
1) ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸದೆ ದಲಿತರ ಅಭಿವೃದ್ಧಿಗಾಗಿ ಬಳಸಬೇಕು ಹಾಗೂ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಈಗಾಗಲೇ ಅನ್ಯ ಯೋಜನೆಗಳಿಗೆ ಬಳಸಿರುವ ಅನುದಾನವನ್ನು ಕೂಡಲೇ ವಾಪಸ್ಸು ತರಬೇಕು.
2) ರಾಜ್ಯದಲ್ಲಿ ಈಗಾಗಲೇ ದಲಿತರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ 33 ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಲು ಆದೇಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿಗಳು / ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು.
3) ತೋಟಿ/ತಳವಾರು ಜಮೀನು ಕುಲವಾಡಿ ಜಮೀನು ರದ್ದಿಯಾತಿ ಕಾಯ್ದೆ 1961 (Village Officer Abolition Act 1961) ಅಡಿ ಭೂಮಿ ಮಂಜೂರಾತಿದಾರರನ್ನು ಪಿಟಿಸಿಎಲ್ ಕಾಯ್ದೆ ಸೆಕ್ಷನ್ 3(1) (ಬಿ) ವ್ಯಾಪ್ತಿಗೆ ಸೇರಿಸಿ ಸದರಿ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ತಂದು ದಲಿತರ ಜಮೀನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
4) ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೋಟೆಕೆರೆ ಮಧ್ಯ ಭಾಗದಲ್ಲಿ 100 ಅಡಿಯ ಭಗವಾನ್ ಬುದ್ಧರ ಪ್ರತಿಮೆಯನ್ನು ಕೂಡಲೇ ಅನಾವರಣಗೊಳಿಸಬೇಕು ಹಾಗೂ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಿಂದ ಮಸೂದೆ ತೋಟಕ್ಕೆ ರಸ್ತೆ ಅನುಕೂಲ ಮಾಡಿಕೊಡಬೇಕು.
5) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಏಜೆನ್ಸಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳು ನಿಗಧಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.
6) ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೂಡಲೇ ಒಳ ಮೀಸಲಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. 1
7) ಬಾಗಲಕೋಟೆ ನಗರದ ಸರ್ವೆ ನಂ.131 ರ 4ಎ-27 ಗುಂಟೆ ಸರ್ಕಾರಿ ಜಾಗದಲ್ಲಿ ಭಗವಾನ್ ಬುದ್ಧರ ವಿಹಾರ ನಿರ್ಮಿಸಿದ್ದು ಸದರಿ ಜಮೀನನ್ನು ಬುದ್ಧವಿಹಾರ ನಿರ್ಮಾಣ ಸಮಿತಿಗೆ ಮಂಜೂರು ಮಾಡಬೇಕು ಹಾಗೂ ಭಗವಾನ್ ಬುದ್ಧರ ಜಯಂತಿಗೆ ಸರ್ಕಾರಿ ರಜೆ ಘೋಷನೆ ಮಾಡಬೇಕು.
8) ಪ್ರತಿ ತಿಂಗಳ 2ನೇ ಭಾನುವಾರ ರಾಜ್ಯದ ಎಲ್ಲಾ ಪೊಲೀಸ ಠಾಣೆಗಳಲ್ಲಿಯೂ “ದಲಿತ ಸಭೆ” ನಡೆಸಲು ಆದೇಶವಿದ್ದು, ಇತ್ತೀಚೆಗೆ ಎಲ್ಲಿಯೂ ಸರಿಯಾಗಿ ದಲಿತರ ಕುಂದು ಕೊರತೆ ಸಭೆಗಳಾಗುತ್ತಿಲ್ಲ, ಆದ್ದರಿಂದ ನಿರಂತರವಾಗಿ ದಲಿತ ಸಭೆ ನಡೆಸಲು ನಿರಾಶಕ್ತಿ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
9) ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು, ಸುಗಟೂರು ಹೋಬಳಿ ನಾಗನಾಳ ಗ್ರಾಮದ ಗೋಮಾಳ ಸರ್ವೆ ನಂ.42 ರಲ್ಲಿ ಸೋಮಶೇಖರ್ ಬಿನ್ ಲೇಟ್ ನಾರಾಯಣಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿ ಕ್ರಷರ್ ಹಾಗೂ ವೇಮಗಲ್ ಹೋಬಳಿ, ಮೇಡಿಹಾಳ ಗ್ರಾಮದ ಗೋಮಾಳ ಸರ್ವೆ ನಂ.24 ರಲ್ಲಿ ಹಾಗೂ ದನಮಟ್ಟಹಳ್ಳಿ ಗೋಮಾಳ ಸರ್ವೆ ನಂ.53 ರಲ್ಲಿ ಸೊಣ್ಣೆಗೌಡ ಬಿನ್ ಚೌಡೇಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿಕ್ರಷರ್ ಪರವಾನಗಿಗಳನ್ನು ಗ್ರಾಮಸ್ಥರ/ರೈತರ ಹಿತ ದೃಷ್ಠಿಯಿಂದ ಸರ್ಕಾರ ಕೂಡಲೇ ರದ್ದುಗೊಳಿಸಬೇಕು ಮತ್ತು ಗಣಿದಣಿಗಳ ಜೊತೆ ಶಾಮೀಲಾಗಿ ಕರ್ತವ್ಯ ಲೋಪವೆಸಗಿ ರೈತರ ಜೀವನದ ಜೊತೆ ಚೆಲ್ಲಾಟವಾಡುವ ಸಂಬಂಧಪಟ್ಟಿ ಅಧಿಕಾರಿಗಳ ಮೇಲೆಸೂಕ್ತ ಕಾನೂನು ಕ್ರಮ ಜರುಗಿಸಬೇಕು.
10) ಉಚಿತ ಮತ್ತು ಕಡ್ಡಾಯ ಶಿಕ್ಷಣ (ಆರ್‌ಟಿಇ) 2006 ರಲ್ಲಿ ಜಾರಿಗೆ ಬಂದಿರುತ್ತದೆ. ಆದರೆ ಬಲಾಡ್ಯರ ಒತ್ತಾಯಕ್ಕೆ ಮಣಿದು ಸರ್ಕಾರಿ ಶಾಲೆಗಳ ಸಮೀಪ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಪ್ರವೇಶಕ್ಕೆ ಅವಕಾಶವಿಲ್ಲದೆ ಇರುವುದರಿಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಪಿ.ಯು.ಸಿ ವರೆಗೆ ವಿಸ್ತರಿಸಬೇಕು.
11) ರಾಯಚೂರು ಜಿಲ್ಲೆಗೆ ಎಐಎಂಎಸ್ ಕೂಡಲೇ ಜಾರಿಗೊಳಿಸಬೇಕು.
12) ರಾಜ್ಯದ ವಿವಿಧ ನಿಗಮಗಳಲ್ಲಿ ಸಾಲ ಪಡೆಯಬೇಕಾದರೆ ಸ್ಥಳೀಯ ಶಾಸಕರ ಶಿಫಾರಸ್ಸು ಪತ್ರ ಬೇಕಾಗಿರುವುದರಿಂದ ನಿಜವಾದ ಬಡವರಿಗೆ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಶಾಸಕರ ಶಿಫಾರಸ್ಸು ಪತ್ರವನ್ನು ರದ್ದುಪಡಿಸಬೇಕು.
13) ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗೆ ಮೀಸಲಿಟ್ಟಿರುವ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಕೂಡಲೇ ದಲಿತರಿಗೆ ಮೀಸಲಿಟ್ಟಿರುವ 24/% ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು ಹಾಗೂ ದಲಿತರಿಗೆ ಸ್ಮಶಾನ ಭೂಮಿಯನ್ನು ಖರೀದಿಸಿ ಅದರ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.
14) ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ಪಿಡಿಒ ಗಳು ಒಂದೇ ಪಂಚಾಯ್ತಿಗಳಲ್ಲಿ 10-12 ವರ್ಷಗಳ ಕಾಲ ನಿರಂತರವಾಗಿದ್ದು ಭ್ರಷ್ಟಾಚಾರಲ್ಲಿ ತೊಡಗಿದ್ದಾರೆ. ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ಇವರುಗಳನ್ನು ಕೂಡಲೇ ಕಾಲಕಾಲಕ್ಕೆ ವರ್ಗಾವಣೆ ಮಾಡಬೇಕು.
15) ಪಂಚಾಯ್ತಿ ಅಧ್ಯಕ್ಷ/ಉಪಾಧ್ಯಕ್ಷರ ಅವಧಿ 2 ವರ್ಷಗಳು ಎಂದು ಸರ್ಕಾರದ ಆದೇಶವಿದ್ದರೂ ಸಹ 6-8 ತಿಂಗಳಿಗೊಮ್ಮೆ ಅಧ್ಯಕ್ಷ/ಉಪಾಧ್ಯಕ್ಷರ ಬದಲಾವಣೆ ಮಾಡುತ್ತಿರುತ್ತಾರೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಇನ್ನು ಮುಂದೆ ಸರ್ಕಾರ ಕಟ್ಟುನಿಟ್ಟಾಗಿ ಸರ್ಕಾರದ ನಿಯಮ ಪಾಲಿಸಲು ಆದೇಶಿಸಬೇಕು.
16) ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ದಲಿತರ ಅಭಿವೃದ್ಧಿ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸದಿರುವುದನ್ನು ಕೂಡಲೇ ನ್ಯಾಯಾಂಗ ತನಿಖಗೆ ಒಳಪಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.
17) ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಭೂ ಒಡೆತನ ಯೋಜನೆಯ ಹಣವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ರಾಜ್ಯ ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮವಾದ),ರಾಜ್ಯ ಸಮಿತಿ, ಬೆಂಗಳೂರು ವತಿಯಿಂದ ಆಗ್ರಹಿಸಲಾಯಿತು.
City Today News 9341997936
