“ಮುಚ್ರೋ ಸಾಕೋಲೇ.. ಮುಚ್ರೋ ಸಾಕು..”

“ಮುಚ್ರೋ ಸಾಕೋಲೇ.. ಮುಚ್ರೋ ಸಾಕು..”

ಮುಚ್ರೋ ಸಾಕು, ಏನಪ್ಪಾ ಬೈತಿದ್ದಾರೆ ಅಂದು ಕೊಳ್ಳುತ್ತಿದ್ದೀರಾ! ಖಂಡಿತವಾಗಿಯೂ ಇಲ್ಲ. ಇದು ಒಂದು ಟೈಟಲ್. ಹೀಗೂ ಒಂದು ಟೈಟಲ್ ಇಡಬಹುದಾ? ಎಸ್ ಇಟ್ಟಿದ್ದಾರೆ! ಇದು “ಯೂನಿವರ್ಸಲ್ ಸ್ಟಾರ್” ‘ವಿನಯ್ ಕುಮಾರ್ ವಿ ನಾಯಕ್’ ರವರ ಹೊಚ್ಚ ಹೊಸ, ಹಿಪ್ ಹಾಪ್ ರಾಪ್ ಗೀತೆಯ ಟೈಟಲ್. ಹಾಡು ಇರಲಿ, ಏನಪ್ಪಾ ಹೀಗೆಲ್ಲ ಟೈಟಲ್ ಯಾಕೆ ಅಂತ ಈಗಲೂ ಕೂಡ ಪ್ರಶ್ನೆ ಇದೆಯಾ? ಇರಲಿ, ಅದು ಸಹಜವೇ ಬಿಡಿ. ಇದು ಪ್ರಸ್ತುತ ಹಾಡಿನ ಸಾಲಿನಲ್ಲಿ ಒಂದು ಹೈಲೈಟ್ ವಿಚಾರ. ಪ್ರಜೆಗಳನ್ನು ಪ್ರಜಾಪ್ರಭುತ್ವದ ಸಮಯದಲ್ಲಿ ತಮ್ಮ ನಿದ್ದೆಯಿಂದ ಮತ್ತು ಕರ್ತವ್ಯದ ಲೋಪ ಮತ್ತು ನಿರ್ಲಕ್ಷ್ಯತೆಯಿಂದ ಬಡಿದೆಬ್ಬಿಸಲು ಮಾಡಿರುವ ಗೀತೆಯೆಂದು ಹೇಳಬಹುದು. ಯಾಕೆಂದರೆ, ಹಿಂದಿನ ಕಾಲದಲ್ಲಿ ಜನ ತಮ್ಮನ್ನು ರಕ್ಷಿಸುವ ಜನರನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು, ಹಾಗೆಯೇ ಸಪೋರ್ಟ್ ಕೂಡ ಮಾಡುತ್ತಿದ್ದರು, ಆದರೆ ಈಗ, ಜಾತಿ, ಧರ್ಮ, ಕುಲ, ಮತ ಇತ್ಯಾದಿಗಳಿಗೆ ಮಾನಸಿಕವಾಗಿ ಬಲಿಯಾಗಿ ತಮ್ಮ ಪರಮಶ್ರೇಷ್ಠ ಶಕ್ತಿಯಾದ ಮತವನ್ನು ಚಲಾಯಿಸಲು ಅಭ್ಯರ್ಥಿಗಳ background ಅರ್ಥಮಾಡಿಕೊಳ್ಳದೆ, ಯಾರ್ಯಾರು ಕಣದಲ್ಲಿರುವ ಅಭ್ಯರ್ಥಿಗಳು, ತಮ್ಮ, ಊರು, ವಿಧ್ಯಾಭ್ಯಾಸ, ಹವ್ಯಾಸ ಇತ್ಯಾದಿಗಳನ್ನು ಲೆಕ್ಕಿಸದೆ, ಕೇವಲ ಜಾತಿ, ಧರ್ಮ, ಕುಲ, ಮತ ಜೊತೆಗೆ ಬಹುಮುಖ್ಯವಾಗಿ ಹಂಚುವ ಹಣ ಮತ್ತು ಚುನಾವಣೆಯ ನಂತರದ ಪುಕ್ಸಟ್ಟೆ ಯೋಜನೆಗಳಿಗೆ ಬೆರಗಾಗಿ ತಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದೇಶ, ರಾಜ್ಯ ಮತ್ತು ಕ್ಷೇತ್ರವನ್ನು ನಡೆಸಲು ಎಲ್ಲರಿಗೂ ಒಳ್ಳೆಯ ವ್ಯಕ್ತಿ ಬೇಕು ಆದರೆ, ಆಯ್ಕೆ ಯಾಕೆ ಹೀಗೆ ಅನ್ನೋದೇ ಕಟ್ಟ ಕಡೆಯದಾಗಿ ಕಾಡುವ ತಾರತಮ್ಯ. “ಯೂನಿವರ್ಸಲ್ ಸ್ಟಾರ್” ವಿನಯ್ ಕುಮಾರ್ ವಿ ನಾಯಕ್” ರವರ ಪ್ರಸ್ತುತ ಕನ್ನಡ ಗೀತೆ ಇಂತಹ ವಿಚಾರಗಳನ್ನು ಕನ್ನಡಿಯಂತೆ ಎತ್ತಿ ಹಿಡಿದಿದೆ ಅನ್ನೋದು ನಮ್ಮ ಭಾವನೆ. ತಾವು ಈ ಗೀತೆಯನ್ನು ಕೇಳಿ ತಪ್ಪದೆ ಕಾಮೆಂಟ್ ಮಾಡಿ. ಇಷ್ಟವಾದಲ್ಲಿ ಹಂಚಿಕೊಳ್ಳಿ.

ಈ ಹಾಡನ್ನು ಕೇಳಲು ಬಳಸಬೇಕಾದ ಕೊಂಡಿ ಇಲ್ಲಿದೆ: https://youtu.be/ewuxuZGS34Y?si=bRfuzrOGpJs0U4CR

City Today News 9341997936

Leave a comment

This site uses Akismet to reduce spam. Learn how your comment data is processed.