ಸ್ವತಂತ್ರ ಸಂಘಟನೆಯ ಹೋರಾಟ ಫಲಕಾರಿಯಾಗಿತು: ಬೇಸಿಗೆ ರಜೆ ವಿಸ್ತರಣೆ ಮತ್ತು ಕನಿಷ್ಠ ವೇತನ ಭರವಸೆ

ಬೆಂಗಳೂರು:
ಸ್ವತಂತ್ರ ಸಂಘಟನೆಯ ಹೋರಾಟವು ಮಹತ್ವಪೂರ್ಣ ಫಲಿತಾಂಶಗಳನ್ನು ಪಡೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದ ಸಂಘಟನೆ ಅವರು ಸಾಧಿಸಿರುವ ಜಯಗಳು ಹೀಗಿವೆ:

1️⃣ ಮೈನ್ ಅಂಗನವಾಡಿ ಹಾಗೂ ಬೇಸಿಗೆ ರಜೆ ವಿಸ್ತರಣೆ: ಬೇಸಿಗೆ ರಜೆಯನ್ನು ಇತ್ತೀಚೆಗೆ 15 ದಿನಗಳಿಂದ 1 ತಿಂಗಳಿಗೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಮಿನಿ ಇಂದ ಮೈನ್ ಅಂಗನವಾಡಿ ಹಾಗೂ 1 ತಿಂಗಳ ಆದೇಶ ಪ್ರತಿ ಅನ್ನು ಸಂಘಟನೆಯ ಹೋರಾಟದ ಸಿಕ್ಕ ಪಲವಾಗಿದೆ

2️⃣ ಕನಿಷ್ಠ ವೇತನ ಭರವಸೆ: ಸರ್ಕಾರದ ಬಜೆಟ್‌ನಲ್ಲಿ ಸಂಘಟನೆಯ ಹೋರಾಟದಂತೆ ಕನಿಷ್ಠ ವೇತನವನ್ನು ಘೋಷಣೆ ಮಾಡಲಾಗುವುದು ಎಂಬ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೋನ್ ಮೂಲಕ ಸಂಘಟನೆಗೆ ತಿಳಿಸಿದ್ದಾರೆ.

ಹೋರಾಟ ತಾತ್ಕಾಲಿಕ ವಿರಾಮ:
ಈ ಭರವಸೆಯ ಹಿನ್ನೆಲೆಯಲ್ಲಿ, ಸಂಘಟನೆಯು ತಮ್ಮ ಹೋರಾಟವನ್ನು ಬಜೆಟ್ ಪ್ರಕಟಣೆ ನಂತರಕ್ಕೆ ಮುಂದೂಡಲು ನಿರ್ಧರಿಸಿದೆ. ಸಂಘಟನೆಯು ಈ ಹೋರಾಟದ ಸಮಯದಲ್ಲಿ ತಮ್ಮ ಜೊತೆಗೆ ನಿಂತಿರುವ ಎಲ್ಲರನ್ನು ಧನ್ಯವಾದದೊಂದಿಗೆ ನೆನೆಸಿದೆ.

ಪತ್ರಿಕಾ ಮಾಧ್ಯಮದ ಧನ್ಯವಾದ:
“ನಮ್ಮ ಹೋರಾಟವನ್ನು ಬೆಳಗಿಸಿದ ಪತ್ರಿಕಾ ಮಾಧ್ಯಮದ ಎಲ್ಲಾ ಸಹೋದ್ಯೋಗಿಗಳಿಗೆ ನಾವು ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಹಗಲು-ರಾತ್ರಿ ನಮ್ಮ ಜೊತೆ ಇದ್ದು ನಮ್ಮ ಸಂಕಷ್ಟಗಳಿಗೆ ಸ್ಪಂದಿಸಿದ ನೀವು ನಮ್ಮ ಬಲವಂತ,” ಎಂದು ಸಂಘಟನೆಯ ಪ್ರತಿನಿಧಿಗಳು ಹೇಳಿದ್ದಾರೆ.

ಮುಂದಿನ ಹೋರಾಟಕ್ಕೆ ಸಹಕಾರವನ್ನು ವಿನಂತಿಸಿ:
ಸಂಘಟನೆ ಮುಂದಿನ ಹೋರಾಟಕ್ಕೂ ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಮುಂದುವರಿಸಲು ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ವಿನಂತಿಸಿದೆ.

– ಸ್ವತಂತ್ರ ಸಂಘಟನೆ

City Today News 9341997936

Leave a comment

This site uses Akismet to reduce spam. Learn how your comment data is processed.