ET ನೌ ಶೃಂಗಸಭೆಯಲ್ಲಿ  ಲಿಬರ್ಟಿ ಜನರಲ್‌ ಇನ್ಸೂರನ್ಸ್‌ಗೆ ಪ್ರಾಂಪ್ಟ್‌ ಇನ್ಸೂರೆರ್‌ ಗರಿಮೆ

ಬೆಂಗಳೂರು, ಡಿಸೆಂಬರ್ 27, 2024: ಇತ್ತೀಚೆಗೆ ನಡೆದ 2024 ರ ET ನೌ ವಿಮಾ ಶೃಂಗಸಭೆ ಮತ್ತು ಪ್ರಶಸ್ತಿಗಳು ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾದ ಲಿಬರ್ಟಿ ಜನರಲ್ ಇನ್ಶುರೆನ್ಸ್ ಸಂಸ್ಥೆಯು ತನ್ನ ಚುರುಕು ಸೇವೆಗಾಗಿ “ಪ್ರಾಂಪ್ಟ್ ಇನ್ಶುರೆರ್” ಪ್ರಶಸ್ತಿಯ ಗೌರವವನ್ನು ಪಡೆಯಿತು. ಈ ಮನ್ನಣೆಯು ಲಿಬರ್ಟಿಯ ಬದ್ಧತೆಯ ಕಾರ್ಯಾನಿರ್ವಹಣೆ ಮತ್ತು ಸಮಯೋಚಿತ, ಗ್ರಾಹಕ-ಕೇಂದ್ರಿತ ಕ್ಲೈಮ್‌ಗಳ ಇತ್ಯರ್ಥ ಗೊಳಿಸುವಿಕೆಯಲ್ಲಿನ ದಕ್ಷತೆಯನ್ನು ಒತ್ತಿಹೇಳುತ್ತದೆ.
ಮಾನ್ಯತೆಯ ಕುರಿತು, ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಂಸ್ಥೆಯ ಸಿಇಓ ಮತ್ತು ಪೂರ್ಣಾವಧಿ ನಿರ್ದೇಶಕರಾಗಿರುವ  ಶ್ರೀ. ಪರಾಗ್ ವೇದ್  ಮಾತನಾಡುತ್ತ “ಈ ಪ್ರಶಸ್ತಿಯು ನಮ್ಮ ಪಾಲಿಸಿದಾರರಿಗೆ ಸಮರ್ಥ ಮತ್ತು ಪಾರದರ್ಶಕ ಕ್ಲೈಮ್ ರೆಸಲ್ಯೂಶನ್‌ಗಳನ್ನು ಒದಗಿಸಲು ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಮೋಟಾರು ಮತ್ತು ಆರೋಗ್ಯ ವಿಮೆ ಎರಡರಲ್ಲೂ ನಾವು ಸಾಧಿಸಿದ ಫಲಿತಾಂಶಗಳು ಸೇವಾ ವಿತರಣೆಯನ್ನು ಸುಧಾರಿಸುವ ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಮ್ಮ ಸಾಧನೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ನಿರ್ವಹಿಸುವ ಮೂಲಕ, ನಮ್ಮ ಪಾಲಿಸಿದಾರರಿಗೆ ನಾವು ಒದಗಿಸುವ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದರು.

ಕಂಟೆಂಟ್ ಮಾರ್ಕೆಟಿಂಗ್ ವಿಮಾ ಸೇವೆಗಳ ಅತ್ಯುತ್ತಮ ಬಳಕೆಗಾಗಿ ಸಂದ Finixx 2024 ಪ್ರಶಸ್ತಿಯು ತನ್ನ ಯಶಸ್ವೀ ಸ್ವಾತಂತ್ರ್ಯ ದಿನದ ಬ್ರ್ಯಾಂಡ್ ವೀಡಿಯೊ ಪ್ರಚಾರಕ್ಕಾಗಿ ಲಿಬರ್ಟಿಗೆ ಮತ್ತೊಂದು ಇತ್ತೀಚಿನ ಗೌರವವಾಗಿದೆ. ಈ ಪ್ರಶಸ್ತಿಯು ಲಿಬರ್ಟಿಯ ಸೃಜನಶೀಲ ಕಥೆ ಹೇಳುವಿಕೆ ಮತ್ತು ರಾಷ್ಟ್ರವ್ಯಾಪಿ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಿದ ವಿಷಯ ತಂತ್ರಗಳಿಗೆ ಸಂದ ಗೌರವವಾಗಿದೆ.

ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಂಸ್ಥೆಯು ತನ್ನ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅದರ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆಗಳನ್ನು ನೀಡಲು ಬದ್ಧವಾಗಿದೆ. ಭಾರತದ ಜೀವವಿಮೆಯೇತರ ವಲಯದಲ್ಲಿ ಪ್ರಮುಖ ದಿಗ್ಗಜನಾಗಿ, ಕಂಪನಿಯು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ನಾವೀನ್ಯತೆ ಮತ್ತು ಗ್ರಾಹಕ-ಕೇಂದ್ರಿತತೆಯ ಮೇಲೆ ಗಮನಹರಿಸುವುದನ್ನು ಮುಂದುವರೆಸಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.