
ಬೆಂಗಳೂರು: ಅಕ್ಷರ ಕಲ್ಬರಲ್ ಅಕಾಡೆಮಿ (ರಿ) ತನ್ನ 6ನೇ ವಾರ್ಷಿಕೋತ್ಸವವನ್ನು ಫೆಬ್ರವರಿ 17, 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಕಾರ್ಯಕ್ರಮ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ.
ಈ ವಿಶೇಷ ಸಂದರ್ಭದಲ್ಲಿ ಸಂಗೀತ, ಜಾನಪದ, ಯಕ್ಷಗಾನ, ಭರತನಾಟ್ಯ, ಡೊಳ್ಳು ಕುಣಿತ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಜೊತೆಗೆ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ “ಅಕ್ಷರ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದು, ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು ಘನಾಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಪ್ರಣಯ್ ರಾಜ್, ನಿರ್ದೇಶಕ ಎಸ್. ನಾರಾಯಣ್, ಮಾಜಿ ಮಹಾಪೌರರು ಶ್ರೀಮತಿ ಶಾಂತಾ ಕುಮಾರಿ, ನಿರ್ಮಾಪಕರಾದ ಶ್ರೀ ಸಾರಾ ಗೋವಿಂದ್, ಶಾಸಕ ಶ್ರೀ ಬಾಲಕೃಷ್ಣ ಹೆಚ್.ಸಿ. (ಮಾಗಡಿ), ಕನ್ನಡ ಹೋರಾಟಗಾರರು, ಶ್ರೀ ಎಂ.ಎನ್. ಸುರೇಶ್ (ಮಲ್ಲೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರು) ಮತ್ತು ಶ್ರೀ ಎಂ. ಶಿವರಾಜ್ (ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕರು) ಹಾಜರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಾಗರತ್ನ ಗೌರಿಪ್ರಸಾದ್, ಅಕ್ಷರ ಕಲ್ಬರಲ್ ಅಕಾಡೆಮಿಯ ಅಧ್ಯಕ್ಷರು, ವಹಿಸಲಿದ್ದಾರೆ.
ಈ ಭವ್ಯ ಸಂಭ್ರಮದಲ್ಲಿ ಭಾಗವಹಿಸಲು ಅಕ್ಷರ ಕಲ್ಬರಲ್ ಅಕಾಡೆಮಿ ಎಲ್ಲರನ್ನು ಆತ್ಮೀಯವಾಗಿ ಆಹ್ವಾನಿಸಿದೆ.
City Today News 9341997936
