ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ”ಶ್ರೀಗುರುರಾಘವೇಂದ್ರರ ಉತ್ಸವ” “ಉದ್ಘಾಟನೆ”

“ಶ್ರೀಗುರುರಾಘವೇಂದ್ರರ ಉತ್ಸವ”
ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ “ಉದ್ಘಾಟನೆ” ಜಯನಗರ ಶಾಲಿನಿ ಮೈದಾನದಲ್ಲಿ ಸಹಸ್ರಾರು ಭಕ್ತ ಜನ ಸಾಗರ ಭಕ್ತರಿಗೆ ಮಂತ್ರಾಲಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ”

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರದಲ್ಲಿರುವ ಶಾಲಿನಿ ಮೈದಾನದಲ್ಲಿ ಶ್ರೀ ಗುರುರಾಘವೇಂದ್ರರ ಉತ್ಸವ ವೈಭವದ ರೂವಾರಿಯಾದ ಖ್ಯಾತ ಚಲನಚಿತ್ರ ನಿರ್ದೇಶಕರಾದ  ಡಾ|| ಮಧುಸೂದನ್ ಹವಾಲ್ದಾರ್  ಹಾಗೂ ಸಿರಿ ಕನ್ನಡ ಟಿವಿ ಚಾನೆಲ್ ಮುಖ್ಯಸ್ಥರಾದ ಶ್ರೀ ಸಂಜಯ್ ಸಿಂಧ್ಯಾ ಮತ್ತು ಸಿ ಆರ್ ಮುರಳಿ ಇವರುಗಳ ತಂಡದಿಂದ ಶ್ರೀ ರಾಘವೇಂದ್ರರ ಉತ್ಸವದ ವಿಶೇಷ ಅತ್ಯಂತ ಸುಂದರ ವೈಭವದಿಂದ ಈ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಿಶೇಷವಾಗಿ ಮಂತ್ರಾಲಯ ಕ್ಷೇತ್ರದ ಮರು ನಿರ್ಮಾಣವನ್ನೇ ಈ ಮೈದಾನದಲ್ಲಿ ಶ್ರೀ ರಾಘವೇಂದ್ರ ಉತ್ಸವಕ್ಕಾಗಿ ಮಾಡಲಾಗಿತ್ತು. ಮುಖ್ಯಪ್ರಾಣ ದೇವರ ಗುಡಿ, ರಾಯರು ಬೃಂದಾವನ , ಸುವರ್ಣದ ಗೋಪುರ, ರಾಯರ ಜೀವನ ಚರಿತ್ರೆ ಮತ್ತು ಮಂತ್ರಾಲಯ ಶ್ರೀಗಳ ಜೀವನ ಚರಿತ್ರೆ ಹಾಗೂ ಶ್ರೀಗಳಿಂದ ಅನುಗ್ರಹ ಸಂದೇಶ ಗಣ್ಯರಿಗೆ  ನಟ ನಟಿಯರಿಗೆ ರಾಜಕಾರಣಿಗಳಿಗೆ ಮತ್ತು ಭಕ್ತರಿಗೆ ಶ್ರೀ ರಾಘವೇಂದ್ರರ ಅನುಗ್ರಹ ಪ್ರಶಸ್ತಿಯನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಭವ್ಯ ಮೆರವಣಿಯೊಂದಿಗೆ ಸ್ವಾಗತಿಸಿ ತದನಂತರ  ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಅವರ ಅಮೃತ ಹಸ್ತದಿಂದ ಈ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಯರ ಬೃಂದಾವನಕ್ಕೆ ಪುಷ್ಪಾರ್ಚನೆ ಮಹಾಮಂಗಳಾರತಿಯೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡುತ್ತಾ ಶ್ರೀ ರಾಘವೇಂದ್ರ ಸ್ವಾಮಿಗಳವರು ಪ್ರತಿಯೊಬ್ಬ ಭಕ್ತರಿಗೂ ಪೂಜ್ಯ ಗುರುಗಳು ಗುರು ರಾಯರನ್ನು ಯಾರು ಭಕ್ತಿಭಾವದಿಂದ ನಿಷ್ಕಲ್ಮಶದಿಂದ ಪ್ರಾರ್ಥಿಸುತ್ತಾರೋ ಅಂತಹ ಭಕ್ತರಿಗೆ ಶೀಘ್ರವಾಗಿ  ಫಲವನ್ನು ಕೊಡುವಂತಹ ಗುರುಗಳು ನಮ್ಮ ನಿಮ್ಮ ರಾಯರು ಕಲಿಯುಗದ ಕಾಮಧೇನು ಕಲ್ಪವೃಕ್ಷ ಗುರು ರಾಘವೇಂದ್ರರು. ಆದ್ದರಿಂದ ಪ್ರತಿಯೊಬ್ಬ ಭಕ್ತರ ಮನಸ್ಸಿಗೆ ಹತ್ತಿರವಾಗುವ ಗುರುಗಳು ರಾಘವೇಂದ್ರರು ಇಂತಹ ರಾಘವೇಂದ್ರರ ಉತ್ಸವವನ್ನು ಅತ್ಯಂತ ವೈಭವವಾಗಿ ಆಚರಿಸಿ “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂಬ ಮಾತಿನಂತೆ ಮಂತ್ರಾಲಯ ಕ್ಷೇತ್ರವನ್ನು ಮರು ನಿರ್ಮಾಣವಾಗಿ ಬೆಂಗಳೂರಿನ ಮಹಾನಗರದಲ್ಲಿ ಮಾಡಲಾಗಿದ್ದು ನೋಡಿ ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾ ಪಂಡಿತರಿಗೆ, ಹಿರಿಯರಿಗೆ, ಗಣ್ಯರಿಗೆ ಮತ್ತು ಕಲಾವಿದರಿಗೆ ಭಕ್ತರಿಗೂ ಅನುಗ್ರಹ ಸಂದೇಶವನ್ನು ನೀಡಿ ಫಲ ಮಂತ್ರಾಕ್ಷತೆ ಶೇಷವಸ್ತ್ರ ಕೊಟ್ಟು ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಧೀಶರಾದ ಶ್ರೀಯುತ ವಿ, ಶ್ರೀಶಾನಂದರವರು ಹಾಗೂ ಡಾ|| ಮಧುಸೂದನ್ ಹವಾಲ್ದಾರ್, ಸಿರಿ ಚಾನೆಲ್ ಮುಖ್ಯಸ್ಥರಾದ ಶ್ರೀಯುತ ಸಂಜಯ್ ಸಿಂದ್ಯಾ , ಆಡಿಟರ್ ಸಿ ಆರ್ ಮುರಳಿ , ಸುಬ್ಬನರಸಿಂಹ, ಸಿ ಕೆ ರಾಮಮೂರ್ತಿ, ವಿದ್ವಾನ್ ಅರಳು ಮಲ್ಲಿಗೆ ಪಾರ್ಥಸಾರಥಿ, ಡಾ|| ವ್ಯಾಸನಕೆರೆ ಪ್ರಭಂಜನಾಚಾರ್, ಡಿ ಪಿ ಅನಂತ, ಚಿತ್ರನಟರಾದ ಡಾಲಿ ಧನಂಜಯ, ಆಶಿಕಾ ರಂಗನಾಥ್, ವಿಜಯ ಕೃಷ್ಣ ಅರ್ಚನಾ ಉಡುಪ, ರಾಯಚೂರು ಶೇಷಗಿರಿದಾಸ್, ಮಂಜುಳಾ ಗುರುರಾಜ್, ಅನಂತ ಕುಲಕರ್ಣಿ, ವರದೇಂದ್ರ ಗಂಗಾಗೇಡ್, ಆರ್. ಕೆ. ವಾದಿಂದ್ರಾಚಾರ್ , ಅಪ್ರಮೇಯ ಆಚಾರ್ ನಂದಕಿಶೋರಾಚಾರ್ , ಬಂಡಿ ಶಾಮಾಚಾರ್, ಅಗ್ನಿಹೋತ್ರಿ ವೇಣುಗೋಪಾಲಾಚಾರ್ , ಹಾಗೂ ಹಲವಾರು ಗಣ್ಯರಿಗೆ ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಶ್ರೀಪಾದರು ಅನುಗ್ರಹಿಸಿದರು. ಈ ವಿಶೇಷವಾದ ಉತ್ಸವಕ್ಕೆ  ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಹಕಾರ ಪರಮಪೂಜ್ಯ ಶ್ರೀಪಾದಂಗಳವರ ಆಶೀರ್ವಾದ ಅನುಗ್ರಹದೊಂದಿಗೆ ಈ ಉತ್ಸವದ ಕಾರ್ಯಕ್ರಮವು ಶ್ರೀಯುತ ಡಾ|| ಮಧುಸೂದನ್ ಹವಾಲ್ದಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಗುರು ರಾಯರ ದರ್ಶನ ಶ್ರೀಪಾದಂಗಳವರ ಅನುಗ್ರಹವನ್ನು ಪಡೆದುಕೊಂಡು ಕೃತಾರ್ಥರಾದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೂ ಕೂಡ ಮಂತ್ರಾಲಯದ ಮಂತ್ರಾಕ್ಷತೆ ಮಂತ್ರಾಲಯದ ಪರಿಮಳ ಪ್ರಸಾದ ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Leave a comment

This site uses Akismet to reduce spam. Learn how your comment data is processed.