• ಖಾಸಗಿ, ಸಾರ್ವಜನಿಕ ಮತ್ತು ಸಹಕಾರ ಬ್ಯಾಂಕ್ ಗಳು ಮತ್ತು ಭಾರತದಾದ್ಯಂತ ಎನ್.ಬಿ.ಎಫ್.ಸಿ.ಗಳ 100ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೊಹಾಲಿ, ಫೆಬ್ರವರಿ ೦೩, ೨೦೨೫: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಹಾಗೂ ಭಾರತ ಸರ್ಕಾರದ ಸೆಂಟ್ರಲ್ ರಿಜಿಸ್ಟ್ರಿ ಆಫ್ ಸೆಕ್ಯುರಿಟೈಸೇಷನ್ ಅಸೆಟ್ ರೀಕನ್ಸ್ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟ್ರೆಸ್ಟ್ (CERSAI) ಒಂದು ದಿನದ ಸೆಂಟ್ರಲ್ ಕೆ.ವೈ.ಸಿ. ರೆಕಾರ್ಡ್ ರಿಜಿಸ್ಟ್ರಿ (CKYCRR) ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದವು.
ಈ ಕಾರ್ಯಕ್ರಮದ ಉದ್ದೇಶವು ನೋ ಯುವರ್ ಕ್ಲೈಂಟ್ (ಕೆ.ವೈ.ಸಿ.), ಆಂಟಿ ಮನಿ ಲಾಂಡರಿಂಗ್(ಎ.ಎಂ.ಎಲ್) ಮತ್ತು ಸಿ.ಕೆ.ವೈ.ಸಿ.ಆರ್.ಆರ್.ನಲ್ಲಿ ಲಭ್ಯವಿರುವ ಕೆ.ವೈ.ಸಿ. ಡೇಟಾದ ಬಳಕೆ ಕುರಿತಾದ ಸಮಗ್ರ ಒಳನೋಟಗಳನ್ನು ನೀಡುವುದು ಮತ್ತು ಸಿ.ಕೆ.ವೈ.ಸಿ.ಆರ್. ದತ್ತಾಂಶ ಬಳಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಯ ಮೂಲಕ ಸುರಕ್ಷಿತ ಮತ್ತು ಪಾರದರ್ಶಕ ಹಣಕಾಸು ವ್ಯವಸ್ಥೆ ಸೃಷ್ಟಿಸುವುದು ಮತ್ತು ವಂಚನೆ ಮತ್ತು ಸಂಪತ್ತಿನ ನಕಲೀಕರಣದ ತೊಂದರೆಗಳಿಂದ ಹಣಕಾಸು ಸಂಸ್ಥೆಗಳನ್ನು ರಕ್ಷಿಸುವ ಕುರಿತಾಗಿತ್ತು.
ಈ ಕಾರ್ಯಕ್ರಮದಲ್ಲಿ ಖಾಸಗಿ, ಸಾರ್ವಜನಿಕ ಮತ್ತು ಸಹಕಾರ ಬ್ಯಾಂಕ್ ಗಳು ಮತ್ತು ಅಖಿಲ ಭಾರತದ ಎನ್.ಬಿ.ಎಫ್.ಸಿ.ಗಳು ಒಳಗೊಂಡು ಭಾರತ ಸರ್ಕಾರ, ಹಣಕಾಸು ಸಚಿವಾಲಯ, ಭಾರತೀಯ ರಿಜರ್ವ್ ಬ್ಯಾಂಕ್ (ಆರ್.ಬಿ.ಐ.), ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್, ಸೆರ್ಸೈ(CERSAI) ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಭವೇಶ್ ಝವೇರಿ ಹಲವು ವರ್ಷಗಳಿಂದ ಸೆರ್ಸೈ ಡೇಟಾ ಮತ್ತು ಗ್ರಾಹಕರ ಕೆ.ವೈ.ಸಿ. ದಾಖಲೆಗಳ ಸಂಗ್ರಹಾಲಯವಾಗಿದೆ. ಈ ಸಂಸ್ಥೆಯು ಪ್ರಸ್ತುತ 7,000 ವರದಿ ಮಾಡುವ ಸಂಸ್ಥೆಗಳನ್ನು ಹೊಂದಿದ್ದು ಅವರೊಂದಿಗೆ ನೋಂದಣಿಯಾಗಿದ್ದು ಬಹುತೇಕ 100 ಕೋಟಿ ಗ್ರಾಹಕರನ್ನು ಹೊಂದಿದ್ದು ಅವುಗಳನ್ನು ಎಲ್ಲ ವರದಿ ಮಾಡುವ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾಗಿದೆ ಎಂದರು. ಅವರು ಸೆಂಟ್ರಲ್ ನೋ ಯುವರ್ ಕಸ್ಟಮರ್ (ಸಿ.ಕೆ.ವೈ.ಸಿ.) ಬಳಕೆಯಲ್ಲಿ ಬೆಂಬಲ ವಿಸ್ತರಿಸಿರುವುದಕ್ಕೆ ಆರ್.ಬಿ.ಐ.ಗೆ ಕೃತಜ್ಞತೆ ಸಲ್ಲಿಸಿದರು.

ಸೆರ್ಸೈ(CERSAI) ಎಂ.ಡಿ. ಮತ್ತು ಸಿಇಒ ಶ್ರೀ ಉಮೇಶ್ ಕುಮಾರ್ ಸಿಂಗ್ ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ಸಿ.ಕೆ.ವೈ.ಸಿ. ಅಡಿಯಲ್ಲಿ ಸೆರ್ಸೈಗೆ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತು ಗ್ರಾಹಕರ ಗುರುತಿಸುವಿಕೆಗೆ ಅದರ ಬಳಕೆಯನ್ನು ವಿವರಿಸಿದರು. ಅವರು ಗ್ರಾಹಕರು ಸ್ವತಃ ಅವರ ಮಿಸ್ಡ್ ಕಾಲ್ ಅಥವಾ ಕ್ರೆಸೈ ವೆಬ್ಸೈಟ್ ಮೂಲಕ ನಮೂದಿಸಲಾದ ಹಂತಗಳ ಮೂಲಕ ಸಿ.ಕೆ.ವೈ.ಸಿ. ಸಂಖ್ಯೆಯನ್ನು ಪಡೆಯುವ ವಿಧಾನವನ್ನು ಹಂಚಿಕೊಂಡರು. ಶ್ರೀ ಸಿಂಗ್ ಅವರು ಮೊಹಾಲಿಯ ಬ್ಯಾಂಕ್ ಹೌಸ್ ನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಎಚ್.ಡಿ.ಎಫ್.ಸಿ. ಬ್ಯಾಂಕ್ ಕೃತಜ್ಞತೆ ಸಲ್ಲಿಸಿದರು.
ಸೆರ್ಸೈಗೆ ದಾಖಲೆಗಳನ್ನು ಸಲ್ಲಿಸುವುದು ಒಳಗೊಂಡು ಇತರೆ ಕಾರ್ಯಾಚರಣೆಯ ಸಮಸ್ಯೆಗಳು ಕೆ.ವೈ.ಸಿ. ಎ.ಎಂ.ಎಲ್. ಕುರಿತು ಆರ್.ಬಿ.ಐ.ನಿಂದ ಹೊಚ್ಚಹೊಸ ಮಾಸ್ಟರ್ ಡೈರೆಕ್ಷನ್ ಕುರಿತಂತೆಯೂ ಚರ್ಚೆ ನಡೆಸಲಾಯಿತು ಮತ್ತು ಸ್ಪಷ್ಟೀಕರಣ ನೀಡಲಾಯಿತು.
City Today News 9341997936
