
ಬೆಂಗಳೂರು: ರಮಾಬಾಯಿ ಅಂಬೇಡ್ಕರ್ ಅವರ 127ನೇ ಜಯಂತ್ಯೋತ್ಸವದ ಅಂಗವಾಗಿ ಖ್ಯಾತ ರಾಷ್ಟ್ರೀಯ ಗಾಯಕ ಡಾ. ಅನಿರುದ್ ವನಕರ್ ಕನ್ನಡದಲ್ಲಿ ಹಾಡಲಿರುವ ವಿಶೇಷ ಧ್ವನಿ ಸುರಳಿ ಕಾರ್ಯಕ್ರಮ ಫೆಬ್ರವರಿ 7, 2025, ಶುಕ್ರವಾರ, ಸಂಜೆ 3 ಗಂಟೆಗೆ ಬೆಂಗಳೂರು ಬಿ.ಬಿ.ಎಂ.ಪಿ ಪುರಭವನ್ ಹಾಲ್ನಲ್ಲಿ ನಡೆಯಲಿದೆ.
ಈ ಬಗ್ಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಯುಷ್ಮಾನ್ ಸುರೇಶ ಕಾಣೆಕರ್ ಮತ್ತು ಸುರೇಶ ಮೊರೆ ಅವರು ಅಧಿಕೃತ ಪ್ರಕಟಣೆ ಮಾಡಿದರು.
ಈ ಸಂಗೀತ ಕಾರ್ಯಕ್ರಮ ಭೀಮಜ್ಯೋತಿ ಪರಂಪರೆಯ ಸ್ಮರಣಾರ್ಥ ಆಯೋಜಿಸಲಾಗಿದ್ದು, ಡಾ. ಅನಿರುದ್ ವನಕರ್ ಕನ್ನಡದಲ್ಲಿ ಹಾಡುವ ಈ ಪ್ರಸ್ತುತಿಯ ಮೂಲಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ, ಆದರ್ಶ ಹಾಗೂ ಸಮಾಜ ಪರಿವರ್ತನೆಯ ಸಂದೇಶವನ್ನು ತಲುಪಿಸುವ ಉದ್ದೇಶ ಹೊಂದಿದೆ.
ಅಭಿಮಾನಿಗಳು, ಕಲಾಪ್ರೇಮಿಗಳು ಹಾಗೂ ಅಂಬೇಡ್ಕರ್ ಅನುಯಾಯಿಗಳಿಗೆ ಇದು ಅಪರೂಪದ ಸಂಗೀತ ಕಾರ್ಯಕ್ರಮವಾಗಲಿದೆ.
City Today News 9341997936
