
ಜಯನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ “ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಜೀವನ ಚರಿತ್ರೆ” ಪ್ರವಚನ ಮಾಲೆ
ಬೆಂಗಳೂರು, ಮಾರ್ಚ್ 3, 2025: ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ “ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಜೀವನ ಚರಿತ್ರೆ” ಪ್ರವಚನ ಮಾಲೆ ನಡೆಯಲಿದೆ. ಡಾ. ವೇಂಕಟನರಸಿಂಹಾಚಾರ್ಯರು ಈ ಪ್ರವಚನವನ್ನು ನೀಡಲಿದ್ದು, ರಾಯರ ಭಕ್ತಿ, ತತ್ವ, ಆದರ್ಶ, ಮತ್ತು ಅವರ ಜೀವನದಲ್ಲಿ ನಡೆದ ಮಹತ್ವದ ಘಟನೆಗಳನ್ನು ವಿಶ್ಲೇಷಿಸಿ ಭಕ್ತರಿಗೆ ಆಧ್ಯಾತ್ಮಿಕ ಅರಿವು ಮೂಡಿಸಲಿದ್ದಾರೆ.
ಸಂಧ್ಯದ ಪ್ರಾರ್ಥನೆಗಿಂತ ಮುನ್ನ ನಡೆಯುವ ಈ ಪ್ರವಚನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಕೃಪೆಯನ್ನು ಪಡೆಯಲು ಅವಕಾಶ ಕಲ್ಪಿಸಿಕೊಳ್ಳಲು ಮಠದ ಆಡಳಿತ ಸಮಿತಿ ವಿನಮ್ರ ವಿನಂತಿ ಸಲ್ಲಿಸಿದೆ.
City Today News 9341997936
