ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ  ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಬೆಳಗಾವಿ ಅಧಿವೇಶನ ನಡೆಯುವಾಗ ಎಂ.ಎಲ್.ಸಿ ಯವರಾದ ಸಿ.ಟಿ ರವಿ ರವರಿಂದ ಅವಾಚ್ಯ  ಶಬ್ದಗಳಿಂದ ನಿಂದನೆ

ಬೆಳಗಾವಿ ಅಧಿವೇಶನ ನಡೆಯುವಾಗ ಎಂ.ಎಲ್.ಸಿ ಯವರಾದ ಸಿ.ಟಿ ರವಿ ಯವರು ಮಾನ್ಯ ಮಹಿಳಾ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ರವರನ್ನು ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಈ ರೀತಿಯ ಪದಗಳನ್ನು ಮಹಿಳೆಯರ ಮೇಲೆ ಪ್ರಯೋಗ ಮಾಡದಿರಲು ಮತ್ತು ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ದ ಕಠಿಣ ಕ್ರಮಕ್ಕೆ ಆದೇಶ ಮಾಡಬೇಕೆಂದು ರಾಜ್ಯ ಸರ್ಕಾರದಲ್ಲಿ ಮನವಿ ಮಾಡಲಾಯಿತು.

ಅಲ್ಲದೆ, ನಡೆದಿರುವ ಘಟನೆಯ ಸಂಬಂಧ ಎಂ,ಎಲ್.ಸಿ ಯವರಾದ ಸಿ,ಟಿ ರವಿ ಯವರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ರವರಲ್ಲಿ ಕ್ಷಮೆ ಕೇಳಬೇಕು,

ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಎಂ,ಎಲ್.ಸಿ,  ಸಿ.ಟಿ ರವಿ ಯವರ ಮೇಲೆ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ(ರಿ)ಯ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಮಣಿ ಕೆ.ಎಲ್,ಜಿಲ್ಲಾ ಕಾರ್ಯದರ್ಶಿಗಳಾದ ಧನಲಕ್ಷ್ಮೀ ಮತ್ತು  ಜಿಲ್ಲಾ ಖಜಾಂಚಿಗಳಾದ ಶೋಭಾ ಹಾಗೂ ಪದಾಧಿಕಾರಿಗಳು ಒಟ್ಟುಗೂಡಿ ಬೆಂಗಳೂರು ನಗರ ಜಿಲ್ಲಾ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.