
ಬೆಂಗಳೂರು: ನಗರದಲ್ಲಿ ಭೂ ಪರಿವರ್ತನೆ ಮತ್ತು ನಕಲಿ ದಾಖಲೆಗಳ ಸೃಷ್ಟಿ ಮೂಲಕ ಜಮೀನು ವಂಚನೆ ನಡೆಯುತ್ತಿದೆ ಎಂಬ ಆರೋಪ ಹೊರಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ರಿ) ಸಂಘಟನೆ ಜನವರಿ 4, 2025, ಬೆಳಗ್ಗೆ 11:30 ಗಂಟೆಗೆ ಕೆ.ಆರ್.ಪುರಂ ತಹಸೀಲ್ದಾರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಿದೆ.
ಪ್ರಕರಣದ ಹಿನ್ನಲೆ:
ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಮುನ್ನಕೊಳ್ಳಲ ಸರ್ವೇ ನಂ. 116 ರಲ್ಲಿ 37 ಗುಂಟೆ ಭೂಮಿಗೆ ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ ಅನುಮೋದನೆ ದೊರೆತಿದ್ದು, ಆದರೆ ಇದರ ಪಾರವಿಲ್ಲದೆ 120 ನಿವೇಶನಗಳನ್ನು ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜಿಲ್ಲಾ ಉಪವಿಭಾಗಾಧಿಕಾರಿಗಳು ಈ ಪ್ರದೇಶವನ್ನು ಅನಧಿಕೃತ ಬಡಾವಣೆ ಎಂದು ವರದಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಪ್ರತಿಭಟನೆಯ ಉದ್ದೇಶ:
ನಕಲಿ ದಾಖಲೆಗಳ ಮೂಲಕ ಜಮೀನು ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ.
ಅನಧಿಕೃತವಾಗಿ ಪರಿವರ್ತಿತಗೊಂಡ ಭೂಮಿಯ ಪರಿಶೀಲನೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸಿ.
ಸರ್ವೇ ನಂ. 116 ರಲ್ಲಿರುವ 10 ಎಕರೆ 26 ಗುಂಟೆ ದಲಿತರಿಗೆ ಸೇರಿದ ಜಮೀನು ತಕ್ಷಣ ಸರ್ವೇ ಮಾಡಿ, ದಲಿತರಿಗೆ ನ್ಯಾಯ ಒದಗಿಸಬೇಕು.
ತಹಸೀಲ್ದಾರರು ಈ ಕುರಿತು ವಿಳಂಬ ಮಾಡುತ್ತಿರುವುದರಿಂದ, ಅವರ ವಿರುದ್ಧ ಕೂಡ ಕ್ರಮ ಜರುಗಿಸಬೇಕು.
ಸಂಘಟನೆಯ ಹಕ್ಕೊತ್ತಾಯ:
ಈ ಬಗ್ಗೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ರಿ) ಸಂಸ್ಥಾಪಕ ಅಧ್ಯಕ್ಷರು ಮಾತನಾಡಿ, “ಈ ಅಕ್ರಮ ಭೂ ವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿ, ದಲಿತರಿಗೆ ಸೇರಿದ ಜಮೀನು ಮರುಪಡೆಯಲು ಸಹಾಯ ಮಾಡಬೇಕು” ಎಂದು ಒತ್ತಾಯಿಸಿದರು.
ಈ ವಿಷಯದಲ್ಲಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆ ಕ್ರಮ ಕೈಗೊಂಡಿಲ್ಲದೆ ಇದ್ದರೆ ಮುಂದಿನ ಹಂತದಲ್ಲಿ ಇನ್ನಷ್ಟು ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂದೇಶ್ ಸಂಸ್ಥಾಪಕರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಸ್ಥಳ:
➡ ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು.
➡ ದಿನಾಂಕ: 05.03.2025
➡ ಸಮಯ: ಬೆಳಿಗ್ಗೆ 11:30
– ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಪ್ರಕಟಣೆ
City Today News 9341997936
