
ಕ್ರಿಸ್ಮಸ್ ಹಬ್ಬದ ಸಡಗರವು ಉದ್ಯಾನ ನಗರವನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡ ಈ ಸಂದರ್ಭದಲ್ಲಿ, ಬೆಂಗಳೂರಿನ ನೆಕ್ಸಸ್ ಮಾಲ್‌ಗಳು ಹಿಂದೆಂದೂ ಕಂಡಿರದ ಹೊಸತುಗಳೊಂದಿಗೆ ತನ್ನ ಗ್ರಾಹಕರಿಗೆ ಸ್ಮರಣೀಯ ನೆನಪುಗಳನ್ನು ಸೃಷ್ಟಿಸಲು ಸಜ್ಜಾಗಿವೆ.
ನೆಕ್ಸಸ್ ಕೋರಮಂಗಲದಲ್ಲಿ ಎ ಜೈಂಟ್ ಆಫ್ ಜಾಯ್: ಸಾಂಟಾ”
ಸಾಂಪ್ರದಾಯಿಕ ರೀತಿಯ ಕರಕುಶಲತೆ ಮತ್ತು ಆಧುನಿಕ ಶೈಲಿಯಲ್ಲಿ ಸೊಗಸಾಗಿ ನಿರ್ಮಿಸಿರುವ 25 ಅಡಿ ಎತ್ತರದ ಸಾಂಟಾ ಕ್ಲಾಸ್ ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕೆಂಪು ಬಣ್ಣದ ಎತ್ತರದ ಜಾಲಿ ಮ್ಯಾನ್, ಬಣ್ಣ ಬಣ್ಣದ ಮಿನುಗುವ ವಿದ್ಯುತ್ ದೀಪಾಲಂಕಾರದ ಈ ಸಂಭ್ರಮದ ಸಮಯದಲ್ಲಿ ಚೈತನ್ಯ ನೀಡುವ ಮತ್ತು ಒಂದಾಗುವ ಸಂತೋಷ ತರಲಿದೆ. ಇದರ ಜೊತೆಗೆ, ಪ್ರವಾಸಿಗರು ವಿಶೇಷವಾಗಿ ರಚಿಸಲಾದ ಕ್ರಿಸ್ಮಸ್ ಬಜಾರ್ ಮತ್ತು ಡ್ರಮ್ ಜಾಮ್ ಮತ್ತು ಬಬಲ್ ಶೋ, ಮ್ಯಾಜಿಕ್ ಶೋ, ಸರ್ಕಸ್ ಶೋ, ಕಾರ್ನೀವಲ್ ನರ್ತನ, ಬಲೂನ್ ಅಲಂಕಾರ, ಸಾಂಟಾ ಮೆರವಣಿಗೆ, ಗಾಯಕರ ಗುಂಪಿನ ಹಾಡುಗಾರಿಕೆ, ಚಮತ್ಕಾರಗಳ ಹಲವು ವಿಶೇಷಗಳ ಸಾಂಟಾ ಕ್ಲಾಸ್ ಭೇಟಿ ಮಾಡುವ ಮತ್ತು ಶುಭಾಶಯ ಕೋರುವ ಮೂಲಕ ಋತುವಿನ ವೈಭವ ಅನುಭವಿಸಬಹುದು. ಪವಾಡಗಳು ಸುಮ್ಮನೆ ಆಗುವುದಿಲ್ಲ. ಆದ್ದರಿಂದ ಅದ್ಭುತ ಚಮತ್ಕಾರ ನೋಡಲು ಮತ್ತು ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮತ್ತು ಎಂದೆಂದಿಗೂ ಮರೆಯದ ನೆನಪಿನ ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 2024 ರ ಡಿಸೆಂಬರ್ 17 ರಿಂದ 31 ರ ನಡುವೆ ಮಾಲ್‌ಗೆ ಭೇಟಿ ನೀಡಿ.

ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ತಂಪಾದ ವಂಡರ್‌ಲ್ಯಾಂಡ್ ‘ಪೋಲಾರ್ ಎಕ್ಸ್ ಪ್ಲೋರರ್’
ಕ್ರಿಸ್‌ಮಸ್ ಮಾಯಾಲೋಕದ ನೈಜ ವಸ್ತುತಃ ಅನ್ವೇಷಣೆಯ ಉತ್ಸಾಹವನ್ನು ಸಂಯೋಜಿಸುವ ಚಳಿಗಾಲದ ಸ್ವರ್ಗ ‘ಪೋಲಾರ್ ಎಕ್ಸ್ ಪ್ಲೋರರ್’ ವಿಸ್ಮಯಗೊಳಿಸಲು ನೆಕ್ಸಸ್ ಶಾಂತಿನಿಕೇತನ ಮಾಲ್‌ಗೆ ಭೇಟಿ ನೀಡಿ. ಕೇವಲ * 250 ರಿಂದ ₹ 400 ರವರೆಗೆ ಟಿಕೇಟ್ ಮಾಡಲಾದ ಪ್ರಾಯೋಗಿಕ ಮಂಜುಗಡ್ಡೆಯಂತಹ ತಂಪಾದ ಈ ಸಾಹಸ ರಜಾದಿನಗಳಲ್ಲಿ ಸಾಟಿಯಿಲ್ಲದ ಕೌಟುಂಬಿಕ ವಿನೋದ ನೀಡುತ್ತದೆ. ಜಗಮಗಿಸುವ ಮಂಜುಗಡ್ಡೆಯ ಶಿಲ್ಪಗಳನ್ನೊಳಗೊಂಡ ಹಿಮಾವೃತ ಭೂದೃಶ್ಯ, ಹಬ್ಬಕ್ಕಾಗಿ ಅಲಂಕರಿಸಲ್ಪಟ್ಟ ಸ್ನೇಹಶೀಲ ಮತ್ತು ಉತ್ತರ
ದೀಪಗಳಿಂದ ಪ್ರೇರಿತವಾದ ರೋಮಾಂಚಕ ವರ್ಣಗಳು ಈ ಸಮ್ಮೋಹನಗೊಳಿಸುವ ವ್ಯವಸ್ಥಿತ ಸ್ಥಾಪನೆಯ ಕೆಲವು ಬೆರಗುಗೊಳಿಸುವ ಮುಖ್ಯಾಂಶಗಳಾಗಿವೆ. ಅನ್ವೇಷಕರು ಫೈಂಡ್ ಮೈ ಬೇಬಿ ಪೆಂಗ್ವಿನ್ ಹಂಟ್ಸ್, ಸ್ಕೋಮ್ಯಾನ್ ಬೌಲಿಂಗ್, ಸಾಂಟಾ ಕ್ಲಾಸ್ ಮತ್ತು ಅವರ ಮೆರ್ರಿ ಹೆಲ್ಸರ್ಸ್‌ಗಳನ್ನು ಭೇಟಿ ಮಾಡಿ ಮತ್ತು ಸ್ವಾಗತಿಸಿ, ಹಿಮಪಾತದ ಅನುಭವ. ನೈಜ ವಸ್ತುತಃ ವಲಯದಲ್ಲಿ ಸತ್ಯ ಸಾಹಸ ಮತ್ತು ಹೆಚ್ಚಿನ ಅತ್ಯಾಕರ್ಷಕ ಚಟುವಟಿಕೆಗಳನ್ನು ಆನಂದಿಸಬಹುದು. ಆಕರ್ಷಕವಾದ ತಣ್ಣನೆಯ ವಿಷಯಗಳನ್ನು ಅನ್ವೇಷಿಸಿ ಅಥವಾ ನಿಮ್ಮ ಚಿಕ್ಕ ಮಕ್ಕಳಿಗೆ ಮೋಜಿಗಾಗಿ ವಿನ್ಯಾಸಗೊಳಿಸಲಾದ ರೋಮಾಂಚನಕಾರಿ ಸಾಹಸಮಯ ಸೇತುವೆ ಮತ್ತು ಜಾರುವ ಆಟವಾಡಲು ಅವಕಾಶ ನೀಡಿ.
‘ಜಂಗಲ್ ರೈಡ್’ – ನೆಕ್ಸಸ್ ವೈಟ್ ಫೀಲ್ಡ್ ಮಾಲ್ ನಲ್ಲಿ ವಿಶಿಷ್ಟ ಕ್ರಿಸ್ಮಸ್ ಸಂಭ್ರಮ
ನೆಕ್ಸಸ್ ವೈಟ್ ಫೀಲ್ಡ್ ಮಾಲ್ ನಲ್ಲಿ ಅತಿ ಹೆಚ್ಚು ಪ್ರೀತಿಸಿದ ಕ್ರಿಸ್ಮಸ್ ಹಬ್ಬದ ಹಬ್ಬದ ವಾತಾವರಣ, ‘ಜಿಂಗಲ್ ರೈಡ್” ಮಾಂತ್ರಿಕ ಆಚರಣೆಯೊಂದಿಗೆ ಸೂಕ್ತ ಥೀಮ್ ನೊಂದಿಗೆ ಮತ್ತೊಮ್ಮೆ ಬಂದಿದೆ. ಕುಟುಂಬಗಳು ಮತ್ತು ಗೆಳೆಯ/ಗೆಳತಿಯರಿಗಾಗಿ ಹಬ್ಬದ ಮೆರಗು ಅನುಭವಿಸಲು ಇಡೀ ಮಾಲ್ ಅನ್ನು ಅದ್ಭುತವಾಗಿ ಆಲಂಕರಿಸಿದ ಈ ಮಾಯಾಲೋಕದ ಸುತ್ತ ಒಂದು ವಿಹಂಗಮ ನೋಟಕ್ಕೆ ಸಾಕ್ಷಿಯಾಗಲಿದೆ ಮತ್ತು ತಮಾಷೆಯ, ಸಂತೋಷಭರಿತ, ಮೋಡಿಮಾಡುವ ಕೋಡಂಗಿ ಪ್ರದರ್ಶನಗಳು, ಆಕರ್ಷಕ ಜಿಂಕೆ ಜಾರುಬಂಡಿ ಮತ್ತು ಬಹು ನಿರೀಕ್ಷಿತ ಮನರಂಜನೆಯ ಚಟುವಟಿಕೆಗಳು ಮತ್ತು ಆಶ್ಚರ್ಯಗಳನ್ನು ಆಯೋಜಿಸಿದೆ. ಸಾಂಟಾ ಜೊತೆಗಿನ ಬಹು ನಿರೀಕ್ಷಿತ ಮಿಲನ ಮತ್ತು ಶುಭಾಶಯಗಳ ನಡುವೆ ಹಬ್ಬವನ್ನು ಸಂಭ್ರಮಿಸಿ. ತಲ್ಲೀನಗೊಳಿಸುವ 360ಲಿ ಗುಮ್ಮಟವನ್ನು ತಪ್ಪಿಸಿಕೊಳ್ಳಬೇಡಿ. ಇಲ್ಲಿ ಕೇವಲ ₹150 ಕ್ಕೆ ಚಿಕ್ಕ ಪ್ರಪಂಚ, ಅಲ್ಲಾದೀನ್ ಮತ್ತು ಬ್ಲ್ಯಾಕ್ ಹೋಲ್ ನಂತಹ 5-6-ನಿಮಿಷಗಳ ಮೋಡಿಮಾಡುವ ಶೋ ಗಳನ್ನು ನೀವು ಆನಂದಿಸಬಹುದು.
ಕಾರ್ಯಕ್ರಮದ ವಿವರ:
ಏನು: ಕ್ರಿಸ್ಮಸ್ ಆಚರಣೆ
ಯಾವಾಗ: 17ನೇ ಡಿಸೆಂಬರ್ – 31ನೇ ಡಿಸೆಂಬರ್ 2024
ಎಲ್ಲಿ: ನೆಕ್ಸಸ್ ಕೋರಮಂಗಲ ಮಾಲ್, ನೆಕ್ಸಸ್ ಶಾಂತಿನಿಕೇತನ ಮಾಲ್, ನೆಕ್ಸಸ್ ವೈಟ್‌ಫೀಲ್ಡ್ ಮಾಲ್
City Today News 9341997936
