
ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಭಾಷಾ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮುಸ್ಲಿಂ ಯಂಗ್ ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾದಾಪೀರ್, ಅಜ್ಮಲ್ ಅಹಮದ್ ಸೇರಿದಂತೆ ಮುಸ್ಲಿಂ ಯಂಗ್ ಅಸೋಸಿಯೇಷನ್ ಸದಸ್ಯರು, ಅನ್ವರ್ ಭಾಷಾ ಅವರು ಅಧಿಕಾರ ದುರ್ಬಳಕೆ, ಅಕ್ರಮಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಮುಖ ಆರೋಪಗಳು:
* ಭೂ ಕಬಳಿಕೆ:
* ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ಖಬರಸ್ತಾನ್ (ಸ್ಮಶಾನ) ಜಮೀನನ್ನು ಅನ್ವರ್ ಭಾಷಾ ಅವರು ತಮ್ಮ ಸ್ವಂತಕ್ಕೆ ಕಬಳಿಸಿಕೊಂಡು, ರಮೀಜಾ ಮೈನಾರಿಟಿ ವೆಲ್ಸ್‌ವೇರ್ ಟ್ರಸ್ಟ್ ಮೂಲಕ ಶಾಲಾ ಕಟ್ಟಡ ನಿರ್ಮಿಸಿದ್ದಾರೆ.
* ಚಿತ್ರದುರ್ಗದ ಬಳಿ ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ಮಂಜೂರಾದ ಭೂಮಿಯನ್ನು ವಕ್ಫ್ ಮಂಡಳಿ ಅಧ್ಯಕ್ಷರು ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
* ಚುನಾವಣಾ ಅಕ್ರಮಗಳು:
* ಇತ್ತೀಚೆಗೆ ನಡೆದ ವಕ್ಫ್ ಮಂಡಳಿ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ.
* ಅರ್ಹ ಮತದಾರರನ್ನು ಕೈಬಿಟ್ಟು, ಅನರ್ಹರಿಗೆ ಮತದಾನದ ಹಕ್ಕು ನೀಡಲಾಗಿದೆ.
* ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವ ಸಂಸ್ಥೆಗಳಿಗೂ ಮತದಾನದ ಹಕ್ಕು ನೀಡಲಾಗಿದೆ.
* ಅನುದಾನ ದುರ್ಬಳಕೆ:
* ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.
* 2014-15 ರಲ್ಲಿ ಚಿತ್ರದುರ್ಗ ಜಿಲ್ಲಾ ವಕ್ಸ್ ಮಂಡಳಿಯ ಅಧ್ಯಕ್ಷರಾದಂತಹ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಉಮೇನ್ ಪೌಂಡೇಷನ್ ವತಿಯಿಂದ ಮುಸ್ಲಿಂ ಸಮಾಜದ ಬಡ ಹೆಣ್ಣು ಮಕ್ಕಳಿಗೆ ನಾನಾ ತರಬೇತಿಗಳನ್ನು ಒದಗಿಸುವ ಸಲುವಾಗಿ ಸಹಾಯಧವನ್ನು ಎನ್.ಜಿ.ಓ.ಸಂಸ್ಥೆಗಳ ಮುಖಾಂತರ ಸುಮಾರು ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕೆ.ಅನ್ವರ್ ಬಾಷ ರವರು ತಮ್ಮ ವಂಶಸ್ಥರು, ಹಾಗೂ ತಮ್ಮ ಹಿಂಬಾಲಕರಿಗೆ ಎನ್.ಜಿ.ಓ.ಗಳ ಮುಖಾಂತರ ಹಣವನ್ನು ಬಿಡುಗಡೆ ಮಾಡಿಸಿ ತಮ್ಮ ಸ್ವಂತಕ್ಕಾಗಿ ಈ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಯಾವುದೇ ರೀತಿಯಾದಂತಹ ತರಬೇತಿ ಕೇಂದ್ರಗಳನ್ನು ತೆರೆದಿರುವುದಿಲ್ಲ.
* ಇತರ ಆರೋಪಗಳು:
* ಚಿತ್ರದುರ್ಗದ ಮುಸ್ಲಿಂ ಹಾಸ್ಟೆಲ್ ಚುನಾವಣೆಯಲ್ಲಿ ಅಕ್ರಮ.
* ವಕ್ಫ್‌ಗೆ ಸೇರಿದ ಸಂಸ್ಥೆಗಳ ಆದಾಯ ವರದಿ ಆಡಿಟ್ ಮಾಡಿಸದಿರುವುದು.
ಮುಸ್ಲಿಂ ಯಂಗ್ ಅಸೋಸಿಯೇಷನ್ ಬೇಡಿಕೆಗಳು:
* ಅನ್ವರ್ ಭಾಷಾ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು.
* ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು.
* ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಈ ಆರೋಪಗಳ ಬಗ್ಗೆ ಅನ್ವರ್ ಭಾಷಾ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ನೀಡಲಾಗುವುದು.
City Today News 9341997936
