

ಆದರ್ಶ ಸುಗಮಸಂಗೀತ ಅಕಾಡೆಮಿಯ ವತಿಯಿಂದ ನೀಡಲಾಗುವ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಗೆ ಗಾಯಕರೂ ಸಂಗೀತ ನಿರ್ದೇಶಕರೂ ಆದ ಪ್ರವೀಣ್ ಪ್ರದೀಪ್ ಸಹೋದರರು ಆಯ್ಕೆಯಾಗಿದ್ದಾರೆ,ಹಿರಿಯ ಗಾಯಕ ಡಾ ಮುದ್ದುಮೋಹನ್ ಅವರು ದಿನಾಂಕ 26/10/2024 ರಂದು ಸಂಜೆ 5.30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು,ಗಾಯಕ ನಗರ ಶ್ರೀನಿವಾಸ ಉಡುಪ,ಪತ್ರಕರ್ತೆ ಪದ್ಮಾ ನಾಗರಾಜ್,ಉದಯಬಾನು ಕಲಾಸಂಘದ ಕಾರ್ಯದರ್ಶಿ ಶ್ರೀ ನರಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಸಮಾರಂಭದ ಅಧ್ಯಕ್ಷತೆಯನ್ನು ಡಾ ಕಿಕ್ಕೇರಿ ಕೃಷ್ಣಮೂರ್ತಿ ವಹಿಸಲಿದ್ದು,ಗಾಯನದಲ್ಲಿ ಶ್ರೀ ಪ್ರಶಾಂತ ಉಡುಪ,ಉಮೇಶ್,ಶೇಷಾದ್ರಿ, ಇಂಚರಾ,ಲೋಚನ್ ಕೃಷ್ಣ,ಹಿಮಾಂಶು, ಪ್ರಖ್ಯಾತ್ ಹಾಗೂ ಅಕಾಡೆಮಿಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಗಾಯನ ಸುಧೆ ಹರಿಸಲಿದ್ದಾರೆ,ವಾದ್ಯ ಸಹಕಾರದಲ್ಲಿ ಪ್ರಖ್ಯಾತ ಕಲಾವಿದರಾದ ಜಯರಾಂ ಆಚಾರ್,ಕಾರ್ತಿಕ್ ಪಾಂಡವಪುರ,ಮಹೇಶ್, ಶಿವಶಂಕರ್ ಸಹಕರಿಸಲಿದ್ದಾರೆ,ಕಾರ್ಯಕ್ರಮವು ಗವಿಪುರ ಗುಟ್ಟಹಳ್ಳಿಯಲ್ಲಿರುವ ಉದಯಬಾನು ಕಲಾಸಂಘದ ಸಭಾಂಗಣದಲ್ಲಿ ನಡೆಯಲಿದ್ದು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
City Today News 9341997936
