೆ ಯಾವುದೇ ಅಧ್ಯಯನ, ಸಮೀಕ್ಷೆ, ಸುಲನೆ ಮಾಡಿರುವ ವರದಿಗಳು ಇರುವುದಿಲ್ಲ. ಸಮುದಾಯಗಳ ತಲಾ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗಳ ಒಳಗೊಂಡಿರುವ ಅಲೆಮಾರಿಗಳ ವಾಸ್ತವಿಕ ದತ್ತಾಂಶಗಳು ಸರ್ಕಾರದ ಬಳಿ ಇಲ್ಲ. ಜಾತಿಗಳನ್ನು ವರ್ಗೀಕರಿಸಲು ಅಗತ್ಯವಿರುವ ಕುಲಶಾಸ್ತ್ರ ಅಧ್ಯಾಯನ, ಸಾಮಾಜಿಕ ಮತ್ತಿತರ ಅಂಶಗಳನ್ನು ಸಾಕಾರಗೊಳಿಸಬಹುದಾದ ವೈಜ್ಞಾನಿಕ ಮತ್ತು ಒಪ್ಪಿತ ವರದಿಗಳು ಸರ್ಕಾರದಲ್ಲಿ ಇರುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳ ಅಗತ್ಯವಿದೆ. ವಿವಿಧ ರಾಜ್ಯಗಳು ಮತ್ತು ಸರ್ವ ಪಕ್ಷಗಳ ಅಭಿಪ್ರಾಯಗಳು ಕೂಡ ಇಲ್ಲಿ ಬೇಕಾಗಬಹುದು. ಕಾನೂನು ಮತ್ತು ಸಮಾಜಶಾಸ್ತ್ರ ತಜ್ಞರ ಅಭಿಪ್ರಾಯ ಕೂಡ ಅನಿವಾರ್ಯ.

ಈ ವರ್ಗೀಕರಣ ಪ್ರಕ್ರಿಯೆಗೆ ಸಹಕಾರಿ ಆಗುವಂತೆ ಹರಿಯಾಣ ರಾಜ್ಯ ಸರ್ಕಾರ ಹೊಸ ಆಯೋಗ ರಚಿಸಲು ನಿರ್ಧಾರ ಮಾಡಿರುವುದು ತಿಳಿದ ಸಂಗತಿ,

ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಅಂಶಗಳ ದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸದೊಂದು ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಈಗಾಗಲೇ ನಮ್ಮ ಬೇಡಿಕೆಯಂತೆ ಅಲೆಮಾರಿಗಳಿಗೆ ಪ್ರತ್ಯೇಕ ಎಸ್.ಸಿ/ಎಸ್‌.ಟಿ ಅಲೆಮಾರಿಗಳ ಆಯೋಗಕ್ಕಾಗಿ ಬೇಡಿಕೆ ಇಡಲಾಗಿತ್ತು ಆದರೆ ಸರ್ಕಾರವು ಕಳೆದ ಬಜೆಟ್‌ನಲ್ಲಿ ಎಸ್.ಸಿ/ಎಸ್‌.ಟಿ ಅಲೆಮಾರಿ ಆಯೋಗದ ಬದಲಿಗೆ ಹಿಂದುಳಿದ ವರ್ಗದ ಅಲೆಮಾರಿಗಳ ಆಯೋಗ ರಚನೆ ಮಾಡಿದೆ ಅದೇ ಮಾದರಿಯಲ್ಲಿ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಆಯೋಗದ ರಚನೆ ಮಾಡಿ ಸಮುದಾಯಗಳ ಸ್ಥಿತಿಗತಿಗಳನ್ನು ಅರಿತು ಕನಿಷ್ಠ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳಿಗೆ 3% ಮೀಸಲಾತಿ ಕಲ್ಪಿಸಿಕೊಡಬೇಕೆಂದು ಈ ಮೂಲಕ ನಮ್ಮ ಎಸ್.ಸಿ/ಎಸ್.ಟಿ ಅಲೆಮಾರಿ ಸಮುದಾಯಗಳ ಪರವಾಗಿ ಆಗ್ರಹಿಸುತ್ತದೆ ಎಂದು ಒಕ್ಕೂಟದ ಆಧರ್ಶಯಲ್ಲಪ್ಪ-ಅಧ್ಯಕ್ಷರು,ಬಿ.ಹೆಚ್.ಮಂಜುನಾಥ್-ಪ್ರಧಾನ ಕಾರ್ಯದರ್ಶಿ (ಸಂ), ಹಾಗೂ ಬಸವರಾಜ ನಾರಾಯಣಕರ-ಖಜಾಂಚಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.