
ಬೆಂಗಳೂರು, ಮಾರ್ಚ್ 2025: ಮಹಿಳೆಯರ ಅನುಭವ, ದೃಷ್ಟಿಕೋನ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ‘ಅವಳ ಹೆಜ್ಜೆ’ ಸಂಸ್ಥೆ 2025ರ ಜೂನ್‌ನಲ್ಲಿ ಬೆಂಗಳೂರಿನಲ್ಲಿ ‘ಅವಳ ಹೆಜ್ಜೆ ಮಹಿಳಾ ಕಿರುಚಿತ್ರೋತ್ಸವ’ ಆಯೋಜಿಸುತ್ತಿದೆ. ಈ ಚಿತ್ರೋತ್ಸವವು ಮಹಿಳಾ ನಿರ್ದೇಶಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಲಿಂಗ ಸಮಾನತೆಯ ಬಗ್ಗೆ ಸಮಾಜದ ಧೋರಣೆಗಳನ್ನು ರೂಪಿಸಲು ವೇದಿಕೆ ಒದಗಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿದೆ.
ಪ್ರಮುಖ ಬಹುಮಾನಗಳು:
ಅತ್ಯುತ್ತಮ ಕಿರುಚಿತ್ರಕ್ಕೆ – ₹1,00,000 (ಒಂದು ಲಕ್ಷ) ನಗದು ಬಹುಮಾನ
ವಿಶೇಷ ವರ್ಗಗಳಲ್ಲಿ ತಲಾ ಬಹುಮಾನ – ₹10,000 (ಹತ್ತು ಸಾವಿರ)
ಅತ್ಯುತ್ತಮ ಜೀವನಚರಿತ್ರೆಯ ಚಿತ್ರ
ಅತ್ಯುತ್ತಮ ಅನಿಮೇಷನ್ ಚಿತ್ರ
ಅತ್ಯುತ್ತಮ ಮಕ್ಕಳ ಚಲನಚಿತ್ರ
ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ
ಅತ್ಯುತ್ತಮ ವಿದ್ಯಾರ್ಥಿನಿಯ ಚಿತ್ರ
ಅತ್ಯುತ್ತಮ ಕ್ರೀಡಾ ವಿಷಯದ ಚಿತ್ರ
ಅತ್ಯುತ್ತಮ ಸಂರಕ್ಷಣಾ ವಿಷಯದ ಚಿತ್ರ
ಅತ್ಯುತ್ತಮ ರಾಜಕೀಯ/ಪ್ರಜಾಪ್ರಭುತ್ವ ವಿಷಯದ ಚಿತ್ರ
ಅದರ ಜೊತೆಗೆ, ಉದಯೋನ್ಮುಖ ಮಹಿಳಾ ನಿರ್ದೇಶಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ, ಚಿತ್ರ ನಿರ್ಮಾಣ ಅನುದಾನ ಯೋಜನೆ ಜಾರಿಗೊಳಿಸಲಾಗಿದೆ. ಆಯ್ಕೆಯಾದ ಚಿತ್ರಕಥೆಗೆ ₹1,00,000 (ಒಂದು ಲಕ್ಷ) ಅನುದಾನ ಕಂತುಗಳ ಮೂಲಕ ನೀಡಲಾಗುವುದು.
ಅರ್ಜಿ ಸಲ್ಲಿಕೆ ಹಾಗೂ ಪ್ರವೇಶ ಶುಲ್ಕ:
ಕಿರುಚಿತ್ರ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025
ಮಾರ್ಚ್ 31, 2025ರೊಳಗೆ ಸಲ್ಲಿಸಿದರೆ ಪ್ರವೇಶ ಶುಲ್ಕ: ₹0
ಏಪ್ರಿಲ್ 30, 2025ರೊಳಗೆ ಸಲ್ಲಿಸಿದರೆ ಪ್ರವೇಶ ಶುಲ್ಕ: ₹1,000
ಚಿತ್ರ ನಿರ್ಮಾಣ ಅನುದಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025 (ಪ್ರವೇಶ ಶುಲ್ಕ ₹1,000)
ಹೆಚ್ಚಿನ ಮಾಹಿತಿಗಾಗಿ:
ಆಸಕ್ತರು http://www.avalahejje.net ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ avalahejjefilms@gmail.com ಗೆ ಇಮೇಲ್ ಕಳಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಪ್ರಶ್ನೆಗಳಿಗೆ 8867747236 ಗೆ ವಾಟ್ಸಾಪ್ ಮಾಡಬಹುದು.
ಸಮಾನತೆಯತ್ತ ದಿಟ್ಟ ಹೆಜ್ಜೆಗಳನ್ನು ಇಡುವ ಮಹಿಳಾ ಕಿರುಚಿತ್ರೋತ್ಸವದಲ್ಲಿ ಭಾಗವಹಿಸಲು ಮುಂದಾಗಿರಿ!
City Today News 9341997936
