
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಹೋಗಲು ಸಾಧ್ಯವಿಲ್ಲದ ಭಕ್ತಾದಿಗಳಿಗೆ ಅನುಕೂಲವಾಗುವಂತೆ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆಬ್ರವರಿ 23 ರಿಂದ 26 ರವರೆಗೆ ಭವ್ಯ “ಮಹಾಶಿವರಾತ್ರಿ – ಮಹಾಕುಂಭ ಉತ್ಸವ 2025” ಆಯೋಜಿಸಲಾಗಿದೆ.

ಈ ವಿಶೇಷ ಧಾರ್ಮಿಕ ಉತ್ಸವವು ಫೆಬ್ರವರಿ 23 ರಂದು ಸಂಜೆ 5 ಗಂಟೆಗೆ ಅಘೋರಿಗಳ ಸಾನಿಧ್ಯದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು, ಫೆಬ್ರವರಿ 27 ರ ಬೆಳಗ್ಗೆ 6 ಗಂಟೆಯವರೆಗೆ ಶಿವರಾತ್ರಿ ಆರಾಧನೆಯೊಂದಿಗೆ ಸಂಪನ್ನಗೊಳ್ಳಲಿದೆ.
ಪ್ರಮುಖ ವೈಶಿಷ್ಟ್ಯಗಳು:
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಪವಿತ್ರ ಜಲ ಸಂಪ್ರೋಕ್ಷಣೆ
108 ಭವ್ಯ ಕುಂಭಗಳಲ್ಲಿ ಪವಿತ್ರ ಜಲ ಪ್ರತಿಷ್ಠಾಪನೆ ಮತ್ತು ಪೂಜೆ
108 ಸ್ಪಟಿಕ ಶಿವಲಿಂಗ ಪೂಜೆ
6 ಅಡಿ ಮಹಾ ಕುಂಭಕ್ಕೆ ಪ್ರತಿ ಗಂಟೆಗೊಮ್ಮೆ ವಿಶೇಷ ಪೂಜೆ
ಮಹಾಮೃತ್ಯುಂಜಯ ಹೋಮ (ಪ್ರತಿ ದಿನ ಬೆಳಗ್ಗೆ 10 ರಿಂದ 12.30)
ನಾಗಸಾಧುಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು
ಪ್ರಸಿದ್ಧ ಹಾಸ್ಯ ಕಲಾವಿದ ಪ್ರಾಣೇಶ್ ಹಾಗೂ ತಂಡದಿಂದ ಹಾಸ್ಯ ಸಂಜೆ
ಸುಪ್ರಸಿದ್ಧ ಹಿನ್ನಲೆ ಗಾಯಕರಿಂದ ಭಕ್ತಿ ಸಂಗೀತ ಕಾರ್ಯಕ್ರಮ
ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಿಂದ ತರಲಾದ ಶಿವಲಿಂಗಗಳ ದರ್ಶನ ಭಾಗ್ಯ
ಲೋಕ ಕಲ್ಯಾಣಾರ್ಥವಾಗಿ 3 ದಿನಗಳ ಮಹಾ ಮೃತ್ಯುಂಜಯ ಹೋಮ
ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲೆ ಪ್ರಯತ್ನ

ಪ್ರಯಾಗ್‌ರಾಜ್‌ನಿಂದ ತರಲಾದ ಪವಿತ್ರ ಜಲವನ್ನು ಭಕ್ತಾದಿಗಳು ತಮ್ಮ ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಕೂಡ ಕಲ್ಪಿಸಲಾಗಿದೆ. ಮಹಾಶಿವರಾತ್ರಿಯಂದು ಈ ಜಲದಿಂದ ಶಾಹಿ ಸ್ನಾನ ಮಾಡಿ ಪುನೀತರಾಗಲು ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬಹುದು.

ಈ ಭವ್ಯ ಧಾರ್ಮಿಕ – ಸಾಂಸ್ಕೃತಿಕ ಉತ್ಸವವನ್ನು ಆಯುಷ್ ಟಿವಿ ಆಯೋಜಿಸಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ:
ಹರಿಕೃಷ್ಣ. ಎಂ – ವ್ಯವಸ್ಥಾಪಕ ನಿರ್ದೇಶಕರು, ಆಯುಷ್ ಟಿವಿ
📞 72599 63218 / 80500 32192
City Today News 9341997936
