ಡೆಟಾಲ್ ಬನೇಗಾ ಸ್ವಸ್ಥ ಇಂಡಿಯಾದಿಂದ ಜಾಗತಿಕ ಕೈತೊಳೆಯುವ ದಿನ 2024 ಆಚರಣೆ, 30 ಮಿಲಿಯನ್ ಮಕ್ಕಳನ್ನು ತಲುಪುವ ಗುರಿ



ಅಕ್ಟೋಬರ್ 25, 2024 – ರೆಕಿಟ್‌ನ ಪ್ರಮುಖ ಅಭಿಯಾನವಾದ ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ (BSI), ಜಾಗತಿಕ ಕೈತೊಳೆಯುವ ದಿನ 2024 ಅನ್ನು ಆಚರಿಸಿತು. ಆರೋಗ್ಯಕರ ಭವಿಷ್ಯಕ್ಕಾಗಿ ಕೈ ತೊಳೆಯುವ ಮಹತ್ವದ ಬಗ್ಗೆ ಭಾರತದಾದ್ಯಂತ 30 ಮಿಲಿಯನ್ ಮಕ್ಕಳಿಗೆ ಇದು ಶಿಕ್ಷಣ ನೀಡಿತು. ‘ಎಲ್ಲರಿಗೂ ಸ್ವಚ್ಛ ಕೈಗಳು: ನೈರ್ಮಲ್ಯದ ಮೂಲಕ ಆರೋಗ್ಯ ಸಮಾನತೆಯನ್ನು ಮುನ್ನಡೆಸುವುದು’ ಎಂಬ ವಿಷಯದೊಂದಿಗೆ, ಈ ಕಾರ್ಯಕ್ರಮವು ಎಲ್ಲ ಮಕ್ಕಳೂ ಅಗತ್ಯ ನೈರ್ಮಲ್ಯ ಜ್ಞಾನವನ್ನು ಹೊಂದಬೇಕು ಎಂಬ ಡೆಟ್ಟಾಲ್ ಬಿಎಸ್‌ಐನ ಬದ್ಧತೆಯನ್ನು ಎತ್ತಿ ತೋರಿಸಿದೆ.

ಜಾಗತಿಕ ಕೈತೊಳೆಯುವ ದಿನ 2024 ರ ಸಂದರ್ಭದಲ್ಲಿ, ಬಿಎಸ್‌ಐ ಅಡಿಯಲ್ಲಿ ಡೆಟ್ಟಾಲ್ ಶಾಲಾ ನೈರ್ಮಲ್ಯ ಶಿಕ್ಷಣ ಕಾರ್ಯಕ್ರಮವು 100+ ಪಾಲುದಾರರ ಬೆಂಬಲದೊಂದಿಗೆ 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ಮಿಲಿಯನ್ ಮಕ್ಕಳನ್ನು ತೊಡಗಿಸಿಕೊಂಡಿದೆ. ಈ ಅಭಿಯಾನದಲ್ಲಿ ಸರ್ವೋದಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಸಾರ್ವಜನಿಕ, ಖಾಸಗಿ, ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಭಾಗವಹಿಸಿದ್ದವು.

ಈ ಉಪಕ್ರಮದ ಭಾಗವಾಗಿ, ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯದ ಗ್ರೀಕ್ ದೇವತೆಯಾದ ಹೈಜಿಯಾದಿಂದ ಸ್ಫೂರ್ತಿ ಪಡೆದ ಡೆಟ್ಟಾಲ್ ನೈರ್ಮಲ್ಯ ಚಾಟ್‌ಬಾಟ್, ಹೈಜಿಯಾ ಫಾರ್ ಗುಡ್ ಹೈಜೀನ್ ಅನ್ನು ಡೆಟ್ಟಾಲ್ ಬಿಎಸ್‌ಐ ಪ್ರಾರಂಭಿಸಿತು. ಈ AI-ಚಾಲಿತ, WhatsApp-ಸಕ್ರಿಯಗೊಳಿಸಿದ ಚಾಟ್‌ಬಾಟ್ 7 ಭಾಷೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ, ಒಡಿಯಾ, ಗುಜರಾತಿ ಮತ್ತು ತೆಲುಗು ಆಗಿದೆ. ಎಲ್ಲಾ 22 ಅಧಿಕೃತ ಭಾರತೀಯ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳೊಂದಿಗೆ ನಿರ್ಣಾಯಕ ನೈರ್ಮಲ್ಯ ಜ್ಞಾನವನ್ನು ಇದು ನೀಡುತ್ತದೆ. ಚಾಟ್‌ಬಾಟ್ ಸ್ವಯಂ-ಕಲಿಕೆ, ಸ್ವಯಂ-ಸಹಾಯ ಪರಿಕರಗಳು ಮತ್ತು ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಮತ್ತು ಅರಿವನ್ನು ಬೆಳೆಸುವ ಸಂವಾದಾತ್ಮಕ ವೇದಿಕೆಗಳಿಗೆ ಹೆಚ್ಚುತ್ತಿರುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ರೆಕಿಟ್ ದಕ್ಷಿಣ ಏಷ್ಯಾದ ಬಾಹ್ಯ ವ್ಯವಹಾರಗಳು ಮತ್ತು ಪಾಲುದಾರಿಕೆಗಳ ನಿರ್ದೇಶಕ ರವಿ ಭಟ್ನಾಗರ್, “ರೆಕಿಟ್‌ನಲ್ಲಿ, ನಾವು ನೈರ್ಮಲ್ಯ ಶಿಕ್ಷಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರತಿ ಮಗುವಿಗೂ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ. ನೈರ್ಮಲ್ಯ ಸಮಾನತೆಗೆ ನಮ್ಮ ದೀರ್ಘಕಾಲೀನ ಬದ್ಧತೆಗೂ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ಸರ್ಕಾರದ ಸ್ವಚ್ಛ ಭಾರತ ಚಳುವಳಿಗೂ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತದೆದೆ. ಪ್ರತಿ ಮಗುವೂ, ಅದು ಎಲ್ಲೇ ಇದ್ದರೂ, ಕೈ ತೊಳೆಯುವ ಮೂಲಕ ಜೀವ ಉಳಿಸುವ ಅಭ್ಯಾಸವನ್ನು ಕಲಿತುಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳುವತ್ತ ಈ ಅಭಿಯಾನವು ಗಮನಹರಿಸಿದೆ. ನಾವು ಈ ಯೋಜನೆಯ 11 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ನೈರ್ಮಲ್ಯ ಸಮಾನತೆಯ ವಿಷಯದಲ್ಲಿ ನಮ್ಮ ಗುರಿಯು ಎಂದಿಗಿಂತಲೂ ಈಗ ಹೆಚ್ಚು ಬಲವಾಗಿದೆ. ಈ ಅಭಿಯಾನದ ವ್ಯಾಪ್ತಿಯಲ್ಲಿ ‘ಯಾರನ್ನೂ ಕೈ ಬಿಡುವುದಿಲ್ಲ’ ಎಂಬ ನಮ್ಮ ವಿಶಾಲ ಧ್ಯೇಯವನ್ನೂ ಇದು ಹೊಂದಿದೆ.”

2023 ರಲ್ಲೇ ಅಭಿಯಾನವು 34 ಶತಕೋಟಿಗೂ ಹೆಚ್ಚು ಕೈ ತೊಳೆಯುವ ಅನುಕೂಲವನ್ನು ಒದಗಿಸಿದೆ. ದೇಶಾದ್ಯಂತ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಲು ತನ್ನ ಸಮರ್ಪಣೆಯನ್ನು ಇದು ಇನ್ನಷ್ಟು ಬಲಪಡಿಸಿತು. ‘ಒನ್ ವರ್ಲ್ಡ್ ಹೈಜೀನ್’ ಎಂಬ ತನ್ನ ಪ್ರಸ್ತುತ ಯೋಜನೆ ಅಡಿಯಲ್ಲಿ, ಶೌಚಾಲಯವನ್ನು ಬಳಸಿದ ನಂತರ, ತಿನ್ನುವ ಮೊದಲು, ಆಹಾರವನ್ನು ತಯಾರಿಸುವ ಮೊದಲು ಮತ್ತು ಕೆಮ್ಮಿದ ಅಥವಾ ಸೀನಿದ ನಂತರ ಕೈ ತೊಳೆಯಬೇಕು ಎಂಬ ಆರು ನಿರ್ಣಾಯಕ ಸಂದರ್ಭಗಳ ಬಗ್ಗೆ ಮಕ್ಕಳಿಗೆ ಅಭಿಯಾನವು ಶಿಕ್ಷಣ ನೀಡುತ್ತದೆ.

ಗ್ರಾಮಾಲಯ ಸ್ಥಾಪಕರಾದ ಪದ್ಮಶ್ರೀ ಎಸ್. ದಾಮೋದರನ್, ಗ್ರಾಮೀಣ ಸಮುದಾಯಗಳಲ್ಲಿ ನೈರ್ಮಲ್ಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು, “ನೀರು ರೋಗವನ್ನು ಹೋಗಲಾಡಿಸುತ್ತದೆ ಮತ್ತು ಜೀವವನ್ನು ಉಳಿಸುತ್ತದೆ ಎಂಬುದನ್ನು ಋಗ್ವೇದವು ಕಲಿಸುತ್ತದೆ. ಸುರಕ್ಷಿತ ನೀರು, ನೈರ್ಮಲ್ಯ ಮತ್ತು ಶುಚಿತ್ವ,  ಅದರಲ್ಲೂ ವಿಶೇಷವಾಗಿ ಸೋಪ್ ಬಳಸಿ ಕೈ ತೊಳೆಯುವುದು ಅನಾರೋಗ್ಯವನ್ನು ತಡೆಗಟ್ಟಲು ಅತ್ಯಗತ್ಯ. ಜಾಗತಿಕ ಕೈತೊಳೆಯುವ ಅಭಿಯಾನದ ಮೂಲಕ, ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಮತ್ತು ಗ್ರಾಮಾಲಯ ಜಂಟಿಯಾಗಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ 1 ಕೋಟಿ ಮಕ್ಕಳಿಗೆ ಕೈ ತೊಳೆಯುವ ವಿಧಾನಗಳನ್ನು ಕಲಿಸುವ ಗುರಿಯನ್ನು ಹೊಂದಿದೆ.”

ಪ್ಲಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮೊಹಮ್ಮದ್ ಆಸಿಫ್, “ಸೋಪಿನೊಂದಿಗೆ ಕೈ ತೊಳೆಯುವುದು ಎಲ್ಲಾ ಮಕ್ಕಳು ಮತ್ತು ಜನರಿಗೆ ಮೂಲಭೂತ ಹಕ್ಕು ಮತ್ತು ಅವಶ್ಯಕತೆಯಾಗಿದೆ. ಪ್ಲಾನ್ ಇಂಡಿಯಾದಲ್ಲಿ, ಪ್ರತಿ ಮಗುವೂ, ಪ್ರತಿ ಕುಟುಂಬವೂ ಮತ್ತು ಪ್ರತಿ ಸಮುದಾಯವು ನೈರ್ಮಲ್ಯ ಸೌಲಭ್ಯಗಳು ಮತ್ತು ಅರಿವು ಹೊಂದುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಇದರಿಂದ, ಯಾರೂ ಹಿಂದುಳಿಯುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿ ಹೊಂದುವ ಆರೋಗ್ಯಕರ, ನೈರ್ಮಲ್ಯ-ಪ್ರಜ್ಞೆಯ ದೇಶವನ್ನು ರಚಿಸಲು ಕೈಜೋಡಿಸೋಣ.”

ಮಮತಾ ಎಚ್‌ಐಎಂಸಿ ಉಪ ಸಿಇಒ ಸಂಜೀವ್ ಧಮ್ ಹೇಳುವಂತೆ, “ನಾವು ಜಾಗತಿಕ ಕೈತೊಳೆಯುವ ದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಶಾಲೆಗಳಲ್ಲಿ ನೈರ್ಮಲ್ಯ ಶಿಕ್ಷಣವನ್ನು ಉತ್ತೇಜಿಸಲು ರೆಕಿಟ್ ಬೆಂಬಲಿಸುವ ಸಾಮೂಹಿಕ ಪ್ರಯತ್ನವಾದ ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಅಭಿಯಾನದ ಭಾಗವಾಗಲು ನಾವು ಮಮತಾ HIMC ನಲ್ಲಿ ಸಂತೋಷಪಡುತ್ತೇವೆ. ಒಟ್ಟಾಗಿ, ಮುಂದಿನ ಪೀಳಿಗೆಗೆ ರೋಗದ ವಿರುದ್ಧದ ಹೋರಾಟದಲ್ಲಿ ಸ್ವಚ್ಛ ಕೈಗಳು ಪ್ರಬಲ ಸಾಧನವಾಗಿದೆ ಎಂದು ತಿಳಿಸಿಕೊಡುತ್ತಿದ್ದೇವೆ. ನಮ್ಮ ಕೈಗಳನ್ನು ತೊಳೆದುಕೊಳ್ಳೋಣ ಮತ್ತು ಈ ಬಗ್ಗೆ ಎಲ್ಲರಿಗೂ ತಿಳಿಸಿ ಹೇಳೋಣ! ನೈರ್ಮಲ್ಯದ ಅಭ್ಯಾಸವನ್ನು ಎರಿಗೂ ತಿಳಿಸೋಣ.”
ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಆಕರ್ಷಕ ಮತ್ತು ಸಾಂಸ್ಕೃತಿಕವಾಗಿ ಸಂಬಂಧಿತ ಉಪಕ್ರಮಗಳ ಮೂಲಕ ಸೇವೆ ವಂಚಿತ ಸಮುದಾಯಗಳಿಗೆ ನೈರ್ಮಲ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಆರೋಗ್ಯ ಸಮಾನತೆಯನ್ನು ಉತ್ತೇಜಿಸಲು ಬದ್ಧವಾಗಿದೆ. ಜಾಗತಿಕ ಹ್ಯಾಂಡ್‌ವಾಶಿಂಗ್ ದಿನ 2024 ಮುಕ್ತಾಯಗೊಳ್ಳುತ್ತಿದ್ದಂತೆ, ಡೆಟ್ಟಾಲ್ ಬಿಎಸ್‌ಐ ಸಹಯೋಗದೊಂದಿಗೆ ಗ್ರಾಮಾಲಯವು, ಶಾಲೆಗಳಲ್ಲಿ 1 ಕೋಟಿ ಮಕ್ಕಳನ್ನು ಒಳಗೊಳ್ಳಲು, ಸಮಾಜದ ಎಲ್ಲಾ ವರ್ಗಗಳಲ್ಲಿ ನೈರ್ಮಲ್ಯ ಅರಿವು ಹರಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಚಳುವಳಿಯಲ್ಲಿ ಭಾಗವಹಿಸಲು, ನಿಮ್ಮ WhatsApp- ಸಕ್ರಿಯಗೊಳಿಸಿದ ಮೊಬೈಲ್ ಫೋನ್‌ನಿಂದ ಟೋಲ್-ಫ್ರೀ ಸಂಖ್ಯೆ 18001236848 ಗೆ ಮಿಸ್ಡ್ ಕಾಲ್ ನೀಡಿ.

City Today News 9341997936

Leave a comment

This site uses Akismet to reduce spam. Learn how your comment data is processed.