ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸಂಭ್ರಮಕಾಗಿ ವಂಡರ್ ಲಾ ಬೆಂಗಳೂರು ವಿಶೇಷವಾದ ಪಾಸ್ ಕೊಡುಗೆಗಳನ್ನು ಘೋಷಿಸಿದೆ

ಬೆಂಗಳೂರು, ಭಾರತ, ಡಿಸಂಬರ್ 10, 2024 – ಭಾರತದ ಅತಿ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಚೈನ್ ಆದ ವಂಡರ್ ಲಾ ಹಾಲಿಡೇಸ್ ಲಿ., ಡಿಸಂಬರ್ 21ರಿಂದ ವಿಶೇಷವಾದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾಸ್ ಕೊಡುಗೆಗಳು ಹಾಗೂ ಅನೇಕ ಥೀಮ್ ಇರುವ ಚಟುವಟಿಕೆಗಳನ್ನು ತನ್ನ ಬೆಂಗಳೂರು ಪಾರ್ಕ್‌ನಲ್ಲಿ ಹಬ್ಬದ ಸಂಭ್ರಮಾಚರಣೆಗಳನ್ನು ಘೋಷಿಸಿದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾಸ್, ಅಥಿತಿಗಳು, ತಮಗೆ ಅನುಕೂಲವಾಗುವ ರೀತಿಯಲ್ಲಿ ಪಾರ್ಕ್‌ಅನ್ನು ಆನಂದಿಸುವ ಅಂತಿಮ ಪರಿವರ್ತನಾ ಆಯ್ಕೆಯಾಗಿ ನೀಡಿದೆ. ಡಿಸಂಬರ್ 10 ಮತ್ತು ಜನವರಿ 5 ನಡುವೆ,  ಯಾವುದೇ ದಿನದಲ್ಲಾದರೂ ಅತಿಥಿಗಳು ಈ ಪಾಸ್ಗಳನ್ನು ಬುಕ್ ಮಾಡಿ ಭೇಟಿ ನೀಡಬಹುದು-ಇದಕ್ಕೆ ಯಾವುದೇ ಪೂರ್ವ ಆಯ್ಕೆ ದಿನಾಂಕಗಳು ಅಗತ್ಯವಿಲ್ಲ. ಈ ಪಾಸ್ ಪಾರ್ಕ್ ಟಿಕೆಟ್‌ಗಳ ಮೇಲೆ 30% ರಿಯಾಯಿತಿ ಹಾಗೂ ವಿಶೇಷವಾಗಿ ರಚಿಸಲಾದ ಆಹಾರ ಕಾಂಬೋ ಪ್ಯಾಕೇಜಸ್ ಮೇಲೆ 30% ರಿಯಾಯಿತಿಯೊಂದಿಗೆ ಅದ್ವಿತೀಯ ಮೌಲ್ಯವನ್ನೂ ಒದಗಿಸುತ್ತದೆ.   ಈ ಕೊಡುಗೆಗಳು ಆನ್‌ಲೈನ್ ಬುಕಿಂಗ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಯ ಚೈತನ್ಯಕ್ಕೆ ತಕ್ಕಂತೆ ಅದ್ಭುತವಾದ ಅಲಂಕಾರಗಳೊಂದಿಗೆ ಆರಂಭಗೊಂಡು, ಅತಿಥಿಗಳು ತಮ್ಮ ಪ್ರೀತಿಪಾತ್ರರೊಡನೆ ಆನಂದಿಸುವಂತಹ ಮನಮೋಹಕ ವಾತಾವರಣ ಸೃಷ್ಟಿಸುತ್ತದೆ. ವಿಶೇಷವಾಗಿ ರಚಿಸಲಾದ ಫುಡ್ ಫೆಸ್ಟಿವಲ್ ಋತುಮಾನಿಕ ಟ್ರೀಟ್‌ಗಳನ್ನು ಮತ್ತು ಈ ಹಬ್ಬದ ಸಂಭ್ರಮದಲ್ಲಿ ಇತರ ವಿಶೇಷ ತಿನಿಸುಗಳನ್ನೂ, ಅದರ ಜೊತೆಗೆ ವಿಶೇಷ ಡಿನ್ನರ್ ಬಫೆ  ಒಳಗೊಂಡಿರುತ್ತದೆ. ಒಂದು ಜೋಡಿಗೆ ರೂ. 349* ಕೈಗೆಟುಕುವ ದರದಲ್ಲಿ ಡಿಸಂಬರ್ 21ರಿಂದ ಜನವರಿ 1ರವರೆಗೆ, ವಿಶೇಷವಾಗಿ ರಚಿಸಲಾದ ಮೆನು ಇರುವ ವಂಡರ್ ಲಾದ ಐತಿಹಾಸಿಕ ಸ್ಕೈ ವೀಲ್ ಮೇಲೆ ವಿಶೇಷವಾದ ಸೆಲೆಬ್ರೆಟೊರಿ ಸ್ಕೈ-ಡೈನ್ ಆಯ್ಕೆಯನ್ನೂ ಪಾರ್ಕ್ ಒದಗಿಸುತ್ತಿದೆ.
ಕ್ರಿಸ್‌ಮಸ್-ಥೀಮ್ ಇರುವ ಉಡುಗೊರೆಗಳು, ವಸ್ತ್ರಗಳು ಮತ್ತು ಚಟುವಟಿಕೆಯ ಫ್ಲೀ ಮಾರ್ಕೆಟ್ ಕೂಡ ಲಭ್ಯವಿದ್ದು, ನಿಖರ ರಜಾ ಸ್ಮರಣೆಗಳನ್ನು ಖಾತರಿಪಡಿಸುತ್ತವೆ. ದಿನಕ್ಕೆರೆಡು ಬಾರಿ ನಡೆಯುವ ಅದ್ಧೂರಿ ಕ್ರಿಸ್‌ಮಸ್ ಮೆರವಣಿಗೆ ಅತಿಥಿಗಳಿಗಾಗಿ ಈ ವರ್ಷದ ಆಚರಣೆಗಳನ್ನು ಅವಿಸ್ಮರಣೀಯಗೊಳಿಸುತ್ತದೆ. ರಾತ್ರಿಯಾಗುತ್ತಿದ್ದಂತೆ, LED ಜಗ್ಲಿಂಗ್ ಪ್ರದರ್ಶನ, ಮ್ಯಾಜಿಕ್ ಶೋ,  ವಯೊಲಿನ್ ಶೋ, ಡಿಜೆ ಸೆಟ್‌ಗಳು ಮತ್ತು ಜೂಂಬಾ ಡ್ಯಾನ್ಸ್ ಒಳಗೊಂಡಂತೆ ಅನೇಕ ಕೌತುಕಮಯವಾದ ಚಟುವಟಿಕೆಗಳು ಸಾಲುಸಾಲಾಗಿ ಕಾದಿರುತ್ತವೆ. ಪ್ರತಿಯೊಂದು ಸಂಜೆಯೂ ಕಾರ್ಯಕ್ರಮಗಳ ವಿಶಿಷ್ಟ ಮಿಶ್ರಣ ಒಳಗೊಂಡಿರುತ್ತದೆ. ಇದರ ಜೊತೆಗೆ ಭಾಗವಹಿಸುವವರು, ಮೋಜು, ಸಂತೋಷ ಹಾಗೂ ಅವಿಸ್ಮರಣೀಯ ಕ್ಷಣಗಳಿಂದ ತುಂಬಿದ ಋತುವನ್ನು ಕೂಡ ನಿರೀಕ್ಷಿಸಬಹುದು.
ವಂಡರ್ ಲಾ ಹಾಲಿಡೇಸ್ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಳ್ಳಿ ಯವರು, “ಈ ಹಬ್ಬದ ಋತುವಿನಲ್ಲಿ, ಬೆಂಗಳೂರಿನ ವಂಡರ್ಲಾಗೆ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಮಾಯೆಯನ್ನು ತರುವುದಕ್ಕೆ ನಮಗೆ ಅತ್ಯಂತ ಹರ್ಷವೆನಿಸುತ್ತಿದೆ. ಕೌತುಕಮಯವಾದ ಕೊಡುಗೆಗಳು, ಮನಮೋಹಕ ಅಲಂಕರಣಗಳು ಹಾಗೂ ಕುಟುಂಬದವರು ಮತ್ತು ಸ್ನೇಹಿತರಿಗಾಗಿ ಅನೇಕ ಚಟುವಟಿಕೆಗಳ ಮಿಶ್ರಣದೊಂದಿಗೆ ನಾವು ನಮ್ಮ ಸಂದರ್ಶಕರಿಗಾಗಿ ಅವಿಸ್ಮರಣೀಯ ಮನೋರಂಜನೆ ಸೃಷ್ಟಿಸುವ ಗುರಿ ಇರಿಸಿಕೊಂಡಿದ್ದೇವೆ. ಋತುವಿನ ಚೈತನ್ಯವನ್ನು ಹಿಡಿದಿಡುವ ಮನಸೂರೆಗೊಳ್ಳುವ ಮತ್ತು ಮೋಜಿನಿಂದ-ಕೂಡಿದ ಅನುಭವವನ್ನು ಒದಗಿಸುವ ಸಮಯದಲ್ಲೇ ಎಲ್ಲರೂ ಆಶ್ಚರ್ಯಗೊಳ್ಳುವ ವಿಶೇಷ ರಿಯಾಯಿತಿಗಳನ್ನು ಒದಗಿಸುವುದು ನಮ್ಮ ಧ್ಯೇಯೋದ್ದೇಶವಾಗಿದೆ.” ಎಂದು ಹೇಳಿದರು.

ಆನ್‌ಲೈನ್ ಪೋರ್ಟಲ್ https://bookings.wonderla.com/ ಮೂಲಕ ತಮ್ಮ ಎಂಟ್ರಿ ಟಿಕೆಟ್ ಬುಕ್ ಮಾಡಲು ವಂಡರ್ ಲಾ ಸಂದರ್ಶಕರನ್ನು ಪ್ರೋತ್ಸಾಹಿಸುತ್ತದೆ. ಅಥವಾ ಇದಕ್ಕಾಗಿ ಅವರು ಬೆಂಗಳೂರು ಪಾರ್ಕ್‌ಅನ್ನು ಈ ಸಂಖ್ಯೆಯಲ್ಲೂ ಸಂಪರ್ಕಿಸಬಹುದು -: +91 80372 30333, +91 9945557777.
ವಂಡರ್‌ಲಾ ಹಾಲಿಡೇಸ್ ಲಿ., ಕುರಿತು
ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್, ಭಾರತದ ಅತಿದೊಡ್ಡ ಹಾಗೂ ಪ್ರೀಮಿಯರ್ ಮನರಂಜನಾ ಪಾರ್ಕ್ ಆಪರೇಟರ್ ಆಗಿದ್ದು, ತನ್ನ ಅಗ್ರಮಾನ್ಯ ಮನರಂಜನೆ ಹಾಗೂ ವಿಶಿಷ್ಟ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಸುಪ್ರಸಿದ್ಧ ವಂಡರ್‌ಲಾ ರೆಸಾರ್ಟ್ ಜೊತೆಗೆ, ಸಂಸ್ಥೆಯು ಕೊಚ್ಚಿನ್, ಬೆಂಗಳೂರು, ಹೈದರಾಬಾದ್, ಹಾಗೂ ಭುವನೇಶ್ವರಗಳಲ್ಲಿ ನಾಲ್ಕು ವಿಶ್ವ-ದರ್ಜೆ ಮನರಂಜನಾ ಪಾರ್ಕ್‌ಗಳ ಕಾರ್ಯಾಚರಣೆ ನಡೆಸುತ್ತದೆ. ಮುಂಚೂಣಿ ಅಂತರರಾಷ್ಟ್ರೀಯ ಸರಬರಾಜುದಾರರಿಂದ ಪಡೆದುಕೊಂಡ ಅಗತ್ಯಕ್ಕೆ-ತಕ್ಕಂತೆ ತಯಾರಿಸಿದ ರೈಡ್‌ಗಳ ಜೊತೆಗೆ ವಂಡರ್‌ಲಾ ಭಾರತದಲ್ಲಿ ಸರಿಸಾಟಿಯಿಲ್ಲದ ಅನುಭವಗಳನ್ನು ಒದಗಿಸುತ್ತದೆ. 2000ದಲ್ಲಿ ಸ್ಥಾಪನೆಯಾದಾಗಿನಿಂದಲೂ 43 ದಶಲಕ್ಷಕ್ಕಿಂತ ಹೆಚ್ಚಿನ ಮಂದಿ ವಂಡರ್‌ಲಾ ಪಾರ್ಕ್‌ಗಳನ್ನು ಆನಂದಿಸಿರುವುದು, ದೇಶದಲ್ಲಿ ಅತಿಹೆಚ್ಚು ಭೇಟಿನೀಡಲ್ಪಡುವ ಮನರಂಜನಾ ಪಾರ್ಕ್ ಆಗಿ ಅದರ ಪ್ರಸಿದ್ಧಿಯನ್ನು ದೃಢಪಡಿಸಿದೆ. ಭಾರತ ಹಾಗೂ ಏಶ್ಯಾದಲ್ಲಿರುವ ಅಗ್ರಮಾನ್ಯ ಮನರಂಜನಾ ಪಾರ್ಕ್‌ಗಳ ಪೈಕಿ ಸತತವಾಗಿ ಶ್ರೇಯಾಂಕ ಗಳಿಸಿರುವ ವಂಡರ್‌ಲಾ ಮೋಜು ಹಾಗೂ ಕುಟುಂಬ ಮನರಂಜನೆಗಾಗಿ ಒಂದು ಮಾನದಂಡ ಸ್ಥಾಪಿಸಿದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ವಂಡರ್‌ಲಾ ಹಾಲಿಡೇಸ್ ಲಿ.,                                                              
ಇ-ಮೇಲ್: pr@wonderla.com
ಅನನ್ಯ ಪಾಂಡೆ, ಅಕೌಂಟ್ ಎಕ್ಸಿಕ್ಯೂಟಿವ್, ಎಮ್‌ಎಸ್‌ಎಲ್ ಗ್ರೂಪ್ (MSLGroup)
ಇ-ಮೇಲ್: ananya.pandey@mslgroup.comn

City Today News 9341997936

Leave a comment

This site uses Akismet to reduce spam. Learn how your comment data is processed.