ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ24.12.2024 ರಂದು ನಯನ ಸಭಾಂಗಣದಲ್ಲಿ “ರಂಗಸಿರಿ” ಕಾರ್ಯಕ್ರಮ.

ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ
24.12.2024 ಮಂಗಳವಾರ ಸಂಜೆ 4.30 ಕ್ಕೆ  ನಯನ ಸಭಾಂಗಣದಲ್ಲಿ ರಂಗಸಿರಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ  ಮಕ್ಕಳು ಅಭಿನಯಿಸುವ ಪರಿಸರ ರಕ್ಷಣೆ ಕುರಿತ ವೃಕ್ಷೋ ರಕ್ಷತಿ ರಕ್ಷಿತ: ಮತ್ತು ಹಿರಿಯ ಕಲಾವಿದರು ಅಭಿನಯಿಸುವ ಷೇಕ್ಸ್‌ಪಿಯರ್ ನ ಬುರುಡೆ ನಾಟಕಗಳ ಪ್ರದರ್ಶನ ಇರುತ್ತದೆ.

ಕಾರ್ಯಕ್ರಮವನ್ನು ಮಾಜಿ ಮೇಯ‌ರ್
ಶ್ರೀ ಬಿ. ಎನ್. ಮಂಜುನಾಥ ರೆಡ್ಡಿ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವಿಮರ್ಶಕರಾದ
ಡಾ. ಬೈರಮಂಗಲ ರಾಮೇಗೌಡ ,
ಹಿರಿಯ ಪತ್ರಕರ್ತರಾದ
ಶ್ರೀ ರಾಜು ಮಳವಳ್ಳಿ  ಅವರು ಭಾಗವಹಿಸಲಿದ್ದು ಅವರಿಗೆ ಪರಂಪರಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ವಿಶೇಷ ಆಹ್ವಾನಿತರಾಗಿ ಎಇಎಚ್ ಬಿಸಿಎಸ್ ನ ನಿರ್ದೇಶಕರಾದ, ಶ್ರೀ.ಎನ್.ಎಸ್.ಚಂದ್ರಮೋಹನ್ ,  ಎಚ್ ಎ ಎಲ್ ಲಲಿತ ಕಲಾ ಸಂಘದ ಮಾಜಿ ಕಾರ್ಯದರ್ಶಿ,
ಶ್ರೀ ಎಂ.ಆರ್. ನದಾಫ್‌, ಎಚ್ ಎ ಎಲ್ ಕರ್ನಾಟಕ ಕಲಾ ಸಂಘದ ಅಧ್ಯಕ್ಷರಾದ
ಶ್ರೀ ಎ.ಎಸ್.ಜಯತೀರ್ಥ ಭಾಗವಹಿಸುವರು.

ಪರಂಪರಾ ಕಲ್ಬರಲ್ ಫೌಂಡೇಶನ್ (ರಿ.)ನ ಅಧ್ಯಕ್ಷ, ಜಿ ಪಿ ರಾಮಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಎಸ್. ಸುಧಾಕರ್  ಮತ್ತು ಜಿ.ಮಧುಸೂದನ ನಾಯಕ ಕಾರ್ಯಕ್ರಮ ಪ್ರಸ್ತುತಪಡಿಸುವರು.

City Today News 9341997936

Leave a comment

This site uses Akismet to reduce spam. Learn how your comment data is processed.