ಪ್ರಜೆಗಳೆಲ್ಲರೂ ನೆಮ್ಮದಿಯಾಗಿ ಬದುಕಲು, ರಾಜ್ಯದ ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಸುವ್ಯವಸ್ಥೆ ತರಲು ಹಾಗೂ ದೇಶದ ಪ್ರಜೆಗಳು ಅನೈತಿಕತೆ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲು ಮುಂದಾಗಿ -ಎಲ್.ನಾಗರಾಜ್

ಪ್ರೆಸ್ ಕ್ಲಬ್ ನ ಸುದ್ದಿಗಾರರೊಂದಿಗೆ ಮಾತ ನಾಡಿದ ,ಸಂಚಾಲಕರು,ಸಮಾಜ ಸೇವಕರು ಎಲ್. ನಾಗರಾಜ್ ರವರು ಇದುವರೆಗೂ ಹತ್ತಾರು ಚುನಾವಣೆಯಲ್ಲಿ ಪ್ರಾಮಾಣಿಕತೆಯಿಂದ ಸ್ಪರ್ಧಿಸಿ 20,000 ಒಟ್ಟು ಮತ ಗಳಿಸಿ; ದೇಶದ ಹಾಗೂ ಜನಸೇವೆಯಲ್ಲಿ, ಅನೇಕ ಹೋರಾಟಗಳನ್ನು ಮಾಡಿ, ಜೈಲು ವಾಸವನ್ನೂ ಅನುಭವಿಸಿದ್ದೇನೆ” ಎಂದರು.

ಸಾಮಾಜಿಕ ಕಾರ್ಯಗಳಲ್ಲಿ ಈ ಇಳಿ ವಯಸ್ಸಿನಲ್ಲಿ “ಇಂದಿಗೂ; ಸ್ವತಃ ಧನ್ಯತೆ , ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಎಲ್ಲಾ ರಂಗಗಳಲ್ಲೂ ಪಾರದರ್ಶಕತೆ & ಅಭಿವೃದ್ಧಿ ತರಲು ಶ್ರಮಿಸುತ್ತಿರುವೆನು” ಎಂದು ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.
“ಇನ್ನಾದರೂ ನಾಯಕರು, ಅಧಿಕಾರಿಗಳು ಎಲ್ಲಾ ರಂಗಗಳಲ್ಲೂ ದುಂದು ವೆಚ್ಚ, ಅಪರಾಧ ಮಾಡದೇನೇ ದೇಶದ ಮತ್ತು ಪ್ರಜೆಗಳ ಸರ್ವತೋಮುಖ ಬೆಳವಣಿಗೆಗೆ, ಸಾರ್ವಜನಿಕರ ತೆರಿಗೆ ಹಣದ ಸದುಪ ಯೋಗಕ್ಕೆ – ಸೇವೆಗೆ ಶ್ರಮಿಸಲು” ಮನವಿ ಮಾಡಿ, ಕರೆ ನೀಡಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.