

ಅಕ್ಷಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸೀತಾರಾಮ ಕಲ್ಯಾಣವನ್ನು ನಗರದ ಯಶವಂತಪುರ ವೃತ್ತದಲ್ಲಿರುವ ಮೇವರ್ ಭವನದಲ್ಲಿ ದಿನಾಂಕ 25/12/2024 ರಂದು ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:30 ಗಂಟೆವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ರವರು, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಸಿಎನ್ ಅಶ್ವಥ್ ನಾರಾಯಣ ರವರು, ಸಮಾಜ ಸೇವಕರಾದ ಸುರೇಶ್ ಗೌಡ್ರು ರವರು, ಮಾಜಿ ಬಿಬಿಎಂಪಿ ಸದಸ್ಯರಾದ ಜಯಪಾಲ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಕ್ಷಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷರಾದ ಡಾ. ಅಂಬರೀಶ್ ರವರು ತಿಳಿಸಿದರು.
City Today News 9341997936
