
ಬೆಂಗಳೂರು: ಕನ್ನಡ ಸಂಸ್ಕೃತಿಯ ಅಭಿವೃದ್ದಿಗೆ ನಿಷ್ಠೆಯಾಗಿರುವ ಯುವ ಕರ್ನಾಟಕ ವೇದಿಕೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಫೆಬ್ರವರಿ 22, ಶನಿವಾರ ಸಂಜೆ 6 ಗಂಟೆಗೆ ಬ್ರಿಗೇಡ್ ರಸ್ತೆ, ವಾರ್ ಮೆಮೋರಿಯಲ್ ಬಳಿ ನಡೆಯಲಿರುವ ಈ ಸಂಭ್ರಮದಲ್ಲಿ ಕನ್ನಡತಿ ಕುಣಿತ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಯುವ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ, ಹಿರಿಯ ನಾಯಕ ದೊಮ್ಮಲೂರು ಸೀನಣ್ಣ, ಹಾಗೂ ರಾಜ್ಯ ಯುವ ಘಟಕ ಅಧ್ಯಕ್ಷ ನವೀನ್ ನರಸಿಂಹ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
“ಕನ್ನಡ ಕನ್ನಡಿಗ ಕರ್ನಾಟಕ” ಎಂಬ ಘೋಷವಾಕ್ಯದೊಂದಿಗೆ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಉಜ್ಜೀವನಗೊಳಿಸುವ ಈ ಮಹೋತ್ಸವಕ್ಕೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಆಹ್ವಾನಿಸಿದ್ದಾರೆ.
City Today News 9341997936
