
ಬೆಂಗಳೂರು: ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಪ್ರಸಿದ್ಧ ಕಲಾವಿದ ಚಿರಂಜೀವಿ ದೇವರಾತ್ ಜೋಷಿಗೆ “ಧ್ರುವ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಅವರು ಶ್ರೀ ಪ್ರಸನ್ನ ವೆಂಕಟರ ದಾಸರ ಚಲನಚಿತ್ರದಲ್ಲಿ ಅಭಿನಯಿಸಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಗೌರವಾನ್ವಿತ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಮಾಧವ ತೀರ್ಥ ಮಠದ ಶ್ರೀಪಾದರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯಮೂರ್ತಿ ಡಾ. ಶ್ರೀ ಸಂತೋಷ ಹೆಗಡೆ, ಡಾ. ಶ್ರೀ ಆರ್.ಕೆ. ಪದ್ಮನಾಭ, ಡಾ. ರಾಯಚೂರು ಶೇಷಗಿರಿ ದಾಸ್ ಉಪಸ್ಥಿತರಿದ್ದರು. ಜೊತೆಗೆ, ಶ್ರೀಮತಿ ಗೌರಿ ನಾಗರಾಜ್ ಮತ್ತು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಭಕ್ತಿಗೀತೆಗಳ ಪ್ರಸಾರ ಮತ್ತು ಭಕ್ತಿ ಪರಂಪರೆಯ ಉಳಿವಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿತ್ತು.
City Today News 9341997936
