ಡಿಸೆಂಬರ್ 14ರಂದು “ಸರ್ವರಿಗೂ ಆರೋಗ್ಯ” ಎಂಬ ಉದ್ದೇಶದಿಂದ 18ನೇ ವಾರ್ಷಿಕ ಬೆಂಗಳೂರು ವಾಕಥಾನ್ 2024 ಆಯೋಜಿಸಲಿರುವ ಸಮರ್ಥನಂ

ಬೆಂಗಳೂರು, ಡಿಸೆಂಬರ್ 11, 2024 ವಿಕಲಚೇತನರಿಗಾಗಿ ಕಾರ್ಯ ನಿರ್ವಹಿರುತ್ತಿರುವ ಸಮರ್ಥನಂ ಟ್ರಸ್ಟ್, ಓಹನ್ ಟೆಕ್ಸ್, ಸಹಭಾಗಿತ್ವದಲ್ಲಿ “ಸರ್ವರಿಗೂ ಆರೋಗ್ಯ” ಎಂಬ ಉದಾತ್ತ ಉದ್ದೇಶದಿಂದ ಡಿಸೆಂಬರ್ 14ರಂದು ಜಯನಗರದ 3ನೇ ಬ್ಲಾಕಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ 18ನೇ ವಾರ್ಷಿಕ ಬೆಂಗಳೂರು ವಾಕಥಾನ್ ಅನ್ನು ಆಯೋಜಿಸಿದೆ.

ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಓಪನ್ ಟೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ನಾಗ್ ಪಾಲ್ ಮತ್ತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೆಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷರಾದ ಡಾ.ಮಹಾಂತೇಶ್ ಜಿ.ಕಿವಡಸನ್ನವರ್ ವಾಕಥಾನ್ ನ ಅಧಿಕೃತ ಟಿ-ಷರ್ಟ್ ಅನ್ನು ಅನಾವರಣಗೊಳಿಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಹಾಂತೇಶ್ ಜಿ.ಕೆ, “ಬೆಂಗಳೂರು ವಾಶಥಾನ್ ಏಕತೆಯ ಸಂಭ್ರಮಾಚರಣೆಯಾಗಿದೆ ಮತ್ತು ಆರೋಗ್ಯವಾಗಿರಲು ಎಲ್ಲರನ್ನೂ ಪ್ರೇರೇಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದರು.

ಓಪನ್‌ಟೆಕ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್‌ಪಾಲ್ ಅವರು, “ಈ ವಾಕಥಾನ್ ಗೆ ಸಹಭಾಗಿತ್ವ ಒದಗಿಸುವ ಅವಕಾಶ ದೊರಕಿದ್ದು ನಮಗೆ ಸಿಕ್ಕ ಗೌರವವಾಗಿದೆ. ಈ ವಾಕಥಾನ್ ಮೂಲಕ ಸಾರ್ವಜನಿಕರಲ್ಲಿ ಸಕಾರಾತ್ಮಕ ಬದಲಾವಣೆ ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.

ಡಿಸೆಂಬರ್ 3ರಂದು ಆಚರಿಸಲಾಗುವ ವಿಶ್ವ ವಿಕಲಚೇತನರ ದಿನಾಚರಣೆಯ ಭಾಗವಾಗಿ “ಸರ್ವರಿಗೂ ಆರೋಗ್ಯ” ಎಂಬ ಉದ್ದೇಶದಿಂದ ಈ ವಾಕಥಾನ್ ಅನ್ನು ವಾರ್ಷಿಕವಾಗಿ ಆಯೋಜಿಸಲಾಗುತ್ತದೆ. ಉತ್ತಮ ಜೀವನಶೈಲಿ ಪಾಲಿಸಲು ಪ್ರೇರೇಪಿಸುವ, ಅಂಗವೈಕಲ್ಯದ ಕುರಿತು ಅರಿವು ಮೂಡಿಸುವ ಮತ್ತು ಎಲ್ಲಾ ವಿಕಲಚೇತನರಿಗೆ ಸಮಾನ ಅವಕಾಶ ಒದಗಿಸಬೇಕೆಂದು ಸಾರುವ ಕೆಲಸವನ್ನು ಈ ವಾಕಥಾನ್ ಮೂಲಕ ಮಾಡಲಾಗುತ್ತದೆ.

ಕ್ಯೂಬರ್ ಲೂಬ್ರಿಕೇಶನ್, ಬ್ಲೂ ಯೋಂಡರ್, ಮೈಕ್ರೋಸಾಫ್ಟ್, ಜಿಕೆಎನ್ ಏರೋಸ್ಪೇನ್, ಎಫ್‌ಐಎನ್, ಸಿಎಸ್‌ ಮತ್ತು ಹೈರ್ ರೈಟ್ ಸಂಸ್ಥೆಗಳು ಈ ವಾಕಥಾನ್ ಗೆ ಬೆಂಬಲ ಸೂಚಿಸಿದೆ.

ಭಾಗವಹಿಸುವ ಆಸಕ್ತರು ಮಾಹಿತಿಗಾಗಿ ಸಂಪರ್ಕಿಸಿ: 9480809591

City Today News 9341997936

Leave a comment

This site uses Akismet to reduce spam. Learn how your comment data is processed.