
ಬೆಂಗಳೂರಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಜ್ಞಾನುಸಾರವಾಗಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಟಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ( ಶ್ರೀ ನಾಗ ) ಅಂತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾoತರ್ಗತ ಶ್ರೀ ಸಂಕರ್ಷಣನನ್ನು ಸುವರ್ಣದ ತೊಟ್ಟಿನಲ್ಲಿ ಪ್ರತಿಷ್ಠಾಪಿಸಿ ವಿಶೇಷ ಅರ್ಚನೆಯೊಂದಿಗೆ ಶ್ರೀ ಸುಬ್ರಹ್ಮಣ್ಯ ಆರಾಧನೆ ಮತ್ತು ವಟುಗಳ ಬ್ರಹ್ಮಚಾರಿಗಳ “ಆರಾಧನಾ” ಮಹೋತ್ಸವವನ್ನು ಆಚಾರ್ಯರಾದ ಜಿ , ಕೆ ಆಚಾರ್ಯರು ನೆರವೇರಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಆಚಾರ್ಯ ನಾಗರಾಜು ಹಾವೇರಿ ಮತ್ತು ಸೇವಾ ಕರ್ತೃಗಳು ಹಾಗೂ ಭಕ್ತರು ಶ್ರೀ ಮಠದ ಸಿಬ್ಬಂದಿಗಳು ಭಾಗವಹಿಸಿ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾದರು.
City Today News 9341997936
