
ಬೆಂಗಳೂರು, ಫೆಬ್ರವರಿ 16, 2025 – ಮಹಾ ಬೋಧಿ ಸೊಸೈಟಿ, ಬೆಂಗಳೂರು ಮತ್ತು ಇಂಟರ್‌ನ್ಯಾಷನಲ್ ತಿಪಿಟಕ ಚಾಂಟಿಂಗ್ ಕೌನ್ಸಿಲ್ ಸಹಯೋಗದಲ್ಲಿ, ಪವಿತ್ರ ತಿಪಿಟಕ ಸದ್ಧಮ್ಮ ಸಜ್ಜಾಯನ (ತಿಪಿಟಕ ಪಠಣ) ಕಾರ್ಯಕ್ರಮವು ಬೆಂಗಳೂರಿನ ಗಾಂಧೀನಗರದ ಮಹಾಬೋಧಿ ಸೊಸೈಟಿಯಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ 108 ಪೂಜ್ಯ ಭಿಕ್ಷುಗಳು ಪಾಲ್ಗೊಳ್ಳಲಿದ್ದು, ಭಗವಾನ್ ಬುದ್ಧರ ಪವಿತ್ರ ತಿಪಿಟಕ ಪಠಣ ನಡೆಸಲಿದ್ದಾರೆ. ಸಾವಿರಾರು ವರ್ಷಗಳ ಹಿಂದಿನಿಂದ ಬೋಧಗಯಾದ ಮಹಾಬೋಧಿ ಮಹಾವಿಹಾರದಲ್ಲಿ ನಿರಂತರವಾಗಿ ನಡೆದುಬಂದ ಈ ಪಠಣ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಪ್ರತಿ ವರ್ಷ ಚಳಿಗಾಲದ ತಿಂಗಳಿನಲ್ಲಿ ಈ ಪಠಣದ ಸರಣಿ ವಿಶ್ವದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ.

ಬೌದ್ಧ ಸಂಸ್ಕೃತಿಯ ಪುನರುಜ್ಜೀವನದ ಭಾಗವಾಗಿ, ಈ ದಕ್ಷಿಣ ಭಾರತೀಯ ತಿಪಿಟಕ ಪಠಣವು ವಿಶೇಷ ಗಮನ ಸೆಳೆದಿದೆ. ಭಿಕ್ಷು ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಈ ಮಹತ್ವದ ಧಾರ್ಮಿಕ ಸಮಾರಂಭದ ವಿವರಗಳನ್ನು ಹಂಚಿಕೊಳ್ಳಲಾಯಿತು.
ಭಗವಾನ್ ಬುದ್ಧರ ಪವಿತ್ರ ಪದಗಳನ್ನು ಸ್ವತಃ ಭಿಕ್ಷುಸಂಘದಿಂದ ಕೇಳುವ ಅಪರೂಪದ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9731635108
📞 8123420039
City Today News 9341997936
