ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಭವ್ಯ ಪರಂಪರೆಯ ಪೂರ್ವಿಕ ಗುರುಗಳಾದ ಶ್ರೀನರಹರಿತೀರ್ಥರ ಆರಾಧನಾ ಮಹೋತ್ಸವ

ಶ್ರೀಮಾನ್ಮೂಲರಾಮ ದೇವರನ್ನು ಮೂಲಮಹಾ ಸಂಸ್ಥಾನಕ್ಕೆ ಕರೆತಂದ ಮಹನೀಯ ಚರಣರಾದ, ಶ್ರೀಮಧ್ವಾಚಾರ್ಯರ ಶಿಷ್ಯರಾದ ಶ್ರೀ ನರಹರಿ ತೀರ್ಥರ ಆರಾಧನೆಯನ್ನು  ಶ್ರೀಮಧ್ವಾಚಾರ್ಯರ ಮೂಲಮಹಾ ಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ವೈಭವದಿಂದ ಶಿಷ್ಯ ಪರಿವಾರ ಸಮೇತರಾಗಿ ಆಚರಿಸಲಿದ್ದಾರೆ. 

ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ನಗರಗಳಿಂದ ಶ್ರೀಮಠದ ಶಿಷ್ಯರೂ, ಶ್ರಿವ್ಯಾಸರಾಜ ಮಠ, ಶ್ರೀಪಾದರಾಜಮಠದ ಶಿಷ್ಯರನ್ನು ಒಳಗೊಂಡು ಅನೇಕ ನಿಷ್ಠಾವಂತ ಮಾಧ್ವರೆಲ್ಲರೂ ತೆರಳುತ್ತಿದ್ದಾರೆ.

ಜಯನಗರದ 5th block ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದಲೂ ವಿವಿಧ ವಾಹನಗಳ ಮೂಲಕ ಯುವ ಸಮೂಹವು ಈಗಾಗಲೇ ಹೊರಟಿದ್ದಾರೆ.

ನಾಡಿನ ವಿವಿಧ ನಗರಗಳಲ್ಲಿರುವ ಶ್ರೀಮಠದ ಶಿಷ್ಯರು, ಭಕ್ತರು ಎಲ್ಲರೂ ಶ್ರೀ ನರಹರಿ ತೀರ್ಥರ ಈ ಐತಿಹಾಸಿಕ ಆರಾಧನೆಯಲ್ಲಿ ಪಾಲ್ಗೊಂಡು ಶ್ರೀಮನ್ ಮೂಲರಾಮದೇವರ, ಶ್ರೀ ನರಹರಿ ತೀರ್ಥರ ಹಾಗು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹವನ್ನು ಪಡೆಯಬೇಕು. ಎಲ್ಲರಿಗೂ ಸ್ವಾಗತ..

City Today News 9341997936

Leave a comment

This site uses Akismet to reduce spam. Learn how your comment data is processed.