ಡಿಜಿಟಲ್ ಮಣ್ಣಿನ ನಕ್ಷೆ: ಕೃಷಿ ಮತ್ತು ಪರಿಸರ ಸುಸ್ಥಿರತೆಗೆ ಹೊಸ ಯುಗಜನವರಿ 21-24, ಬೆಂಗಳೂರು

ಬೆಂಗಳೂರು: 2025ರ ಜನವರಿ 21ರಿಂದ 24ರವರೆಗೆ ಬೆಂಗಳೂರಿನಲ್ಲಿ ಡಿಜಿಟಲ್ ಮಣ್ಣಿನ ನಕ್ಷೆ (DSM) ಕುರಿತು ಅಂತರರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮವು ಜಾಗತಿಕ ತಜ್ಞರು, ಸಂಶೋಧಕರು, ನೀತಿ ನಿರೂಪಕರು, ರೈತರು ಹಾಗೂ ಉದ್ಯಮಗಳನ್ನು ಒಟ್ಟುಗೂಡಿಸುವ ಮೂಲಕ ಜ್ಞಾನ ವಿನಿಮಯಕ್ಕೆ ವೇದಿಕೆಯಾಗಲಿದೆ.

ಸಮ್ಮೇಳನದ ಮುಖ್ಯ ಉದ್ದೇಶಗಳು:
DSM ತಂತ್ರಜ್ಞಾನವು ಕೃಷಿ, ಪರಿಸರ ಸುಸ್ಥಿರತೆ ಮತ್ತು ಭೂ ಬಳಕೆಯ ಯೋಜನೆಗೆ ಕ್ರಾಂತಿಕಾರಿಯಾಗಿ ಎದ್ದು ಬರುತ್ತಿದೆ. ಉಪಗ್ರಹ ಚಿತ್ರಣ, ಯಂತ್ರ ಕಲಿಕೆ, ಮತ್ತು ಪ್ರಯೋಗಾಲಯದ ದತ್ತಾಂಶದ ನೆರವಿನಿಂದ ಮಣ್ಣಿನ ನಿಖರ ನಕ್ಷೆಗಳನ್ನು ಸಿದ್ಧಪಡಿಸುವ ಈ ತಂತ್ರಜ್ಞಾನವು, ಮಣ್ಣಿನ ಗುಣಲಕ್ಷಣಗಳ ಮೇಲೆ ಆಧಾರಿತ ನಿರ್ಧಾರಗಳನ್ನು ಸುಲಭಗೊಳಿಸುತ್ತದೆ.

ರೈತರಿಗೆ DSM ತಂತ್ರಜ್ಞಾನದಿಂದ ಲಾಭ:

ಮಣ್ಣಿನ ಗುಣಲಕ್ಷಣಗಳ ನಿರ್ಧಾರ: ಪೋಷಕಾಂಶಗಳು, ರಸಸಾರ ಮತ್ತು ಮಣ್ಣಿನ ವಿನ್ಯಾಸ ತಿಳಿಯಲು ಸಹಾಯ.

ರಸಗೊಬ್ಬರ ಬಳಕೆಯ ಶ್ರೇಯಸ: ಸರಿಯಾದ ಪ್ರಮಾಣದ ರಸಗೊಬ್ಬರ ಬಳಸಿ ವೆಚ್ಚ ತಗ್ಗಿಸುವಿಕೆ ಮತ್ತು ಪರಿಸರ ಹಾನಿ ತಪ್ಪಿಸುವಿಕೆ .

ಬೆಳೆ ಆಯ್ಕೆ ಸುಧಾರಣೆ: ಮಣ್ಣಿನ ಪರಿಸರಕ್ಕೆ ಹೊಂದುವ ಬೆಳೆಗಳನ್ನು ಆರಿಸಲು ಮಾರ್ಗದರ್ಶನ.

ನೀರು ಸಂರಕ್ಷಣೆ: ಸಮರ್ಥ ನೀರಾವರಿ ಪದ್ಧತಿಗಳನ್ನು ಅಳವಡಿಸಲು ಸಹಾಯ.

ಮಣ್ಣಿನ ಅವನತಿ ತಡೆ: ದೀರ್ಘಕಾಲೀನ ಮಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಕ್ರಮ.


ಇತರ ಕ್ಷೇತ್ರಗಳಿಗೆ ಪರಿಣಾಮ:

ನೀತಿ ನಿರೂಪಕರು: ಸುಧಾರಿತ ಭೂ ನಿರ್ವಹಣೆ ನೀತಿಗಳ ರಚನೆಗೆ ದತ್ತಾಂಶ ಆಧಾರಿತ ಮಾರ್ಗ.

ಕೃಷಿ ಉದ್ಯಮಗಳು: ನಿಖರ ಕೃಷಿ ಪರಿಹಾರಗಳ ಅಭಿವೃದ್ಧಿ.

ಪರಿಸರ ತಜ್ಞರು: ಕಾರ್ಬನ್ ಸೀಕ್ವೆಸ್ಟೇಶನ್ ಮತ್ತು ಭೂಸಂರಕ್ಷಣೆ.


ಕಾರ್ಯಾಗಾರದ ಹೈಲೈಟ್ಸ್:

ಪ್ರಮುಖ ಭಾಷಣಗಳು ಮತ್ತು ತಾಂತ್ರಿಕ ಚರ್ಚೆಗಳು.

ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ತರಬೇತಿಗಳು.

ಭಾರತೀಯ ಮತ್ತು ಜಾಗತಿಕ ವಿದ್ಯಮಾನಗಳ ಅಧ್ಯಯನ.


ಭಾರತದ ಕೃಷಿಗೆ ಪ್ರಭಾವ:
DSM ತಂತ್ರಜ್ಞಾನವು ಮಣ್ಣಿನ ಫಲವತ್ತತೆಯ ಸುಧಾರಣೆ, ನಿಖರ ಕೃಷಿ, ಮತ್ತು ಹಾನಿಗೊಳಗಾದ ಭೂಮಿಯ ಮರುಸ್ಥಾಪನೆಗೆ ಸಹಕಾರಿಯಾಗುತ್ತದೆ.

ನಿಮ್ಮ ಆಹ್ವಾನ:
ಇದು ಕೇವಲ ಸಮಾರಂಭವಷ್ಟೇ ಅಲ್ಲ, ಸುಸ್ಥಿರ ಕೃಷಿಯ ದೃಷ್ಟಿಕೋನದಿಂದ ಮಹತ್ವದ ಹೆಜ್ಜೆ. ರೈತರು, ತಜ್ಞರು, ಮತ್ತು ನೀತಿ ನಿರೂಪಕರಿಗೆ ಈ ಕ್ರಾಂತಿಕಾರಿ ವೇದಿಕೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ಜನವರಿ 21-24, ಬೆಂಗಳೂರು, ನಮ್ಮೊಂದಿಗೆ ಸೇರಿ, ಸುಸ್ಥಿರ ಕೃಷಿಯ ಭವಿಷ್ಯವನ್ನು ರೂಪಿಸಲು ಸಹಕರಿಸಿರಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ  ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936.

Leave a comment

This site uses Akismet to reduce spam. Learn how your comment data is processed.