“ಬೆಂಗಳೂರಿನಲ್ಲಿ ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ 22ನೇ ರಾಷ್ಟ್ರೀಯ ಸಮ್ಮೇಳನ “

ಬೆಂಗಳೂರು, ಫೆಬ್ರವರಿ 12: ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ 22ನೇ ರಾಷ್ಟ್ರೀಯ ಸಮ್ಮೇಳನವು ದಿನಾಂಕ 19-02-2025, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಬೆಂಗಳೂರಿನ ಆನಂದ ರಾವ್ ವೃತ್ತದ ಹತ್ತಿರ ಇರುವ ಕೆ.ಇ.ಬಿ. ನೌಕರರ ಸಮುದಾಯ ಭವನದಲ್ಲಿ ನಡೆಯಲಿದೆ.

ಈ ಮಹತ್ವದ ಸಮ್ಮೇಳನವು ಒಕ್ಕೂಟದ ಅಧ್ಯಕ್ಷ ಕಾಂ. ಕೆ. ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನಿವೃತ್ತ ಬ್ಯಾಂಕ್ ಸಿಬ್ಬಂದಿಗಳಿಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ. ಕರ್ನಾಟಕದ ಎಲ್ಲಾ ನಿವೃತ್ತ ಸದಸ್ಯರು ಮತ್ತು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ವ್ಯವಸ್ಥಾ ವಿವರ:

ದಿನಾಂಕ 18-02-2025 ರಂದು ಪ್ರತಿನಿಧಿಗಳಿಗೆ ಹೋಟೆಲ್ ಮೋತಿಮಹಲ್ ಅಥವಾ ಸಂಘಟನೆಯು ನಿಗದಿಪಡಿಸಿದ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಇರಲಿದೆ.

ಸಮ್ಮೇಳನದ ದಿನ (19-02-2025) ಉಪಹಾರ, ಮಧ್ಯಾಹ್ನ ಭೋಜನ, ಲಘು ಉಪಹಾರ, ಕಾಫಿ, ಟೀ ಮುಂತಾದ ವ್ಯವಸ್ಥೆಗಳಿರುತ್ತವೆ.

ಪ್ರಯಾಣ ವೆಚ್ಚ ಯಾವುದೇ ರೀತಿಯೂ ನೀಡಲಾಗುವುದಿಲ್ಲ; ಪ್ರತಿನಿಧಿಗಳು ಸ್ವಂತ ಖರ್ಚಿನಲ್ಲಿ ಆಗಮಿಸಬೇಕು.

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ 10-02-2025ರ ಒಳಗಾಗಿ ಹಿಗ್ಗೆ ಸೂಚಿಸಲಾದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ಭಾಗವಹಿಸುವುದಾಗಿ ತಿಳಿಸಬೇಕು.


ಸಂಪರ್ಕಕ್ಕಾಗಿ:

ಕಾಂ. ಜಿ. ಅಜಯ್ ಕುಮಾರ್ – 9886731532

ಕಾಂ. ಕೆ. ಶ್ರೀನಿವಾಸ್ – 9620197026

ಕಾಂ. ಮಣಿ – 9742178107

ಕಾಂ. ಸಿ.ಎಸ್.ಎಸ್. ಮೂರ್ತಿ – 9980555533


ಈ ಕುರಿತು ಪ್ರಚಾರ ಸಮಿತಿಯ ಅಧ್ಯಕ್ಷ ಜಿ. ರಂಗಸ್ವಾಮಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.