
ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 2-11-2024 ರಿಂದ 1-12-2024ರ ವರೆಗೆ ವಿಶೇಷ ಕಾರ್ತೀಕ ಮಾಸದ ಅಂಗವಾಗಿ ಪ್ರತಿನಿತ್ಯ ಒಂದು ತಿಂಗಳು ಪರ್ಯಂತ ಸಹಸ್ರ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದೆ ಸಹಸ್ರಾರು ಭಕ್ತರಿಂದ ಸಾಮೂಹಿಕ ಲಕ್ಷ ದೀಪೋತ್ಸವವು 15-11-24 ಮತ್ತು 1-12-24 ರಂದು ವಿಶೇಷವಾದ ದೀಪೋತ್ಸವವು ನೆರವೇರುವುದು, 20 -11-2024 ರಂದು ಧಾತ್ರೀ ಹೋಮ ಹವನ, ಅನ್ನದಾನ ಸೇವೆ, ಹೂವಿನ ಅಲಂಕಾರ ಸೇವೆ, ಪ್ರತಿನಿತ್ಯ ಕಾರ್ತೀಕ ದೀಪೋತ್ಸವ ಸೇವೆ, ನೂತನ ವಸ್ತ್ರ ಸೇವೆ, ಪಲ್ಲಕ್ಕಿ ಉತ್ಸವ, ಉದಯಾಸ್ತಮಾನ ಸೇವೆ, ಸಂಪೂರ್ಣ ರತ್ನ ಕವಚ ಸೇವೆ ಮತ್ತು ಸಂಪೂರ್ಣ ಲಕ್ಷ ದೀಪೋತ್ಸವದ ಸೇವೆಗಳಿಗೆ ಅವಕಾಶವಿದ್ದು ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿ-ವಾಯು- ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ಈ ಸೇವೆಗಳನ್ನು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 ಆನ್ಲೈನ್ ಮುಖಾಂತರ ಸೇವೆಗಳನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ-ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
City Today News 9341997936
