
ಬೆಂಗಳೂರು: ತುಳು ಮತ್ತು ಕನ್ನಡ ಸಂಸ್ಕೃತಿಯ ಸೊಗಡನ್ನು ತಲುಪಿಸುವ ಹೊಸ ಸಂಗೀತ ಆಲ್ಬಮ್ “ತುಳುನಾಡಿನ ಉಸಿರು” ಮಾರ್ಚ್ 2, 2025 ರಂದು ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಈ ಹಾಡನ್ನು ಜನಪ್ರಿಯ ಗಾಯಕ ನಿತೇಶ್ ಕೋಟ್ಯಾನ್ ಹಾಡಿದ್ದಾರೆ, ಹಾಗೂ ವಿವಿಯನ್ ಡಿ ಸೌಜಾ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ.
ಈ ಆಲ್ಬಮ್ ಹಾಡಿಗೆ ಎಲ್ಟನ್ ಮಸ್ಕರೇನ್ಹಾಸ್ ಮತ್ತು ನಿತೇಶ್ ಕೋಟ್ಯಾನ್ ನಿರ್ದೇಶನ ನೀಡಿದ್ದಾರೆ. ಈ ಹಾಡು ತುಳುನಾಡಿನ ಪರಂಪರೆ, ಸಂಸ್ಕೃತಿ ಮತ್ತು ಭಾವನೆಗಳನ್ನು ಪ್ರತಿಬಿಂಬಿಸುವುದಾಗಿ ತಂಡದವರು ತಿಳಿಸಿದ್ದಾರೆ.

ಈಗಾಗಲೇ ಈ ಹಾಡಿನ ಪೋಸ್ಟರ್ ಮತ್ತು ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಂಗೀತ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. “ತುಳುನಾಡಿನ ಉಸಿರು” ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ತಕ್ಷಣವೇ ಶೋತ್ರರು ಇದರ ಅನುಭವ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ, ನಿತೇಶ್ ಕೋಟ್ಯಾನ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸೋಷಿಯಲ್ ಮೀಡಿಯಾ ಪುಟಗಳನ್ನು ಅನುಸರಿಸಬಹುದು.
City Today News 9341997936
