ಸೈಂಟ್ ಯಶ್ ಪಬ್ಲಿಕ್ ಶಾಲೆಯ ‘ಯಶ್ ಪರ್ವ’ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಸೈಂಟ್ ಯಶ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವಾದ ‘ಯಶ್ ಪರ್ವ’ ಫೆಬ್ರವರಿ 1 ರಂದು ಶಾಲಾ ಆವರಣದಲ್ಲಿ ಭವ್ಯವಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳನ್ನು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಅಮೆರಿಕಾದ ಅಕ್ಕ ಒಕ್ಕೂಟದ ಮಾಜಿ ಅಧ್ಯಕ್ಷ ಡಾ. ಅಮರನಾಥ್ ಗೌಡ, ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ, ಎಸ್.ವಿ.ಇ. ಸಮೂಹದ ನಿರ್ವಾಹಕ ನಿರ್ದೇಶಕರಾದ ನವೀನ್ ಕೃಷ್ಣೇಗೌಡ, ಹಾಗೂ ಸೈಂಟ್ ಯಶ್ ಪಬ್ಲಿಕ್ ಶಾಲೆಯ ಸ್ಥಾಪಕ ಕಾರ್ಯದರ್ಶಿ ಜಯರಾಮಯ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ, ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಶಾಲೆಯ ಶೈಕ್ಷಣಿಕ ಮತ್ತು ಪಾಠ್ಯೇತರ ಸಾಧನೆಗಳ ಕುರಿತು ವಿವಿಧ ಪ್ರಸ್ತುತಿಗಳು ಕೂಡ ನಡೆಯಿತು. ಪೋಷಕರು ಮತ್ತು ಶಾಲಾ ಸಿಬ್ಬಂದಿಯ ಬಲವಾದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

City Today News 9341997936

Leave a comment

This site uses Akismet to reduce spam. Learn how your comment data is processed.