ಡಿಸೆಂಬರ್ 31: ಜನವರಿ 1ರ ಭೀಮ-ಕೊರೇಗಾಂವ್ ವಿಜಯೋತ್ಸವಕ್ಕೆ ಚಾಲನೆ

ಪ್ರತಿವರ್ಷವೂ ಆಚರಿಸಿತ್ತಿರುವಂತೆ ಮುಂದಿನ ಜನವರಿ 01ರಂದು ಭೀಮ- ಕೊರೇಗಾಂವ್ ವಿಜಯೋತ್ಸವವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ದೇಶದಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಎಲ್ಲಾ ಜಿಲ್ಲೆಗಳಲ್ಲೂ ಈ ವಿಜಯೋತ್ಸವವನ್ನು ಸಮತಾ ಸೈನಿಕ ದಳವು ಆಚರಿಸುತ್ತಿದೆ. ಅಸ್ಪೃಶ್ಯ ಜನಾಂಗಗಳು ಕೇವಲ ಗುಲಾಮರೆಂದು ಬಿಂಬಿಸುತ್ತಿದ್ದ ಜಾತಿವಾದಿ ಶಕ್ತಿಗಳಿಗೆ ಪಾಠಕಲಿಸುವ ಭೀಮ-ಕೊರೇಗಾಂವ್ ಯುದ್ಧದ 2 1-1-1818 ನಡೆದು ಈ ದೇಶದ ಹೊಸ ಚರಿತ್ರೆ ಬರೆಯಲ್ಪಟ್ಟಿತು. ಮಹರ್ ಜನಾಂಗದ 500 ಸೈನಿಕರ ಪಡೆಯು ಪೂನಾದ ಪೇಳ್ವೆ ಸಂಸ್ಥಾನದ 28000 ಸೈನಿಕರನ್ನು ಕೇವಲ 24 ಗಂಟೆಗಳಲ್ಲಿ ಸದೆಬಡೆದು 2ನೇ ಬಾಜಿರಾಯನನ್ನು ಯುದ್ಧ ಭೂಮಿಯಿಂದ ಓಡಿಸಿದ ಇತಿಹಾಸ ಗರ್ಭದಲ್ಲಿ ಹುದುಗಿದ್ದ ವಿಷಯವು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನದಿಂದ ಗೊತ್ತಾಗಿ ಇಂದಿನ ದೇಶದ ಅಸ್ಪೃಶ್ಯ ಜನಾಂಗಗಳಲ್ಲಿ ಹೊಸ ಚಿಂತನೆಯೊಂದರ ಸಂಚಲನ ಉಂಟುಮಾಡಿದೆ. ಪ್ರತಿ ವರ್ಷವೂ ಜನವರಿ 01ರಂದು ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೀಮಾಕೊರೇಗಾಂವ್‌ಗೆ ಹೋಗಿ ವೀರಯೋಧರ ವಿಜಯ ಸ್ಥಂಭದ ಸ್ಮಾರಕಕ್ಕೆ ನಮನ ಸಲ್ಲಿಸಿ ಬರುತ್ತಿರುವ ಕೋಟ್ಯಾಂತರ ಜನತೆಯ ಭೆಟ್ಟಿಯು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದಿದೆ. ಸಮತಾ ಸೈನಿಕ ದಳವು ಕಳೆದ 30ವರ್ಷಗಳಿಂದ ಈ ವಿಜಯೋತ್ಸವದ ಪ್ರವಾಸದಲ್ಲಿ ಭಾಗಿಯಾಗಿ ಕಾರ್ಯ ಕರ್ತರಿಗೆ ಭೀಮಾಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. 2017ರಲ್ಲಿ ಭೀಮ- ಕೊರೇಗಾಂವ್‌ನಲ್ಲಿ ನಡೆದ ಜಾತಿ ಗಲಭೆಯಿಂದ ರೋಚಕ ತಿರುವು ಪಡೆದುಕೊಂಡು ದಲಿತ ಜನಾಂಗಗಳ ಇತಿಹಾಸದ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಿನಿಂದ ಸಮತಾ ಸೈನಿಕ ದಳವು ಪ್ರತಿ ಡಿಸೆಂಬರ 31ರ ರಾತ್ರಿ ದಲಿತ ಜನಾಂಗಗಳ ವಿರೋಚಿತ ಹೋರಾಟಗಳ ಮೆಲುಕುಹಾಕುವ ಸಿಂಹಾವಲೋಕನದ ಸಂವಾದದ ಸಭೆಯನ್ನು ನಡೆಸಿ ರಾತ್ರಿ 12 ಗಂಟೆಗೆ ವಿಜಯೋತ್ಸವಗಳಿಗೆಗೆ ಚಾಲನೆ ನೀಡುವ ಸಂಭ್ರಮಾಚರಣೆಯನ್ನು ಆಯೋಜಿಸುತ್ತಾ ಬಂದಿದೆ. ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಈ ಪೂರಕವಾಗಿ ಚರಿತ್ರೆಯ ಸಿಂಹಾವಲೋಕನದ ಚರ್ಚೆ ಸಂವಾದಗಳನ್ನು ನಡೆಸಿ ಮದ್ಯರಾತ್ರಿ 12ಗಂಟೆಗೆ ವೀರಯೋಧ ಸಿದ್ಧನಾಕನ ವೇಷಧಾರಿಗಳಿಂದ ಹೊನಲುಬೆಳಕಿನ ಯುದ್ಧ ಪ್ರದರ್ಶನದ ಸಾಮೂಹಿಕ ನೃತ್ಯದ ಹಾಡಿನೊಂದಿಗೆ ಜನವರಿ 1ರ ಭೀಮಾಕೋರೇಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮವು ಎಸ್.ಎಸ್.ಡಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂವಾದದ ವಿವಿಧ ಗೋಷ್ಠಿಗಳನ್ನು ಇತಿಹಾಸ ತಜ್ಞರಿಂದ, ಹಿರಿಯ ಹೋರಾಟಗಾರರಿಂದ ಮತ್ತು ಹಿರಿಯ ಅಧಿಕಾರಿ ವರ್ಗದಿಂದ ನಡೆಸಲಾಗುವುದು. ಪ್ರತಿ ಅಂಬೇಡ್ಕರ್ ಅಭಿಮಾನಿಯು ಡಿಸೆಂಬರ್ 13ರ ಸಂಜೆ 6ಗಂಟೆಗೆ ಬೆಂಗಳೂರಿನ ನಾಗಸೇನ ಬುದ್ಧ ವಿಹಾರದ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಾದ ಮತ್ತು ರಾತ್ರಿ ನಡೆಯುವ ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ ಎಂದು ಸಮತಾ ಸೈನಿಕ ದಳ ವತಿಯಿಂದ ತಿಳಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಅಂಬರೀಷ್. ದಿ. ಎಂ.,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಮಂಜುನಾಥ್, ಯುವ ಘಟಕದ ರಾಜ್ಯಾಧ್ಯಕ್ಷರಾದ ಪ್ರಶಾಂತ್. ಜಿ.ಪಿ ಹಾಗೂ ಸಮತಾ ಸೈನಿಕ ದಳದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.