ಐಡಿಬಿಐ ಬ್ಯಾಂಕ್ ನಿಂದ ಐಡಿಬಿಐ ಚಿರಂಜೀವಿ ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ. ಬಿಡುಗಡೆ

ಐಡಿಬಿಐ ಬ್ಯಾಂಕ್ ತನ್ನ `ಐಡಿಬಿಐ ಚಿರಂಜೀವಿ ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ.’ ಎಂಬ ವಿಶೇಷ ನಿಶ್ಚಿತ ಠೇವಣಿ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು ಇದು 80 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರ ಹಣಕಾಸು ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ. ಈ ಉಪಕ್ರಮವು ಸಾಮಾನ್ಯ ನಿಶ್ಚಿತ ಠೇವಣಿಗಿಂತ ಹೆಚ್ಚುವರಿ 65 ಬೇಸಿಸ್ ಪಾಯಿಂಟ್(ಬಿಪಿಎಸ್) ಗಳು ಮತ್ತು ಹಿರಿಯ ನಾಗರಿಕರ ದರಗಳಿಗಿಂತ 15 ಬೇಸಿಸ್ ಪಾಯಿಂಟ್(ಬಿಪಿಎಸ್) ಗಳನ್ನು ನೀಡುತ್ತದೆ.
ಈ ಕೊಡುಗೆಯ ಪ್ರಮುಖಾಂಶಗಳು ಹೀಗಿವೆ:
ಗರಿಷ್ಠ ಬಡ್ಡಿದರ: 555 ದಿನಗಳ ಅವಧಿಗೆ ವಾರ್ಷಿಕ ಬಡ್ಡಿದರ ಶೇ.8.05
ಇತರೆ ಅವಧಿಯ ದರಗಳು:
o 375 ದಿನಗಳಿಗೆ ವಾರ್ಷಿಕ ಶೇ.7.90
o 444 ದಿನಗಳಿಗೆ ವಾರ್ಷಿಕ ಶೇ.8.00
o 700 ದಿನಗಳಿಗೆ ವಾರ್ಷಿಕ ಶೇ.7.85
ಐಡಿಬಿಐ ಲಿಮಿಟೆಡ್ ಡೆಪ್ಯುಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುಮಿತ್ ಫಕ್ಕ, “ನಾವು ಹಿರಿಯ ನಾಗರಿಕರ ವಿಶಿಷ್ಟ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು `ಐಡಿಬಿಐ ಚಿರಂಜೀವಿ-ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ.’ ಉತ್ಪನ್ನವನ್ನು ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಈ ಕೊಡುಗೆಯು ಅತ್ಯಂತ ಗೌರವಾನ್ವಿತ ವರ್ಗಕ್ಕೆ ಸುರಕ್ಷಿತ ಮತ್ತು ಭದ್ರತೆಯ ಹೂಡಿಕೆಯ ಆಯ್ಕೆ ನೀಡುವ ಮೂಲಕ ಅವರ ಹಣಕಾಸು ಭದ್ರತೆ ಮತ್ತು ಮನಃಶಾಂತಿ ನೀಡುತ್ತದೆ” ಎಂದರು.

City Today News 9341997936

Leave a comment

This site uses Akismet to reduce spam. Learn how your comment data is processed.