
ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-12-2024 ರಂದು ವಿಶೇಷ ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ “ಲೋಕ-ಕಲ್ಯಾಣ”ಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಂಡಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ. ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಾನುವಾರ ಸಂಜೆ 6-30ಕ್ಕೆ ದೀಪಗಳನ್ನು ಪ್ರಜ್ವಲಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಹರಿ- ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರಾಗಬಹುದು.
ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 – ಆನ್ಲೈನ್ ಮುಖಾಂತರ ಸೇವೆಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ- ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
City Today News 9341997936
