ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಕರಣಗಳಲ್ಲಿ ಹೆಚ್ಚಳ, ಮುಂದಿನ ಕೆಲವು ವರ್ಷಗಳಲ್ಲಿ ಪ್ರತಿ ವರ್ಷ 20,000 ಇಂದ 25.000 ಪ್ರಕರಣಗಳ ಹೆಚ್ಚಳ ಸಾಧ್ಯತೆಯಿದ್ದು, ಪ್ರಸ್ತುತ 12 ಲಕ್ಷ ರೋಗಿಗಳಿದ್ದಾರೆ

ಬೆಂಗಳೂರು / ಅಕ್ಟೋಬರ್ 24, 2024: ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ ವರ್ಷವೂ 20,000 ಇಂದ 25,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ದೃಷ್ಟಿ ನಷ್ಟಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಇಡೀ ದೇಶದಲ್ಲಿ ಒಟ್ಟು ಅಂಧತ್ವದ ಪೈಕಿ 7.5% ರಷ್ಟು ಆಗಿದೆ. ಕರ್ನಾಟಕದಲ್ಲಿ, ಕಾರ್ನಿಯಾ ಅಂಧತ್ವದಿಂದಲೇ ಸುಮಾರು 15-20% ಶಾಶ್ವತ ಅಂಧತ್ವ ಪ್ರಕರಣಗಳು ಕಂಡುಬರುತ್ತಿವೆ. ಕಾರ್ನಿಯಾ ಅಂಧತ್ವಕ್ಕೆ ಕಾರಣವು ಇತ್ತೀಚಿನ ವರ್ಷಗಳಲ್ಲಿ ಕೆರಟೈಟಿಸ್, ಕಣ್ಣಿನ ಆಘಾತ ಮತ್ತು ಇತರ ಕಣ್ಣಿಗೆ ಸಂಬಂಧಿಸಿದ ಸಂಕೀರ್ಣತೆಗಳಂತಹ ಸೋಂಕುಕಾರಕ ರೋಗಗಳಿಂದ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಕಂಡಿದೆ. ಆದರೆ, ಸಮಸ್ಯೆ ಇನ್ನೂ ಗಮನಾರ್ಹ ಪ್ರಮಾಣದಲ್ಲಿಯೇ ಇದೆ. ಅದರಲ್ಲೂ ವಿಶೇಷವಾಗಿ, ಕಣ್ಣಿನ ಆರೈಕೆ ಸೌಲಭ್ಯ ಸೀಮಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಪ್ರಮುಖವಾಗಿದೆ. ಪ್ರಸ್ತುತ ನಡೆಯುತ್ತಿರುವ ಅಂಧತ್ವ ಜಾಗೃತಿ ಮಾಸದ ವೇಳೆ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರಿನ ಕಾರ್ನಿಯಾ ಮತ್ತು ರಿಫ್ರಾಕ್ಟಿವ್ ಐ ಸರ್ಜನ್ ಡಾ. ಸಂಜನಾ ವತ್ಸ ಹೇಳಿದ್ದಾರೆ.
ಕೆರಟೈಟಿಸ್ ಸಾಮಾನ್ಯವಾಗಿ ಸಣ್ಣ ಕಿರಿಕಿರಿ, ಕೆಂಪಾಗುವಿಕೆ ಅಥವಾ ದೃಷ್ಟಿ ದೋಷದಿಂದ ಆರಂಭವಾಗುತ್ತದೆ. ಚಿಕಿತ್ಸೆ ನೀಡದೇ ಇದ್ದರೆ, ತೀವ್ರ ಗೀರು ಅಥವಾ ಕಾರ್ನಿಯಾ ಒಪಾಸಿಟಿಗೆ ಕಾರಣವಾಗುತ್ತದೆ. ನಂತರದಲ್ಲಿ ಭಾಗಶಃ ಅಥವಾ ಸಂಪೂರ್ಣ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಆದರೆ, ಸೋಂಕು ಇದ್ದರೆ ಅಥವಾ ಸಣ್ಣ ಪ್ರಮಾಣದ ಗಾಯಗಳಿದ್ದರೆ, ಕಾರ್ನಿಯಾಗೆ ಆಳವಾಗಿ ಹಾನಿ ಮಾಡದೇ ಇದ್ದರೆ, ಮೊದಲೇ ಚಿಕಿತ್ಸೆ ಪಡೆದರೆ ರೋಗಿಗಳಲ್ಲಿ ಇದರ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದರೆ, ಗ್ರಾಮೀಣ ಪ್ರದೇಶಗಳು ಅಥವಾ ಸೇವೆ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿನ ಹಲವು ರೋಗಿಗಳಲ್ಲಿ ಮರಳಿಸಲಾಗದಂತಹ ಅಂಧತ್ವ ಉಂಟಾಗುತ್ತದೆ.
ಈ ಸ್ಥಿತಿಯ ಬಗ್ಗೆ ಮಾತನಾಡಿದ ಮುಂಬೈನ ವಡಾಲಾದಲ್ಲಿರುವ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕ್ಯಾಟರ್ಯಾಕ್ಟ್ ಸರ್ಜನ್ ಡಾ. ಸ್ಮಿತ್
ಬವಾರಿಯಾ “ಭಾರತದಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣಗಳಲ್ಲಿ ಕಾರ್ನಿಯಾ ಅಂಧತ್ವವೂ ಒಂದಾಗಿದೆ. ಸುಮಾರು 12 ಲಕ್ಷ ಜನರಿಗೆ ಇದು ಬಾಧಿಸಿದೆ. ಟ್ರಾಕೋಮಾ ಮತ್ತು ಕೆರಟೈಟಿಸ್, ಔದ್ಯಮಿಕ ಮತ್ತು ಕೃಷಿ ಸೆಟ್ಟಿಂಗ್‌ಗಳಲ್ಲಿನ ಕಣ್ಣಿನ ಗಾಯಗಳು ಮತ್ತು ವಿಟಾಮಿನ್ ಎ ಕೊರತೆಯಂತಹ ಕಾರಣಗಳಿಂದಾಗಿ ಭಾರತದಲ್ಲಿ ಕಾರ್ನಿಯಾ ಅಂಧತ್ವದ ಪ್ರಮಾಣ ಹೆಚ್ಚಿದೆ. ಶುಚಿತ್ವ ಸಮಸ್ಯೆ, ವಿಳಂಬವಾಗಿ ಚಿಕಿತ್ಸೆ ಪಡೆಯುವುದು ಮತ್ತು ಆರೋಗ್ಯ ಸೇವೆ ಸೂಕ್ತವಾಗಿ ಲಭ್ಯವಿಲ್ಲದಿರುವುದು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳು ಮತ್ತು ಕೆಲಸ ಮಾಡುವ ವಯಸ್ಕರು ಆಪೌಷ್ಠಿಕತೆ, ಪದೇ ಪದೇ ಕಣ್ಣಿಗೆ ಗಾಯವಾಗುವುದು, ಆರೋಗ್ಯ ಸೇವೆ ಸರಿಯಾಗಿ ಲಭ್ಯವಿಲ್ಲದಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಣ್ಣಿನ ಸ್ಥಿತಿಗತಿಗಳು ಕ್ಷೀಣಿಸಿರುವುದರಿಂದ ವೃದ್ಧರೂ ಕೂಡಾ ಅಪಾಯದಲ್ಲಿರುತ್ತಾರೆ. ಒಟ್ಟಾರೆಯಾಗಿ, ಭಾರತದ ಒಟ್ಟು ಜನಸಂಖ್ಯೆಯ 1-2% ಜನರು ಕಾರ್ನಿಯಾ ಅಂಧತ್ವ ಉಂಟಾಗುವ ಅಪಾಯವನ್ನು ಹೊಂದಿರುತ್ತಾರೆ”.
ಭಾರತದಲ್ಲಿ ಸದ್ಯ ಇರುವ ಕಾರ್ನಿಯಾ ಅಂಧತ್ವದ ಪತ್ತೆ ವಿಧಾನಗಳ ಪೈಕಿ ಸಂಪೂರ್ಣ ಕಣ್ಣಿನ ತಪಾಸಣೆ, ದೃಶ್ಯ ನಿಖರತೆ ಪರೀಕ್ಷೆ, ಸ್ಲಿಟ್ ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಒಳಗೊಂಡಿದೆ. ಇದು ಕಾರ್ನಿಯಾ ಸ್ಪಷ್ಟತೆಯನ್ನು ವಿಶ್ಲೇಷಣೆ ಮಾಡಲು ಮತ್ತು ಕೆರಟೈಟಿಸ್. ಅಲ್ಲರ್‌ಗಳು ಅಥವಾ ಗೀರುಗಳಂತಹ ಸ್ಥಿತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಸುಧಾರಿತ ಇಮೇಜಿಂಗ್ ತಂತ್ರಗಳಾದ ಆಂಟೆರಿಯರ್ ಸೆಪ್ಟೆಂಟ್ ಆಪ್ಟಿಕಲ್ ಕೊಹರನ್ಸ್ ಟೋಮೋಗ್ರಫಿ (ಎಎಸ್-ಒಸಿಟಿ) ಮತ್ತು ಕಾರ್ನಿಯಾ ಟೋಪೋಗ್ರಫಿಯು ಕಾರ್ನಿಯಾ ದಪ್ಪ ಮತ್ತು ಸುತ್ತಲಿನ ಅಸಹಜತೆಗಳ ವಿವರವಾದ ವಿಶ್ಲೇಷಣೆಯನ್ನು ನೀಡುತ್ತದೆ ಮತ್ತು ನಿಖರ ತಪಾಸಣೆಗೆ ಸಹಾಯ ಮಾಡುತ್ತದೆ. ಕಾರ್ನಿಯಾ ಕಸಿ ಅಥವಾ ಥೆರಪಿ ಮಧ್ಯಪ್ರವೇಶಗಳು ಕೂಡಾ ಡಯಾಬಿಟೀಸ್ ಅಥವಾ ತೀವ್ರ ರೋಗನಿರೋಧಕ ಸಮಸ್ಯೆಗಳಂತಹ ಗಮನಾರ್ಹ ಆರೋಗ್ಯ ಸಮಸ್ಯೆಯನ್ನು ಹೊಂದಿಲ್ಲದ ವ್ಯಕ್ತಿಗಳಲ್ಲಿ ಅತ್ಯಂತ ಯಶಸ್ವಿಯಾಗಿದೆ” ಎಂದು ಡಾ. ಬವಾರಿಯಾ ಹೇಳಿದ್ದಾರೆ.
ಆದಾಗ್ಯೂ, ಆಕ್ಸೆಸಿಬಿಲಿಟಿ ಮತ್ತು ಆರೋಗ್ಯ ಸೇವೆಯಲ್ಲಿನ ವ್ಯತ್ಯಯ ಇನ್ನೂ ಮುಂದುವರಿದಿದ್ದು, ನಿರಂತರ ಮತ್ತು ಟಾರ್ಗೆಟೆಡ್ ಮಧ್ಯಪ್ರವೇಶಗಳ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಹಲವು ರೋಗಿಗಳಿಗೆ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳು ಲಭ್ಯವಿರುವುದಿಲ್ಲ. ಇದರಿಂದಾಗಿ, ಸರಿಪಡಿಸಲಾಗದಷ್ಟು ಕಾರ್ನಿಯಾ ಹಾನಿ ಉಂಟಾಗುತ್ತದೆ.
ಚೆನ್ನೈನ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಹಿರಿಯ ಕಾರ್ನಿಯಾ ಮತ್ತು ವಕ್ರೀಕಾರಕ ಶಸ್ತ್ರಚಿಕಿತ್ಸಕ ವೈದ್ಯಕೀಯ ನಿರ್ದೇಶಕ ಡಾ. ಪ್ರೀತಿ ನವೀನ್ ಹೇಳುವಂತೆ “ಇದರ ಜೊತೆಗೆ, ಆರೋಗ್ಯ ಸೇವೆ ಪೂರೈಕೆದಾರರಿಗೆ ಸೂಕ್ತ ತರಬೇತಿ ಮತ್ತು ಸಂಪನ್ಮೂಲಗಳ ಕೊರತೆಯೂ ಇದೆ. ಇದರಿಂದ ಪರಿಣಾಮಕಾರಿಯಾಗಿ ಕಾರ್ನಿಯಾ ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಕಾರ್ನಿಯಾ ದಾನಿಗಳ ಕೊರತೆಯೂ ಕೂಡಾ ಒಂದು ಪ್ರಮುಖ ಅಡ್ಡಿಯಾಗಿದ್ದು, ಕೆಲವೇ ಆಯೋಜಿತ ಕಾರ್ನಿಯಾ ಕಸಿ ಕಾಠ್ಯಕ್ರಮಗಳು ಚಾಲ್ತಿಯಲ್ಲಿವೆ. ಕಣ್ಣು ದಾನ ಮತ್ತು ಕಾರ್ನಿಯಾ ಕಸಿಯನ್ನು ಉತ್ತೇಜಿಸಲು ಹಲವು ಪ್ರಯತ್ನಗಳು ನಡೆದರೂ, ಕಾರ್ನಿಯಾಗೆ ಇರುವ ಬೇಡಿಕೆಗೆ ಹೋಲಿಸಿದರೆ ದಾನಿಗಳ ಪ್ರಮಾಣ ಕಡಿಮೆ ಇದೆ. 2.00,000 ಕಸಿಗಳ ಅಗತ್ಯವಿದ್ದರೆ ವರ್ಷಕ್ಕೆ 25,000 ಇಂದ 30,000 ವರೆಗೆ ಕಾರ್ನಿಯಾ ದಾನ ನಡೆಯುತ್ತಿದೆ. ಬಡತನ ಮತ್ತು ಅಪೌಷ್ಟಿಕತೆಯಂತಹ ಸಾಮಾಜಿಕ ಆರ್ಥಿಕ ಕಾರಣಗಳು ಕಾರ್ನಿಯಾ ಅಂಧತ್ವದ ಅಪಾಯವನ್ನು ಮೀರಿ ನಿಂತಿವೆ. ಹೀಗಾಗಿ, ಸಮಗ್ರ ತಡೆ ಮತ್ತು ಚಿಕಿತ್ಸೆ ಕ್ರಮಗಳನ್ನು ಅನುಷ್ಠಾನಗೊಳಿಸಲು ಇದು ಕಷ್ಟವಾಗುತ್ತದೆ” ಎಂದಿದ್ದಾರೆ.
ಭಾರತದಲ್ಲಿ ಕಾರ್ನಿಯಾ ಅಂಧತ್ವ ಪ್ರಕರಣಗಳನ್ನು ಕಡಿಮೆ ಮಾಡಲು ಬಹುಮುಖೀನ ಕಾವ್ಯವಿಧಾನ ಅಗತ್ಯವಿದೆ. ವೈಯಕ್ತಿಕ ಮಟ್ಟದಲ್ಲಿ, ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಆಗಾಗ್ಗೆ ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡು ಆರಂಭದ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆ ಮಾಡುವುದು ಮತ್ತು ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಕಣ್ಣಿನ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಕಾರ್ನಿಯಾ ದಾನಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೇಲೆ ಕೇಂದ್ರೀಕರಿಸಿರುವ ಕಾಠ್ಯಕ್ರಮಗಳನ್ನು ಆರಂಭಿಸುವುದು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಳವಾಗಿಸುವುದ ಅತ್ಯಂತ ಮಹತ್ವದ್ದಾಗಿದೆ. ಪೌಷ್ಠಿಕಾಂಶ ಕೊರತೆ ಸಮಸ್ಯೆಗಳನ್ನು ಪರಿಹರಿಸಲು ಕಾಠ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಿಂದ ಕಾರ್ನಿಯಾ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಬಹುದು” ಎಂದು ಡಾ. ಪ್ರೀತಿ ನವೀನ್ ಹೇಳಿದ್ದಾರೆ.
City Today News 9341997936
