ಬೆಂಗಳೂರು, ಫೆ. 24: “ಲವ್ ಜಿಹಾದ್” ಎಂಬುದು ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಮೋಸದ ಜಾಲವಾಗಿದ್ದು, ಇದರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಶ್ರೀರಾಮ ಸೇನೆ (ರಿ) ಕರ್ನಾಟಕವು ಒತ್ತಾಯಿಸಿದೆ. ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

“ಲವ್ ಜಿಹಾದ್” ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಮುತಾಲಿಕ್, ಇಸ್ಲಾಂ ಧರ್ಮವು ಜನಸಂಖ್ಯೆ ಹೆಚ್ಚಿಸಲು, ಹಿಂದೂಗಳ ನೈತಿಕತೆ ಕುಸಿಯಲು, ವೇಶ್ಯಾವಾಟಿಕೆ, ಭಯೋತ್ಪಾದನೆ, ಕಳ್ಳತನ, ಮಾದಕ ವಸ್ತು ಸಾಗಾಣಿಕೆ, ಹನಿ ಟ್ರ್ಯಾಪ್, ಗಡಿಭಾಗ, ಸೈನ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ನುಸುಳಲು “ಲವ್ ಜಿಹಾದ್” ನಡೆಸುತ್ತಿದೆ ಎಂದು ಆರೋಪಿಸಿದರು.
“ಇದು ಪ್ರೀತಿಯಲ್ಲ, ಸುಳ್ಳು, ಮೋಸ ಮತ್ತು ಷಡ್ಯಂತ್ರ. ಹಿಂದೂ ಹೆಸರಿನಲ್ಲಿ 62% ಲವ್ ಜಿಹಾದ್ ಪ್ರಕರಣಗಳು ನಡೆದಿವೆ. ಮದುವೆಯಾಗದಿದ್ದುದಕ್ಕೆ, ಗೋಮಾಂಸ ತಿನ್ನದೇ ಇದ್ದುದಕ್ಕೆ, ಬುರ್ಖಾ ಹಾಕದೇ ಇದ್ದುದಕ್ಕೆ, ನಮಾಜ ಮಾಡದೇ ಇದ್ದುದಕ್ಕೆ 81% ಕೊಲೆಗಳು ನಡೆದಿವೆ. 2022-2023 ರಲ್ಲಿ 153 ಬರ್ಬರ ಕೊಲೆಗಳು ನಡೆದಿವೆ. 2023 ರಲ್ಲಿ 436 ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ” ಎಂದು ಅವರು ಅಂಕಿ ಅಂಶಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಸರ್ಕಾರ ಕೂಡಲೇ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು:
* ಪೊಲೀಸ್ ಇಲಾಖೆಯಲ್ಲಿ “ಲವ್ ಜಿಹಾದ್” ಕುರಿತ ದೂರುಗಳನ್ನು ತಕ್ಷಣ ಸ್ವೀಕರಿಸಬೇಕು.
* “ಲವ್ ಜಿಹಾದ್” ಪ್ರಕರಣಗಳನ್ನು ತುರ್ತು ನ್ಯಾಯಾಲಯಗಳ ಮೂಲಕ ನಾಲ್ಕು ತಿಂಗಳೊಳಗೆ ಇತ್ಯರ್ಥಗೊಳಿಸಿ ಶಿಕ್ಷೆ ನೀಡಬೇಕು.
* ಮುಸ್ಲಿಂ ಮುಖಂಡರು ತಮ್ಮ ಯುವಕರಿಗೆ “ಲವ್ ಜಿಹಾದ್” ಕುರಿತು ಎಚ್ಚರಿಕೆ ನೀಡಬೇಕು.
* ಸರ್ಕಾರವು ತಕ್ಷಣ “ಲವ್ ಜಿಹಾದ್” ಕಾನೂನನ್ನು ಜಾರಿಗೆ ತರಬೇಕು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್, ಲೇಖಕರಾದ ಆಗುಂಬೆ ನಟರಾಜ್, ಭವ್ಯ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.
City Today News 9341997936
